ಭಾರತದ ಯಶಸ್ಸಿನ ಪಾಲು ಬಯಸದ ದ್ರಾವಿಡ್‌


Team Udayavani, Jan 25, 2021, 6:30 AM IST

ಭಾರತದ ಯಶಸ್ಸಿನ ಪಾಲು ಬಯಸದ ದ್ರಾವಿಡ್‌

ಬೆಂಗಳೂರು: “ಭಾರತೀಯ ಕ್ರಿಕೆಟಿಗರ ಯಶಸ್ಸಿನ ಕ್ರೆಡಿಟ್‌ ನನಗೆ ಬೇಡ. ಯುವ ಪಡೆ ಇಂಥದೊಂದು ಸಾಧನೆಗೆ, ಗೆಲುವಿಗೆ ಅರ್ಹವಾಗಿತ್ತು. ಯಶಸ್ಸಿನ ಎಲ್ಲ ಪಾಲೂ ಅವರಿಗೇ ಸಲ್ಲುತ್ತದೆ’ ಎನ್ನುವ ಮೂಲಕ ಮಾಜಿ ಕ್ರಿಕೆಟಿಗೆ ರಾಹುಲ್‌ ದ್ರಾವಿಡ್‌ ನೈಜ ಕ್ರೀಡಾಸ್ಫೂರ್ತಿ ತೋರಿದ್ದಾರೆ.

ಆಸ್ಟ್ರೇಲಿಯ ಸರಣಿಯಲ್ಲಿ ಯಶಸ್ಸು ಗಳಿಸಿ ಭಾರತದ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದವರೆಲ್ಲ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಬೆಳೆದ ಆಟಗಾರರೆಂಬುದು ಗಮನಾರ್ಹ. ಈ ಕ್ರಿಕೆಟಿಗರ ಯಶಸ್ಸಿಗೆ ಅಂಡರ್‌-19, ಭಾರತ ಎ ತಂಡಗಳೇ ಮೂಲವಾಗಿದ್ದವು. ದ್ರಾವಿಡ್‌ ಈ ಎರಡೂ ತಂಡಗಳ ಕೋಚ್‌ ಆಗಿರುವ ಕಾರಣ ಈ ಜಯದಲ್ಲಿ ಅವರಿಗೂ ದೊಡ್ಡ ಪಾಲಿದೆ ಎಂದು ಕ್ರಿಕೆಟ್‌ ಅಭಿಮಾನಿಗಳು, ಮಾಧ್ಯಮಗಳು, ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು.

ಇದೀಗ ರಾಹುಲ್‌ ದ್ರಾವಿಡ್‌ ಸಂದರ್ಶನ ವೊಂದರಲ್ಲಿ ಈ ಕುರಿತು ತಮ್ಮ ನೇರ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು, “ನನಗೆ ಅನಗತ್ಯ ಕ್ರೆಡಿಟ್‌ ನೀಡಲಾಗುತ್ತಿದೆ. ಹುಡುಗರು ಈ ಗೆಲುವಿಗೆ ಅರ್ಹರಾಗಿದ್ದರು. ಎಲ್ಲ ಪ್ರಶಂಸೆ ಅವರಿಗೇ ಸಲ್ಲಬೇಕು’ ಎಂದಿದ್ದಾರೆ.

ದ್ರಾವಿಡ್‌ ಜತೆ ಚರ್ಚೆ :

“ಸಾಮಾನ್ಯವಾಗಿ ಇಂಥ ದೊಡ್ಡ ಪ್ರವಾಸದ ವೇಳೆ ಯಾವ ಆಟಗಾರರ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂಬ ಕುರಿತು ಭಾರತ ತಂಡದ ಆಡಳಿತ ಮಂಡಳಿ, ಆಯ್ಕೆಗಾರರು ಮತ್ತು ದ್ರಾವಿಡ್‌ ಸೇರಿ ಚರ್ಚೆ ನಡೆಸುತ್ತಾರೆ. ಆಗ ಅಂಡರ್‌-19, ಎ ತಂಡಗಳ ಸಾಧಕರು ಮುಂಚೂಣಿಗೆ ಬರುತ್ತಾರೆ. ಹೀಗಾಗಿ ಉತ್ತಮ ಆಯ್ಕೆ ಸಾಧ್ಯವಾಗುತ್ತದೆ’ ಎಂಬುದು ಮಾಜಿ ಕ್ರಿಕೆಟಿಗ ಜತಿನ್‌ ಪರಾಂಜಪೆ ಅನಿಸಿಕೆ.

“ರಾಹುಲ್‌ ದ್ರಾವಿಡ್‌ ಪಂದ್ಯದ ಫ‌ಲಿತಾಂಶಕ್ಕಿಂತ ಮಿಗಿಲಾಗಿ ಯುವ ಪ್ರತಿಭೆಗಳ ಸಾಮರ್ಥ್ಯವನ್ನು ಅನಾವರಣಗೊಳಿಸಲು ಮೊದಲ ಆದ್ಯತೆ ನೀಡುತ್ತಾರೆ’ ಎಂಬುದು ಭಾರತದ ವನಿತಾ ಕ್ರಿಕೆಟ್‌ ತಂಡದ ಕೋಚ್‌ ಡಬ್ಲ್ಯು.ವಿ. ರಾಮನ್‌ ಅಭಿಪ್ರಾಯ.

 

“ಇಂಗ್ಲೆಂಡ್‌ ಆರಂಭಿಕರಿಗೆ ದ್ರಾವಿಡ್‌ ಸಲಹೆ ಪರಿಣಾಮಕಾರಿ’ :

ಸ್ಪಿನ್ನರ್‌ಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬೇಕು, ಸ್ಪಿನ್ನರ್‌ಗಳ ವಿರುದ್ಧ ಹೇಗೆ ಬ್ಯಾಟಿಂಗ್‌ ಮಾಡಬೇಕೆಂದು ಇಂಗ್ಲೆಂಡ್‌ ಆರಂಭಿಕರು ರಾಹುಲ್‌ ದ್ರಾವಿಡ್‌ ಅವರಿಂದ ಮಾರ್ಗದರ್ಶನ ಪಡೆಯುವುದು ಒಳ್ಳೆಯದು ಎಂದು ಕೆವಿನ್‌ ಪೀಟರ್‌ಸನ್‌ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಸಿಬಿ, ದಶಕದ ಹಿಂದೆ ದ್ರಾವಿಡ್‌ ತನಗೆ ಕಳುಹಿಸಿದ್ದ ಇ-ಮೇಲ್‌ ಪ್ರತಿಯ ಪ್ರಿಂಟ್‌ ತೆಗೆದು ಇವರಿಗೆ ನೀಡಬೇಕಿದೆ ಎಂದಿದ್ದಾರೆ.

ಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ 2ನೇ ದಿನದ ಕೊನೆಯ ಅವಧಿಯಲ್ಲಿ ಎಡಗೈ ಸ್ಪಿನ್ನರ್‌ ಲಸಿತ್‌ ಎಂಬುಲ್ದೇನಿಯ ಎಸೆತಗಳನ್ನು ಕೆಟ್ಟದಾಗಿ ಆಡಿದ ಇಂಗ್ಲೆಂಡ್‌ ಆರಂಭಿಕರಾದ ಸಿಬ್ಲಿ ಮತ್ತು ಕ್ರಾಲಿ ವಿಕೆಟ್‌ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ಪೀಟರ್‌ಸನ್‌ ಈ ಸಲಹೆ ನೀಡಿದ್ದಾರೆ.

2010ರಲ್ಲಿ ಪೀಟರ್‌ಸನ್‌ ಬಾಂಗ್ಲಾದೇಶದ ಸಿನ್ನರ್‌ಗಳನ್ನು ಎದುರಿಸಲು ಸಾಕಷ್ಟು ಪರದಾ ಡಿದ್ದರು. ಆಗ ದ್ರಾವಿಡ್‌ ಸಲಹೆ ಪಡೆಯಲು ನಿರ್ಧರಿಸಿದ್ದರು. ಅಂದು ದ್ರಾವಿಡ್‌ ಇ-ಮೇಲ್‌ ಮೂಲಕ ಪೀಟರ್‌ಸನ್‌ ಅವರಿಗೆ ಸಲಹೆ ನೀಡಿದ್ದರು. ಇದೀಗ ಇಂಗ್ಲೆಂಡ್‌ ಆರಂಭಿಕರಿಗೂ ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ ಪೀಟರ್‌ಸನ್‌.

ಭಾರತಕ್ಕೆ ವಿಮಾನ ಏರಿದ ಸ್ಟೋಕ್ಸ್‌  :

ಲಂಡನ್‌: ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಭಾರತಕ್ಕೆ ವಿಮಾನ ಏರಿದ್ದಾರೆ. ಫೆಬ್ರವರಿ 5ರಂದು ಆರಂಭವಾಗಲಿರುವ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ಮುಂಚಿತವಾಗಿ ಆಗಮಿಸಲಿರುವ ಅವರು ಇಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಇಂಗ್ಲೆಂಡಿನ ಉಳಿದ ಕ್ರಿಕೆಟಿಗರು ಶ್ರೀಲಂಕಾ ಪ್ರವಾಸ ಮುಗಿಸಿ ನೇರವಾಗಿ ಚೆನ್ನೈಗೆ ಬಂದಿಳಿಯಲಿದ್ದಾರೆ.

“ಸೀ ಯೂ ಸೂನ್‌, ಇಂಡಿಯಾ’ ಎಂದು ಬೆನ್‌ ಸ್ಟೋಕ್ಸ್‌ ಟ್ವೀಟ್‌ ಮಾಡಿದ್ದಾರೆ. ಜತೆಗೆ ಇಂಗ್ಲೆಂಡ್‌ ತಂಡದ ಜೆರ್ಸಿ ಧರಿಸಿ ವಿಮಾನದಲ್ಲಿ ಕುಳಿತ ಚಿತ್ರವನ್ನೂ ಪೋಸ್ಟ್‌ ಮಾಡಿದ್ದಾರೆ. ವೇಗಿ ಜೋಫ‌Å ಆರ್ಚರ್‌ ಮತ್ತು ಅಗ್ರ ಸರದಿಯ ಆಟಗಾರ ರೋರಿ ಬರ್ನ್ಸ್ ಕೂಡ ಇವರೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ಮೂವರಿಗಾಗಿ ಜಾನಿ ಬೇರ್‌ಸ್ಟೊ, ಮಾರ್ಕ್‌ ವುಡ್‌ ಮತ್ತು ಸ್ಯಾಮ್‌ ಕರನ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ.

 

ಟಾಪ್ ನ್ಯೂಸ್

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.