ನೂರು ಕಡೆಗಳಲ್ಲಿ ಇನ್ಸ್‌ಪೆಕ್ಟರ್ ವಿಕ್ರಂ ಕಟೌಟ್ಸ್
Team Udayavani, Jan 24, 2021, 10:32 AM IST
ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಫೆ.5ರಂದು ತೆರೆಕಾಣುತ್ತಿದೆ. ವರ್ಷದ ಮೊದಲ ಸ್ಟಾರ್ ಸಿನಿಮಾವಾಗಿ ಬರುತ್ತಿರುವ ಈ ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಕೂಡಾ ಹುಟ್ಟಿದೆ. ಆ್ಯಕ್ಷನ್ ಜೊತೆಗೆ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿ ಈ ಚಿತ್ರ ಪ್ರೇಕ್ಷಕರನ್ನು ರಂಜಿಸಲಿದೆ. ಈಗ ಚಿತ್ರ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯಲು ಹೊರಟಿದೆ. ಅದು ಕಟೌಟ್ ಮೂಲಕ.
ಹೌದು, “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ಕಟೌಟ್‌ಗಳು ಬೆಂಗಳೂರಿನ ಪ್ರಮುಖ 100 ಕಡೆಗಳಲ್ಲಿ ತಲೆ ಎತ್ತಲಿವೆ. ಈ ಮೂಲಕ ಸಿನಿಮಾ ಪ್ರೇಮಿಗಳ ಗಮನವನ್ನು ತನ್ನತ್ತ ಸೆಳೆಯಲಿದೆ. ಎಲ್ಲಾ ಓಕೆ, ಯಾವ್ಯಾವ ಕಡೆಗಳಲ್ಲಿ ಕಟೌಟ್‌ಗಳು ತಲೆ ಎತ್ತಲಿವೆ ಎಂದು ನೀವು ಕೇಳಬಹುದು. ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಾದ ಮೆಜೆಸ್ಟಿಕ್, ಲಾಲ್‌ಬಾಗ್, ಕಾರ್ಪೋರೇಶನ್, ಸೆಂಟ್ರಲ್ … ಹೀಗೆ ನಾನಾ ಕಡೆಗಳಲ್ಲಿ ಕಟೌಟ್ ನಿಲ್ಲಲಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ಓದಿ:ಟ್ರೇಲರ್‌ನಲ್ಲಿ ‘ರಾಮಾರ್ಜುನ’ ಝಲಕ್: ಜ.29ಕ್ಕೆ ಥಿಯೇಟರ್‌ನಲ್ಲಿ ದರ್ಶನ
ಇನ್ನು, “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರವನ್ನು ವಿಖ್ಯಾತ್ ನಿರ್ಮಾಣ ಮಾಡಿದ್ದು, ನರಸಿಂಹ ನಿರ್ದೇಶಿಸಿದ್ದಾರೆ. ಚಿತ್ರತಂಡದ ಪ್ರಕಾರ, ಇದೊಂದು ಪೈಸಾ ವಸೂಲ್ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಆμàಸರ್ ಆಗಿ ಕಾಣಿಸಿಕೊಂಡಿದ್ದು, ಅವರ ಇಡೀ ಪಾತ್ರ ಮಜವಾಗಿ ಸಾಗಲಿದೆ.
ಈ ಚಿತ್ರದ ಮತ್ತೂಂದು ಹೈಲೈಟ್ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ನಟ ದರ್ಶನ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದ್ದು, ದೊಡ್ಡ ಗ್ಯಾಪ್‌ನ ಬಳಿಕ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ನೋಡಲು ದರ್ಶನ್ ಅಭಿಮಾನಿಗಳು ಕೂಡಾ ಕಾತುರರಾಗಿದ್ದಾರೆ. ಇನ್ನು ಚಿತ್ರ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇದು ಪ್ರಜ್ವಲ್ ಅವರ 30ನೇ ಚಿತ್ರವಾಗಿದ್ದು, ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.