ಕರಾವಳಿಗೆ ಸಿದ್ಧವಾಗಿದೆ ಸಿಆರ್‌ಝಡ್‌ ಹೊಸ ಕರಡು ನಕ್ಷೆ


Team Udayavani, Jan 25, 2021, 3:20 AM IST

ಕರಾವಳಿಗೆ ಸಿದ್ಧವಾಗಿದೆ ಸಿಆರ್‌ಝಡ್‌ ಹೊಸ ಕರಡು ನಕ್ಷೆ

ಮಹಾನಗರ: ಕರಾವಳಿಯ ಮೂರು ಜಿಲ್ಲೆಗಳ ಬಹುಬೇಡಿಕೆಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ-2019’ರ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆ ಇದೀಗ ಅಂತಿಮಗೊಂಡಿದ್ದು, 1 ತಿಂಗಳ ಒಳಗೆ ಕರಾವಳಿಗೆ ಲಭ್ಯವಾಗುವ ನಿರೀಕ್ಷೆಯಿದೆ.

2019ರ ಜ. 18ರಂದು ಕೇಂದ್ರ ಸರಕಾರ ಸಿಆರ್‌ಝಡ್‌ ಅಧಿಸೂಚನೆ-2019ನ್ನು ಪ್ರಕಟಿಸಿತ್ತು. ಈ ನಿಯಮಾವಳಿಯನ್ನೇ ಮುಂದಿನ ದಿನಗಳಲ್ಲಿ ಜಾರಿಗೆ ತರಬೇಕು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ತಿಳಿಸಿತ್ತು. ಆದರೆ ನಕ್ಷೆ ಮಾತ್ರ ಜಾರಿಯಾಗಿರಲಿಲ್ಲ. ಕೊರೊನಾ ಕಾರಣದಿಂದ ನಕ್ಷೆ ರಚನೆ ತಡವಾಗಿತ್ತು ಎಂದು ಇಲಾಖೆಗಳಲ್ಲಿ ಸುದ್ದಿಯಾಗಿ ತ್ತು. ಇದೀಗ ಕರಡು ನಕ್ಷೆ ಪೂರ್ಣಗೊಂಡಿರುವ ಬಗ್ಗೆ ಕೇಂದ್ರದಿಂದ ಕರಾವಳಿಗೆ ಮಾಹಿತಿ ಲಭಿಸಿದೆ.

ಸಿಆರ್‌ಝಡ್‌ ಅಧಿಸೂಚನೆ 2011ರಲ್ಲಿ ಆಗಿತ್ತು. ಇದರ ನಕ್ಷೆಗೆ ಒಪ್ಪಿಗೆ ಸಿಕ್ಕಿದ್ದು ಮಾತ್ರ 2018ರಲ್ಲಿ. ಆದರೆ 2019ರ ಹೊಸ ಅಧಿಸೂಚನೆ ಬಂದಿದ್ದರೂ ನಕ್ಷೆ ಇಲ್ಲದ ಕಾರಣದಿಂದ ಇಲ್ಲಿಯವರೆಗೆ 2011ರ ನಿಯಮಾವಳಿಯ ನಕ್ಷೆಯೇ ಜಾರಿಯಲ್ಲಿದೆ.

ಹೊಸ ನಕ್ಷೆ ಲಾಭವೇನು? :

2019ರ ಹೊಸ ಅಧಿಸೂಚನೆ ಪ್ರಕಾರ ನಕ್ಷೆ ರಚನೆಯಾದರೆ ಕರಾವಳಿ ಭಾಗದ ಪ್ರವಾಸೋದ್ಯಮ, ಮೀನುಗಾರರಿಗೆ ನೆರವಾಗುವ ಹಲವು ಸಂಗತಿಗಳು ಇರಲಿವೆ. ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಕೆಲವು ಸಿಆರ್‌ಝಡ್‌ ನಿಯಮಾವಳಿಯಿಂದ ರಿಯಾಯಿತಿ ದೊರೆಯಲಿದೆ. ಜತೆಗೆ, ಮೀನುಗಾರರು ಮನೆ ನಿರ್ಮಿಸುವುದಾದರೂ ಅದಕ್ಕೂ ಅನುಮತಿ ನೀಡಲು ಸಾಧ್ಯವಿದೆ. ಸದ್ಯ ನದಿಯಿಂದ 100 ಮೀಟರ್‌ ದೂರದವರೆಗೆ ಸಿಆರ್‌ಝಡ್‌ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ ಕೇವಲ 50 ಮೀ.ವರೆಗೆ ಮಾತ್ರ ನಿರ್ಬಂಧವಿರಲಿದೆ. ಹೀಗೆ ಹಲವು ರಿಯಾಯಿತಿಗಳು ಈ ನಕ್ಷೆಯಲ್ಲಿವೆ ಎಂದು ಪ್ರಾದೇಶಿಕ ಪರಿಸರ ಕಚೇರಿಯ ಮೀನುಗಾರಿಕ ಹಿರಿಯ ಸಹಾಯಕ ನಿರ್ದೇಶಕ ಮಹೇಶ್‌ ತಿಳಿಸಿದ್ದಾರೆ.

1991ರ ಸಿಆರ್‌ಝಡ್‌ ಅಧಿಸೂಚನೆ :

1991ರ ಸಿಆರ್‌ಝಡ್‌ ಅಧಿಸೂಚನೆ ಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣ ವಲಯ (ಸಿಎಂಝಡ್‌ ) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದರಲ್ಲಿ ಸಿಆರ್‌ಝಡ್‌ನ‌ “ನಿಯಂತ್ರಣ’ ಎಂಬ ಪದವನ್ನು ತೆಗದು “ನಿರ್ವಹಣೆ’ ಎಂದು ಸೇರಿಸಲಾಗಿತ್ತು. ಈ ಅಧಿಸೂಚನೆಯ ಮೇಲೆ ಬಹಳಷ್ಟು ಚರ್ಚೆಗಳು ನಡೆದು, ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಿಎಂಝಡ್‌ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು 1991ರ ಸಿಆರ್‌ಝಡ್‌ ಅಧಿಸೂಚನೆಯಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ 2011ರಲ್ಲಿ ಮತ್ತೆ ಅನುಷ್ಠಾನಕ್ಕೆ ತಂದಿದೆ. ಇದರ ಆಧಾರದ ಮೇಲೆ 2018ರ ಜುಲೈಯಲ್ಲಿ ಹೊಸ ನಕ್ಷೆ ಸಿದ್ಧಗೊಂಡಿತ್ತು. ಇದಾದ ಕೆಲವೇ ತಿಂಗಳಲ್ಲಿ ಕೇಂದ್ರವು ಹೊಸ ಅಧಿಸೂಚನೆ ಹೊರಡಿಸಿದ ಕಾರಣದಿಂದ ಇದೀಗ ಹೊಸ ನಕ್ಷೆ ರಚನೆಯಾಗುತ್ತಿದೆ.

ಕರಡು ಸಿದ್ಧವಾದರೂ ಅನುಮೋದನೆಗೆ 6 ತಿಂಗಳುಗಳು ಬೇಕು! :

ನಕ್ಷೆಯ ಕರಡು ಸಿದ್ಧವಾದ ಬಳಿಕ ಮೂರು ಜಿಲ್ಲೆಗಳ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯಲಾಗುತ್ತದೆ. ಜಿಲ್ಲಾಧಿ ಕಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಯಲಿದೆ. ಕರಡು ನಕ್ಷೆ ಕುರಿತಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಪೂರ್ಣವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ನೀಡಲಿದೆ. ರಾಜ್ಯ ಸರಕಾರದಿಂದ ಪರಿ ಶೀಲನೆಯಾಗಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಕೇಂದ್ರ ಸರಕಾರವು ವರದಿಗೆ ಅನುಮೋದನೆ ನೀಡಲಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣ ಗೊಳ್ಳಲು ಕನಿಷ್ಠ 6 ತಿಂಗಳುಗಳು ಬೇಕಾಗಬಹುದು.

2019ರ ಜನವರಿಯಲ್ಲಿ ಕೇಂದ್ರ ಸರಕಾರ ಹೊಸದಾಗಿ ಸಿಆರ್‌ಝಡ್‌ ಅಧಿಸೂಚನೆ ಹೊರಡಿಸಿದೆ. ಇದರ ಕರಡು ನಕ್ಷೆ ತಿಂಗಳೊಳಗೆ ಲಭಿಸುವ ಬಗ್ಗೆ ಮಾಹಿತಿಯಿದೆ. ಇಲ್ಲಿಯವರೆಗೆ 2011ರ ನಿಯಮಾವಳಿಯ ನಕ್ಷೆಯೇ ಜಾರಿಯಲ್ಲಿದೆ. ಕರಡು ನಕ್ಷೆ ಬಂದ ಬಳಿಕ ಆಕ್ಷೇಪಣೆ ಸ್ವೀಕರಿಸಿ ರಾಜ್ಯ-ಕೇಂದ್ರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು. -ಡಾ| ವೈ.ಕೆ. ದಿನೇಶ್‌ ಕುಮಾರ್‌,   ಪ್ರಾದೇಶಿಕ ನಿರ್ದೇಶಕರು, ದ.ಕ. ಪರಿಸರ ಇಲಾಖೆ

ಟಾಪ್ ನ್ಯೂಸ್

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.