ಗೋ ಸಾಕಣೆಗೆ ಯುವಕರು ಮುಂದೆ ಬರಲಿ; ಸ್ವಾಮಿ ಜ್ಯೋತಿರ್ಮಯಾನಂದ
ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ಆರಂಭಿಸಿಲ್ಲ. ದೇಶಿ ತಳಿಗಳ ಸಂರಕ್ಷಣೆಗಾಗಿ ಮಾಡಲಾಗಿದೆ.
Team Udayavani, Jan 25, 2021, 4:09 PM IST
ಬೀದರ: ವಿವೇಕಾನಂದರ ಆಶಯದಂತೆ ಕಳೆದೊಂದು ವರ್ಷದಿಂದ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಗೋ ಸೇವೆ ಆರಂಭಿಸಲಾಗಿದೆ. 2 ಹಸುಗಳಿಂದ ಆರಂಭವಾದ ಗೋ ಶಾಲೆಯಲ್ಲಿ ಇದೀಗ 100 ಹಸುಗಳಿವೆ. ಗೋ ಸಾಕಣೆ ವಿಷಯದಲ್ಲಿ ಆಶ್ರಮ ಮಾದರಿಯಾಗಿ, ಸ್ಥಳೀಯ ನೂರಾರು ಯುವಕರನ್ನೂ ಈ ಕಾರ್ಯದಲ್ಲಿ ಜೋಡಿಸಿಕೊಳ್ಳಬೇಕು ಎನ್ನುವುದೇ ನಮ್ಮ ಸದುದ್ದೇಶ ಎಂದು ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗೋ ತಳಿ ಸಂತತಿ ಕುಸಿಯುತ್ತಿವೆ. ಈ ಹಿಂದೆ 108 ತಳಿಗಳು ಇದ್ದವು. ಆದರೆ, ಇಂದು 15 ರಿಂದ 20 ತಳಿಗಳು ಮಾತ್ರ ಉಳಿದಿರುವುದು ಬೇಸರದ ಸಂಗತಿ. ಆಶ್ರಮದಲ್ಲಿ ದೇಶೀಯ, ಭಾರತೀಯ ತಳಿಗಳ ಹಸು ಸಾಕಲಾಗುತ್ತಿದೆ.
ಗುಜರಾತ್‌ನ ಗೀರ್, ಕಾಂಕ್ರಿಜ್, ದೇವಣಿ ತಳಿ ಹಸು ಸಾಕಲಾಗಿದೆ. 100 ಶಾಲೆ, ಆಸ್ಪತ್ರೆ ನಡೆಸಬಹುದು. ಆದರೆ, ಗೋ ಶಾಲೆ ನಡೆಸುವುದು ಕಷ್ಟಕರ. ಹಸುಗಳನ್ನು ನಾವು ನೋಡಿಕೊಳ್ಳಬೇಕಿಲ್ಲ. ಎಲ್ಲವೂ ಚೆನ್ನಾಗಿದ್ದರೆ, ಹಸುಗಳೇ ನಮ್ಮನ್ನು ನೋಡಿಕೊಳ್ಳುತ್ತವೆ ಎಂದರು.
ಗೋ ಸೇವೆಯಿಂದ ಥೈರಾಯಿಡ್, ಬಿಪಿ ಕಾಯಿಲೆಗಳು ಗುಣಮುಖವಾದ ಉದಾಹರಣೆಗಳು ನಮ್ಮಲ್ಲಿವೆ. ಗೋ ಸಾಕಣೆ ಮಹತ್ವ ಅರಿಯಲಾದರೂ ಯುವಕರು ಗೋ ಸಾಕಣೆಗೆ ಮುಂದೆ ಬರಬೇಕು.
ಮುಂದಿನ ದಿನಗಳಲ್ಲಿ ಆಶ್ರಮದಲ್ಲೇ ಯುವಕರಿಗೆ ದೇಶೀಯ ಗೋ ಸಾಕಣೆ ಕುರಿತು ವಸತಿಯುತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಸರ್ಕಾರ 50 ಎಕರೆ ಜಾಗ ನೀಡಿದರೆ ಮಾದರಿ ಗೋ ಶಾಲೆ ನಿರ್ಮಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
26ಕ್ಕೆ ಗೋ ಶಾಲೆ ವಾರ್ಷಿಕೋತ್ಸವ:
ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ಆರಂಭಿಸಿಲ್ಲ. ದೇಶಿ ತಳಿಗಳ ಸಂರಕ್ಷಣೆಗಾಗಿ ಮಾಡಲಾಗಿದೆ. ಲಕ್ಷಾಂತರ ರೂ. ಬ್ಯಾಂಕ್ ನಿಂದ ಸಾಲ ಪಡೆದು, ದಾನಿಗಳಿಂದ ಗೋ ಸಾಕಣೆ ಮಾಡಲಾಗುತ್ತಿದೆ. ಜ.26ರಂದು ಬೆಳಗ್ಗ 11ಕ್ಕೆ ಗೋ ಶಾಲೆ ವಾರ್ಷಿಕೋತ್ಸವ ಆಚರಣೆ ಮತ್ತು ಗೋವುಗಳಿಗೆ ಮೇವು ಸಾಗಣೆ ಇತರ ಕಾರ್ಯಗಳಿಗಾಗಿ ಗೋ ರಥವನ್ನು ಸಮರ್ಪಣೆ ಮಾಡಲಾಗುತ್ತಿದೆ.
ನೂತನ ಶೆಡ್‌ನ ಉದ್ಘಾಟನೆಯೂ ಜರುಗಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು
ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Rafael Nadal Retire: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.