ಬೆಂಗಳೂರಿನಲ್ಲಿ ದಿನಕ್ಕೆರಡು ಅಪಘಾತ, ಕನಿಷ್ಠ 2 ಸಾವು! ದ್ವಿಚಕ್ರ ಸವಾರರಿಂದಲೇ ಅಪಘಾತ ಅಧಿಕ
Team Udayavani, Jan 25, 2021, 2:46 PM IST
ಬೆಂಗಳೂರು: ಸಿಲಿಕಾನ್ ಸಿಟಿ ಖ್ಯಾತಿಯ ರಾಜಧಾನಿಯಲ್ಲಿ ವಾಹನಗಳ ಖರೀದಿ ಸಂಖ್ಯೆ ದಿನಂಪ್ರತಿ ಹೆಚ್ಚಾದಂತೆ ಕಳೆದ ಮೂರು
ವರ್ಷಗಳಲ್ಲಿ ಪ್ರತಿನಿತ್ಯ ಕನಿಷ್ಠ ಎರಡು ಅಪಘಾತಗಳು ಉಂಟಾಗುತ್ತಿವೆ. ಈ ರಸ್ತೆ ಅಪಘಾತಗಳಲ್ಲಿ ದಿನಕ್ಕೆ ಇಬ್ಬರು
ಮೃತಪಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಪ್ರತಿನಿತ್ಯ ನಗರದ ಯಾವುದಾದರೂ ಒಂದು ಭಾಗದಲ್ಲಿ ರಸ್ತೆ ಅಪಘಾತ ಸಂಭವಿಸುತ್ತಿದೆ. ಮಾರಣಾಂತಿಕ ಅಪಘಾತದಲ್ಲಿ ಗಾಯಗೊಂಡವರು ಸ್ಥಳದಲ್ಲಿ, ಇಲ್ಲವೆ ಆಸ್ಪತ್ರೆಗಳಲ್ಲಿ ಅಸುನೀಗುತ್ತಿದ್ದಾರೆ. ಮೃತಪಟ್ಟವರಲ್ಲಿ 21ರಿಂದ30 ರೊಳಗಿನ ಯುವ ಸಮುದಾಯದ ಪ್ರಮಾಣ ಹೆಚ್ಚಿದೆ. ಅಷ್ಟೇ ಅಲ್ಲದೆ, ಅಪಘಾತಗಳನ್ನು ಎಸಗಿದ ಆರೋಪಿತರ ಪಟ್ಟಿಯಲ್ಲೂ 21ರಿಂದ 40
ವಯೋಮಾನ ಮೊದಲ ಸ್ಥಾನದ ಕುಖ್ಯಾತಿಯಲ್ಲಿದೆ. ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಮೂರು ವರ್ಷಗಳ
ಅಪಘಾತ ಪ್ರಕರಣಗಳ ವಿಶ್ಲೇಷಣಾ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಅಪಘಾತ ಉಂಟಾಗಲು ಅತಿವೇಗದ ಚಾಲನೆಯೇ ಪ್ರಮುಖ ಕಾರಣ ಆಗಿದೆ. ಬಹುತೇಕ ರಸ್ತೆ ಅಪಘಾತಗಳು ದ್ವಿಚಕ್ರ ವಾಹನ
(ಬೈಕ್)ಸವಾರರಿಂದಲೇ ಸಂಭವಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟವರು ಬೈಕ್ ಸವಾರರಾಗಿದ್ದು, ಖಾಸಗಿ ಕಂಪೆನಿಗಳ
ಉದ್ಯೋಗಿಗಳಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಪಾದಚಾರಿಗಳು ಸಾವಿನ ಸಂಖ್ಯೆಯಿದೆ.
ಇದನ್ನೂ ಓದಿ:48 ಎಂಪಿ ಎಐ ಟ್ರಿಪಲ್ ಕ್ಯಾಮೆರಾದೊಂದಿಗೆ ವೀವೊ ವೈ 31 ಮಾರುಕಟ್ಟೆಯಲ್ಲಿ ಲಭ್ಯ
ಮೂರು ವರ್ಷಗಳಲ್ಲಿ 722 ಮಂದಿ ಪಾದಚಾರಿಗಳು ಸತ್ತಿದ್ದಾರೆ. ಹಿಂಬದಿ ಸವಾರರು 622 ಮಂದಿ ಮೃತರಾಗಿದ್ದಾರೆ. ಅಷ್ಟೇ ಅಲ್ಲದೆ
ಸ್ವಯಂಕೃತ ಅಪಘಾತಗಳಲ್ಲಿಯೂ ವರ್ಷಕ್ಕೆ ಸರಾಸರಿ 162 ಜನ ಮೃತರಾಗುತ್ತಿದ್ದಾರೆ. ನಗರದಲ್ಲಿ ಬಹುತೇಕ ಅಪಘಾತ
ಪ್ರಕರಣಗಳು ರಾತ್ರಿ ವೇಳೆ ಹೆಚ್ಚು ಸಂಭವಿಸುತ್ತಿದ್ದು, ಅದರಲ್ಲೂ ಸಂಜೆ ಆರು ಗಂಟೆಯಿಂದ ರಾತ್ರಿ 12 ಗಂಟೆಯವರೆಗಿನ
ಅವಧಿಯಲ್ಲಿ ನಡೆದಿವೆ. ಹಿಟ್ ಅಂಡ್ ರನ್ ಅಪಘಾತಗಳು ಸಂಜೆ 6ರಿಂದ ಬೆಳಗಿನ ಜಾವ ಆರು ಗಂಟೆಯವರೆಗೆ ಹೆಚ್ಚಿಗೆ ಸಂಭವಿಸಿವೆ.
ಮೂರು ವರ್ಷಗಳಲ್ಲಿ ಶೇ. 68 ಕೇಸ್‌ಗಳು ದಾಖಲಾಗಿದ್ದು, ಮೂರು ವರ್ಷಗಳಲ್ಲಿ 781 ಹಿಟ್ ಅಂಡ್ ಕೇಸ್‌ಗಳು ನಡೆದಿವೆ. 2020ರಲ್ಲಿ 194 ಪ್ರಕರಣಗಳು ದಾಖಲಾಗಿವೆ.
ಮೂರು ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿನ ಅಂಕಿ-ಅಂಶ ವಿಶ್ಲೇಷಿಸಿದಾದ ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಮೃತಪಡುತ್ತಿರುವುದು ಕಂಡು ಬಂದಿದೆ. ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಿದ್ದಲ್ಲಿ ಶೇ. 80 ಅಪಘಾತಗಳನ್ನು ತಪ್ಪಿಸಬಹುದಾಗಿದೆ. ನಗರ ಸಂಚಾರ ಪೊಲೀಸರು ಹಲವು ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದ್ದಾರೆ.
– ಡಾ. ಬಿ.ಆರ್ ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.