ಭಾರತೀಯ ಮಾರುಕಟ್ಟೆಗೆ ಒಪ್ಪೋ ರೆನೋ 5 ಪ್ರೋ 5G ಎಂಟ್ರಿ. ವಿಶೇಷತೆಗಳೇನು?
Team Udayavani, Jan 24, 2021, 8:00 PM IST
ನವದೆಹಲಿ: ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾಗಿರುವ ಒಪ್ಪೋ ತನ್ನ ಒಪ್ಪೋ ರೆನೋ 5 ಪ್ರೋ 5G ಸರಣಿಯ ಮೊಬೈಲ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ತನ್ನ ಹಳೆ ಆವೃತ್ತಿಯ ಸ್ಮಾರ್ಟ್ ಪೋನ್ ಗಳಿಗಿಂತ ವಿಭಿನ್ನವಾದ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸ್ಮಾರ್ಟ್ ಪೋನ್, ಮೀಡಿಯಾ ಟೆಕ್ ಡೈಮೆನ್ಸಿಟಿ 1000+ ಚಿಪ್ ಸೆಟ್ ಅನ್ನು ಒಳಗೊಂಡಿದ್ದು, ಕ್ವಾಡ್ ರೇರ್ ಕ್ಯಾಮರಾದೊಂದಿಗೆ 20:9 ಡಿಸ್ ಪ್ಲೇ ಅನ್ನು ಹೊಂದಿದೆ.
ಈ ಸ್ಮಾರ್ಟ್ ಪೋನ್ ಜೊತೆಗೆ ಟ್ರೂ ವಯರ್ ಲೆಸ್ ಸ್ಟೀರಿಯೋ (TWS) ಇಯರ್ ಬಡ್ಸ್ ಕೂಡಾ ಬಳಕೆದಾರರಿಗೆ ಲಭ್ಯಗೊಳ್ಳಲಿದ್ದು, ಇದು 3.0 ಸೌಂಡ್ ಸಿಸ್ಟಮ್ ನೊಂದಿಗೆ ಅದ್ಭುತ noise cancelling ಸಾಮರ್ಥ್ಯವನ್ನು ಹೊಂದಿದೆ.
ಒಪ್ಪೋ ರೆನೋ 5 ಪ್ರೋ 5G ವೈಶಿಷ್ಟ್ಯತೆಗಳು
ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಒಪ್ಪೋ ರೆನೋ 5 ಪ್ರೋ 5G ಸ್ಮಾರ್ಟ್ ಪೋನ್ ಡ್ಯೂವೆಲ್ ನ್ಯಾನೋ ಸಿಮ್ ಗಳ ಸೌಲಭ್ಯವನ್ನು ಹೊಂದಿದ್ದು, ಓಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1000+ SoC ಇದೆ. ಜೊತೆಗೆ 8 GB ಯ LPDDR4x RAM ಅನ್ನು ಕಾಣಬಹುದಾಗಿದೆ.
ಡಿಸ್ ಪ್ಲೇ
ಈ ಸ್ಮಾರ್ಟ್ ಪೋನ್ 6.55 ಇಂಚಿನ ಫುಲ್ ಹೆಚ್ ಡಿ + OLED ಡಿಸ್ ಪ್ಲೇ (1,080X 2,400) ಅನ್ನು ಒಳಗೊಂಡಿದ್ದು, ಜೊತೆಗೆ 20:9 aspect ratio ವನ್ನು ಇದರಲ್ಲಿ ಕಾಣಬಹುದಾಗಿದೆ. ಹಾಗೂ ಇದು ಡಿಸ್ ಪ್ಲೆ ಫಿಂಗರ್ ಫ್ರಿಂಟ್ ಸೌಲಭ್ಯವನ್ನು ಒಳಗೊಂಡಿದೆ.
ಕ್ಯಾಮಾರಾ
ಕ್ವಾಡ್ ರೇರ್ ಕ್ಯಾಮರಾದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿರುವ ಈ ಸ್ಮಾರ್ಟ್ ಪೋನ್, 64 MP ಪ್ರಾಥಮಿಕ ಕ್ಯಾಮರಾವನ್ನು ಹೊಂದಿದ್ದು, 8 MP ಸೆಕೆಂಡರಿ ಸೆನ್ಸರ್ ಕ್ಯಾಮರಾ ಇದ್ದರಲ್ಲಿ ಕಾಣಬಹುದಾವುಗಿದೆ. ಇದರ ಜೊತೆಗೆ 2 MP ಮೈಕ್ರೊ ಶೂಟರ್ ಹಾಗೂ 2 MP ಮೋನೋ ಕ್ರೋಮ್ ಸೆನ್ಸರ್ ಅನ್ನು ಇದು ಒಳಗೊಂಡಿದೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಸಿದ್ದವಾಗಲಿದೆ ಪ್ಲಾಸ್ಟಿಕ್ ಪಾರ್ಕ್: ಸಚಿವ ಡಿ ವಿ ಸದಾನಂದ ಗೌಡ
ಸ್ಟೋರೇಜ್
ಇದು 128 GB ಯ UFS 2.1 ಸ್ಟೋರೇಜ್ ಅನ್ನು ತನ್ನಲ್ಲಿ ಇರಿಸಿಕೊಂಡಿದೆ. ಆದರೆ ಮೈಕ್ರೋ SD ಕಾರ್ಡ್ ನ ಮೂಲಕ ಹೆಚ್ಚಿನ ಸ್ಟೋರೇಜ್ ಅನ್ನು ಪಡೆಯಲು ಈ ಮೊಬೈಲ್ ಪೋನ್ ನಲ್ಲಿ ಸಾಧ್ಯವಾಗುವುದಿಲ್ಲ. ಬದಲಾಗಿ 12 ತಿಂಗಳ ಉಚಿತ ಕ್ಲೌಡ್ ಸ್ಟೋರೇಜ್ ಸೌಲಭ್ಯ ಬಳಕೆದಾರರಿಗೆ ಲಭ್ಯವಿದೆ.
ಬ್ಯಾಟರಿ ಸಾಮರ್ಥ್ಯ
ಈ ಮೊಬೈಲ್ ಪೋನ್ ಒಟ್ಟು 4.350mAh ಬ್ಯಾಟರಿ ಸಾಮರ್ಥ್ಯದೊಂದಿದೆ, 65W ಸೂಪರ್ VOOC2.0 ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ದೆಹಲಿಯ ಖಾನ್ ಮಾರ್ಕೆಟ್ ಬಳಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ದೇಶದ್ರೋಹಿಗಳು
ಬಣ್ಣಗಳ ಲಭ್ಯತೆ
ಇದು ಆಸ್ಟ್ರಲ್ ಬ್ಲೂ ಹಾಗೂ ಸ್ಟಾರಿ ಬ್ಲ್ಯಾಕ್ ಬಣ್ಣಗಳಲ್ಲಿ ಬಳಕೆದಾರರಿಗೆ ಲಭ್ಯವಿದೆ.
ಬೆಲೆ
ಒಪ್ಪೋ ರೆನೋ 5 ಪ್ರೋ 5G ಸ್ಮಾರ್ಟ್ ಪೋನ್ ಪ್ಲಿಫ್ ಕಾರ್ಟ್ ಅನ್ನು ಒಳಗೊಂಡಂತೆ ಹಲವು ಆನ್ ಲೈನ್ ಮಾರುಕಟ್ಟೆ ಮಳಿಗೆಗಳಲ್ಲಿ ಲಭ್ಯವಿದ್ದು, 8GB RAM + 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಸ್ಮಾರ್ಟ್ ಪೋನ್ 35,990 ರೂಗಳಿಗೆ ದೊರಕಲಿದೆ. ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್ ಗಳ ಕಾರ್ಡ್ ಗಳನ್ನು ಬಳಸಿ ಸ್ಮಾರ್ಟ್ ಪೋನ್ ಖರೀದಿಸುವವರು ರೂ. 2.500 ರ ವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.