![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Jan 25, 2021, 1:11 PM IST
ಕೊಲ್ಕತ್ತಾ : ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಪರಾಕ್ರಮ ದಿವಸ್ ಕಾರ್ಯಕ್ರಮದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಪ್ರಧಾನಿ ಮೋದಿ ಭಾಷಣ ಆರಂಭಿಸಿದಾಗ “ಜೈ ಶ್ರೀರಾಮ್” ಘೋಷಣೆ ಕೂಗಿರುವುದು ಈಗ ಮತ್ತೆ ಅಸ್ಸಾಂ ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಓದಿ : ಬಸವಕಲ್ಯಾಣ ಉಪ ಚುನಾವಣೆ: ಡಿಸಿಎಂ ಸವದಿಯತ್ತ ಬಿಜೆಪಿ ಒಲವು, ಕೈ ನಿಂದ ಧರ್ಮಸಿಂಗ್ ಪುತ್ರ?
ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ ಹೆಚ್ಚಿನ ಆಮಂತ್ರಣ ಪತ್ರಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟಿರುವ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು ಎಂಬ ವಿಷಯ ಅಸ್ಸಾಂ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.
ಕಾರ್ಯಕ್ರಮದ ಹಿಂದಿನ ಒಂದೆರಡು ದಿನಗಳ ಕಾಲ ಹಲವು ಬಿಜೆಪಿ ಸಂಸದರು ವಿಕ್ಟೋರಿಯಾ ಹಾಲ್ ಬಳಿ ಇದ್ದರು, ಅವರೇ ಅತಿಥಿಗಳ ಪಟ್ಟಿಯನ್ನು ರಚಿಸಿದ್ದಾರೆ. ಪ್ರತಿ ಬಿಜೆಪಿ ಸಂಸದರಿಗೆ ನಿರ್ದಿಷ್ಟ ಸಂಖ್ಯೆಯ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿತ್ತು, 300 ರಿಂದ 400 ಆಮಂತ್ರಣ ಪತ್ರಿಕೆಗಳು ಬಿಜೆಪಿ ಪಕ್ಷದ ಕಚೇರಿಗೆ ತಲುಪಿವೆ ಎನ್ನಲಾಗುತ್ತಿದೆ.
ಮಂಡಲ್ ಸಮಿತಿಯ ಸದಸ್ಯರು ಸೇರಿರುವಂತೆ ಅನೇಕ “ಕೆಳ ಹಂತದ” ಕಾರ್ಮಿಕರಿಗೆ ಕಾರ್ಡ್‌ಗಳು ದೊರೆತಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಓದಿ : ಜಮ್ಮು-ಶ್ರೀನಗರ್: ಭಾರೀ ಹಿಮಪಾತ, ಮಿನಿ ಟ್ರಕ್ ನೊಳಗೆ ಇಬ್ಬರ ಸಾವು
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸತ್ಕರಿಸಲು ನನ್ನನ್ನು ನಿಯೋಜಿಸಿದ್ದರು ಎನ್ನುವುದನ್ನು ಸ್ವತಃ ಬಿಜೆಪಿ ಯುವ ವಿಭಾಗದ ಪದಾಧಿಕಾರಿ, ರಿಮ್ ಜಿಮ್ ಮಿತ್ರಾ ಹೇಳಿಕೊಂಡಿರುವುದು ಮತ್ತು ಕಾರ್ಯಕ್ರಮ ನಿರ್ವಹಣೆಯ ಸಂದರ್ಭದಲ್ಲಿ 30 ಮಂದಿ ಬಿಜೆಪಿ ಕಾರ್ಯಕರ್ತರು ಇದ್ದಿದ್ದರು ಎಂದು ಹೇಳಲಾಗುತ್ತಿರುವ ವಿಷಯ ಈಗ “ಸರ್ಕಾರಿ ಕಾರ್ಯಕ್ರಮವನ್ನು ನಿರ್ವಹಿಸಲು ಬಿಜೆಪಿ ಕಾರ್ಯಕರ್ತರನ್ನು ಯಾಕೆ ನಿಯೋಜಿಸಿದ್ದಾರೆ” ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇನ್ನೊಂದೆಡೆ, “ಜೈ ಶ್ರೀ ರಾಮ್” ಘೋಷಣೆಯನ್ನು ಕೆಲವರು ಪ್ರೀತಿಯಿಂದ, ಗೌರವದಿಂದ ಅಥವಾ ಅಭಿಮಾನದಿಂದ ಕೂಗುತ್ತಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೆ ಕೂಗುವುದನ್ನು ನಾವು ಬೆಂಬಲಿಸುವುದಿಲ್ಲ. ನೀವು ಅದನ್ನೇ ದೊಡ್ಡ ವಿಚಾರ ಮಾಡುತ್ತೀರಿ ಅಂತ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಮಾಜಿ ಶಾಸಕ ಮತ್ತು ವಕ್ತಾರ ಸಮಿಕ್ ಭಟ್ಟಾಚಾರ್ಯ ಪರೋಕ್ಷವಾಗಿ ಕುಟುಕಿದ್ದಾರೆ.
ಇತ್ತೀಚೆಗೆ ಬುರ್ದ್ವಾನ್‌ನ ಪಕ್ಷದ ಕಚೇರಿಯ ಹೊರಭಾಗದಲ್ಲಿ ಕೆಲವು ಕಾರ್ಯಕರ್ತರು ಭಿನ್ನಾಭ್ರಿಪ್ರಾಯದ ಕಾರಣದಿಂದಾಗಿಗದ್ದಲ ಸೃಷ್ಟಿಸಿದ್ದರು. ಅದು ಬಿಜೆಪಿಗೆ ಸ್ವಲ್ಪ ಮಟ್ಟಿಗೆ ನಕಾರಾತ್ಮಕ ಪರಿಣಾಮ ಬೀರಿತ್ತು. ಅವರಿಗೆ ಕ್ರಮಗಳನ್ನೂ ಪಕ್ಷ ಕೈಗೊಂಡಿದೆ. “ಪರಾಕ್ರಮ್ ದಿವಸ್” ಕಾರ್ಯಕ್ರಮದಲ್ಲಿಯೂ ಜೈ ಶ್ರೀರಾಮ್ ಘೋಷಣೆ ಕೂಗಿದವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಬಿಜೆಪಿ ಸೋಮವಾರ(ಜ.25) ಉನ್ನತ ಮಟ್ಟದ ಸಾಂಸ್ಥಿಕ ಸಭೆ ನಿಗದಿಗೊಳಿಸಿರುವುದು ತನಗಾಗುವ ಧಕ್ಕೆಯಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
ಇತ್ತ, ತೃಣಮೂಲ ಕಾಂಗ್ರೇಸ್ ಪಕ್ಷ ‘ಜೈ ಶ್ರೀರಾಮ್’ ಘೋಷಣೆಯನ್ನು ಮತದಾನದ ಕೂಗು ಎಂದು ಪರಿವರ್ತಿಸಲು ಪ್ರಯತ್ನಿಸುತ್ತಿರುದರ ಜೊತೆಗೆ ಬಿಜೆಪಿಗೆ ಮತದಾನದ ಪಾಠವನ್ನು ಕಲಿಸುವಂತೆ ಜನರನ್ನು ಒತ್ತಾಯಿಸುತ್ತಿರುವುದು ವರದಿಯಾಗಿದೆ.
ಓದಿ : ಅಭಿವೃದ್ಧಿಗೆ ಪ್ರತೀ ಮತವೂ ಮುಖ್ಯ : ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.