ಅಕ್ರಮ ಗಣಿಗಾರಿಕೆ ಆರಂಭವಾಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ : ಕಟೀಲ್
Team Udayavani, Jan 24, 2021, 4:49 PM IST
ಕೊಪ್ಪಳ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಮರಳು ಮಾಫಿಯಾ ಆರಂಭವಾಗಿದ್ದು ಸಿದ್ದರಾಮಯ್ಯ ಅವರ ಕಾಲದಲ್ಲಿ, ಅಕ್ರಮಕ್ಕೆ ಅವಕಾಶ ಕೊಟ್ಟಿದ್ದು ಅವರೇ. ನಮ್ಮ ಸರ್ಕಾರ ಬಂದ ಬಳಿಕ ಅಂತಹ ಎಲ್ಲ ಅಕ್ರಮಗಳ ವಿರುದ್ಧ ಕಾನೂನು ಕ್ರಮಕೈಗೊಂಡು ನಿಲ್ಲಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಕ್ರಮ ಗಣಿಗಾರಿಕೆ ಸಕ್ರಮ ಮಾಡುವ ವಿಚಾರದ ಕುರಿತು ಲೈಸೆನ್ಸ್ ಇರುವುದನ್ನು ಸಕ್ರಮ ಮಾಡಬಹುದು. ಆದರೆ ಎಲ್ಲವೂ ಸಕ್ರಮ ಮಾಡಲು ಬರುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅನುಮತಿಯನ್ನು ನೀಡಬಹುದು. ನ್ಯಾಯಾಲಯದ ಮುಂದೆ ಇರುವ ಕೇಸ್‌ನಲ್ಲಿ ಸಕ್ರಮ ಮಾಡುವುದು ಸಮಸ್ಯೆಯಾಗುತ್ತದೆ ಎಂದರು.
ಡಿಕೆಶಿ ನಿರುದ್ಯೋಗಿಗಳಾಗಿದ್ದೇವೆ ಎನ್ನುವ ಹೇಳೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಕಳ್ಳ-ಕಾಕರ ಕೆಲಸವೆಲ್ಲವೂ ನಿಂತಿವೆ. ಕಳ್ಳರೆಲ್ಲರೂ ನಿರುದ್ಯೋಗಿಗಳಾಗಿದ್ದಾರೆ.
ಕಳ್ಳ-ಕಾಕರರು ಎಂದರೆ ಯಾರು ತಿಹಾರ್ ಜೈಲಿಗೆ ಹೋಗಿ ಬಂದವರು. ಕಾಂಗ್ರೆಸ್‌ನಲ್ಲಿನ ಭ್ರಷ್ಟಾಚಾರಿಗಳು.
ಇದನ್ನೂ ಓದಿ:ಹುಣಸೋಡು ಸ್ಪೋಟ ಪ್ರಕರಣ ತನಿಖೆಯನ್ನು ರಾಜ್ಯ ಪೊಲೀಸರು ಮಾಡುತ್ತಾರೆ: ಡಿಸಿಎಂ ಕಾರಜೋಳ
ರಾಜಕೀಯದ ಹೆಸರಲ್ಲಿ ಹಣ ಮಾಡಿಕೊಳ್ಳಲು ಇಂದು ಅವಕಾಶವಿಲ್ಲ. ಹಣ ಗಳಿಕೆಯಲ್ಲಿ ಅವರೆಲ್ಲರೂ ವಿಫಲರಾಗುತ್ತಿದ್ದಾರೆ. ನೋಟ್ ಬ್ಯಾನ್ ಆದಾಗ ಅವರಿಗೆ ತುಂಬ ಸಮಸ್ಯೆಯಾಗಿತ್ತು. ಹಾಗಾಗಿ ಅವರೆಲ್ಲರೂ ನಿರುದ್ಯೋಗಿಗಳಾಗಿದ್ದಾರೆ ಎಂದು ಡಿಕೆಶಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಬ್ರೆಜಿಲ್ ಅಧ್ಯಕ್ಷರು ಹನುಮನ ಪೋಟೋ ಟ್ವಿಟ್ ಮಾಡಿದ ವಿಚಾರಕ್ಕೆ, ಮೋದಿ ಅವರ ಕಾರ್ಯವನ್ನ ಇಂದು ಜಗತ್ತು ಮೆಚ್ಚುತ್ತಿದೆ. ಭಾರತ ಈ ಹಿಂದೆ ಬೇರೆ ದೇಶಗಳಲ್ಲಿ ಭಿಕ್ಷೆ ಬೇಡುತ್ತಿತ್ತು. ಇಂದು ಹಲವು ದೇಶಗಳಿಗೆ ಕೊಡುವ ತಾಕತ್ತು ಬಂದಿದೆ. ಬ್ರೆಜಿಲ್ ಅಧ್ಯಕ್ಷರು ಹನುಮನು ಇರುವ ಸಂಜೀವಿನಿ ಬೆಟ್ಟದ ಪೋಟೋವನ್ನು ಟ್ವಿಟ್ ಮಾಡಿದ್ದಾರೆ. ಇದು ನರೇಂದ್ರ ಮೋದಿ ಅವರ ಸಾಧನೆ ತೋರುತ್ತದೆ. ಜಗತ್ತಿನ ಎತ್ತರಕ್ಕೆ ಭಾರತವನ್ನು ಕೊಂಡೊಯ್ದಿದಿದ್ದಾರೆ. ಹನುಮಂತ ಭಕ್ತಿಯ ಸಂಕೇತ, ನಿಷ್ಠೆಯ ಸಂಕೇತ. ಹಾಗಾಗಿ ಜಗತ್ತಿನ ಎಲ್ಲ ದೇಶಗಳು ಹನುಂತನನ್ನು ಇಟ್ಟುಕೊಂಡು ಭಾರತವನ್ನು ಗುರುತಿಸುತ್ತಿದ್ದಾರೆ. ಹಿಂದೆ ಭಾರತವೇ ಭಿಕ್ಷಾಟನೆ ದೇಶ ಎಂದು ನಮ್ಮ ದೇಶ ಆಡಳಿತ ಮಾಡಿದ ನಾಯಕರೇ ವಿದೇಶದಲ್ಲಿ ಹೇಳಿದ್ದರು. ಈಗ ಮೋದಿ ಅವರು ಅದೆಲ್ಲದನ್ನ ದೂರ ಮಾಡಿ ಭಾರತಕ್ಕೆ ಗೌರವ ತಂದಿದ್ದಾರೆ ಎಂದರು.
ರಾಮ ಮಂದಿರಕ್ಕೆ ಕೊಟ್ಟ ಪ್ರಾಧಾನ್ಯತೆ ಅಂಜಿನಾದ್ರಿಗೆ ಕೊಟ್ಟಿಲ್ಲ ಎನ್ನುವ ಮಾತಿಗೆ, ರಾಮ ಮಂದಿರವು ಸ್ವಾಭಿಮಾನದ ವಿಚಾರವಾಗಿತ್ತು. ಅದರೊಂದು ಹೋರಾಟವಾಗಿತ್ತು. ಆದರೆ ಅಂಜಿನಾದ್ರಿಯು ಅಭಿವೃದ್ಧಿಯ ವಿಚಾರವಿದೆ. ಅದು ಮುಂದಿನ ದಿನದಲ್ಲಿ ನಡೆಯಲಿದೆ ಎಂದರು.
ಶಾಸಕ ಯತ್ನಾಳ ಅವರಿಗೆ ಪಕ್ಷವು ಸೂಚನೆ ನೀಡಿದ್ದು, ಇತಿ ಮಿತಿಯೊಳಗೆ ಮಾತನಾಡಲು ಹೇಳಿದೆ. ಅಲ್ಲದೆ ದೆಹಲಿಯ ಶಿಸ್ತು ಸಮಿತಿಗೆ ಅವರ ವರದಿ ಕಳಿಸಿದ್ದೇವೆ. ಪಕ್ಷವು ಆಂತರಿಕವಾಗಿ ಎಲ್ಲವನ್ನೂ ನೋಡುತ್ತಿರುತ್ತದೆ ಎಂದರಲ್ಲದೇ, ಅವರಿಗೆ ಪಕ್ಷವು ಹಲವು ಬಾರಿ ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ. ಯಾವುದು ಪಕ್ಷದ ವಿರುದ್ಧ ಇರುತ್ತದೆ ? ಯಾವುದು ಶಿಸ್ತಿನ ವಿರುದ್ಧ ಇರುತ್ತದೆ ? ಎನ್ನುವುದು ಅವರು ನೋಡಿಕೊಂಡು ಮಾತನಾಡಬೇಕು. ಎಲ್ಲವೂ ಪಕ್ಷದ ವಿರುದ್ದ ಮಾತನಾಡುವುದು ತರವಲ್ಲ. ಇನ್ನೂ ಹೆಚ್.ವಿಶ್ವನಾಥ ಅವರು ನನ್ನನ್ನ ಒಬ್ಬಂಟಿ ಎಂದಿರುವ ವಿಚಾರಕ್ಕೆ ಅವರು ವಯಕ್ತಿಕ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಪಕ್ಷ ಅವರನ್ನು ಎಂಎಲ್‌ಸಿ ಮಾಡಿದೆ. ಅವರಿಗೆ ಅದು ತೃಪ್ತಿಯಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.