ಗಣತಂತ್ರ ಭಾರತ
Team Udayavani, Jan 26, 2021, 7:30 AM IST
ಯಾರೆಲ್ಲಾ ಭಾಗಿಯಾಗಿದ್ದರು? :
ಸಿ. ರಾಜಗೋಪಾಲಾಚಾರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರ್‌ಲಾಲ್ ನೆಹರೂ, ಶ್ಯಾಮಪ್ರಸಾದ್ ಮುಖರ್ಜಿ, ಡಾ| ಎಸ್. ರಾಧಾ ಕೃ ಷ್ಣನ್, ಜಗ ಜೀವನ್ ರಾಮ್, ಸರೋಜಿನಿ ನಾಯ್ಡು, ಅಮ್ಮು ಸ್ವಾಮಿನಾಥನ್, ಬೇಗಂ ಎಜಾಜ್ ರಸೂಲ್ ವಿಜಯ ಲಕ್ಷ್ಮೀ ಪಂಡಿತ್ ಮತ್ತಿತರರೂ ಇದ್ದರು.
ಸತ್ಯಮೇವ ಜಯತೆ :
“ಸತ್ಯಮೇವ ಜಯತೆ’ ವಾಕ್ಯ ವನ್ನು ಅಥರ್ವ ವೇದದ ಮುಂಡಕೋಪನಿ ಷತ್‌ನಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಅಬಿದ್ ಅಲಿ ಅವರು 1911ರಲ್ಲಿ ಹಿಂದಿ ಭಾಷೆಗೆ ಪರಿ ವರ್ತಿ ಸಿದರು. ಭಾರತದ ಮೂಲ ಗುರಿ “ಸತ್ಯಮೇವ ಜಯತೆ’ ಆಗಿರ ಬೇಕೆಂದು ತೀರ್ಮಾನಿಸಿದ್ದು ಪಂ| ಮದನ ಮೋಹನ ಮಾಳವೀಯ ಅವರು.
1935ರ ಕಾನೂನು :
ಗಣರಾಜ್ಯವಾಗಿ ಘೋಷಣೆ ಯಾಗುವ ಮೊದಲು ನಮ್ಮಲ್ಲಿದ್ದದ್ದು 1935ರ ಭಾರತ ಸರಕಾರ ಕಾಯಿದೆ. ಸಂವಿಧಾನವನ್ನು ಅಳವಡಿಸಿಕೊಂಡ ದಿನ ಡಾ| ರಾಜೇಂದ್ರ ಪ್ರಸಾದ್ ಮೊದಲ ರಾಷ್ಟ್ರಪತಿಯಾಗಿ ನೇಮಕ ವಾದರು. ಅದಕ್ಕಿಂತ ಮೊದಲು ಗವರ್ನರ್ ಜನರಲ್‌ರ ಆಡಳಿತ.
ಇಂಡಿಯನ್ ಏರ್‌ಫೋರ್ಸ್ :
1950ಕ್ಕೂ ಮೊದಲು ಭಾರತೀಯ ವಾಯುಪಡೆ ರಾಯಲ್ ಇಂಡಿಯನ್ ಏರ್‌ಪೋರ್ಸ್ ಆಗಿತ್ತು. ಮೊದಲ ಗಣರಾಜ್ಯೋತ್ಸವದಂದು ಇಂಡಿ ಯನ್ ಏರ್‌ಪೋರ್ಸ್ ಆಯಿತು
ಮೂಲ ಪ್ರತಿ ಸಂರಕ್ಷಣೆ :
ಸಂವಿಧಾನದ ಮೂಲ ಪ್ರತಿಗಳು ಪಾರ್ಲಿಮೆಂಟಿನ ಗ್ರಂಥಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
1950, ಜನವರಿ 26
ಅರಳಿದ ತಾವರೆ ರಾಷ್ಟ್ರೀಯ ಹೂವು ಆಗಿ ಘೋಷಣೆ.
1963, ಫೆಬ್ರವರಿ 1
ನವಿಲು ರಾಷ್ಟ್ರೀಯ ಪಕ್ಷಿಯಾಗಿ ಘೋಷಣೆ
1973 ಎಪ್ರಿಲ್
ಹುಲಿ ರಾಷ್ಟ್ರ ಪ್ರಾಣಿ ಆಗಿ ಘೋಷಣೆ
ಈ ಬಾರಿ ಮಂಗಳವಾರ ಬೆಳಗ್ಗೆ 8ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಮೆರವಣಿಗೆಯು 9 ಗಂಟೆಗೆ ಆರಂಭಗೊಂಡು 11.30ಕ್ಕೆ ಕೊನೆಗೊಳ್ಳುತ್ತದೆ.
ಇಂದು ಸರಳ ಸುಂದರ ಕಾರ್ಯಕ್ರಮ :
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಕೋವಿಡ್ ಕಾರಣದಿಂದ ಸರಳವಾಗಿ ನಡೆಯಲಿದೆ. ಆದರೆ 72ನೇ ಗಣರಾಜ್ಯೋತ್ಸವ ವಿಭಿನ್ನ ಮತ್ತು ವಿಶೇಷ.
ಮೆರವಣಿಗೆ ರಾಷ್ಟ್ರಪತಿ ಭವನದಿಂದ ಆರಂಭಗೊಂಡು ಇಂಡಿಯಾ ಗೇಟ್ ವರೆಗೂ ಸಾಗುತ್ತದೆ. ರಾಜಪಥ ವಿಜಯ ಚೌಕ್, ಅಮರ್ ಜವಾನ್ ಜ್ಯೋತಿ, ಇಂಡಿಯಾ ಗೇಟ್ ಪ್ರಿನ್ಸೆಸ್ ಪ್ಯಾಲಸ್, ತಿಲಕ್ ಮಾರ್ಗದಿಂದ ಅಂತಿಮವಾಗಿ ಇಂಡಿಯಾ ಗೇಟ್ ತಲುಪುತ್ತದೆ. ಮೆರವಣಿಗೆಯಲ್ಲಿ ಭಾರತೀಯ ಸೇನಾ ತುಕಡಿಗಳ ಸಂಖ್ಯೆಯನ್ನೂ ಕಡಿಮೆಗೊಳಿಸಲಾಗಿದೆ.
ಲಡಾಕ್ ಸ್ತಬ್ಧ ಚಿತ್ರ :
ಪರೇಡ್‌ನಲ್ಲಿ ಲಡಾಕ್ ಸ್ತಬ್ಧಚಿತ್ರವಿರಲಿದೆ. ಲೇಹ್ ಜಿÇÉೆಯ ಥಿಕ್ಸೆ ಬೆಟ್ಟದ ಮೇಲಿರುವ ಸುಂದರ ಥಿಕ್ಸೆ ಮಠವನ್ನು ಒಳಗೊಂಡಿರಲಿದೆ. ಲೇಹ್ ಬಳಿಯ ಹ್ಯಾನ್ಲನಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯವನ್ನು ಸಹ ಒಳಗೊಂಡಿದೆ.
ಮುಖ್ಯ ಅತಿಥಿಯಿಲ್ಲದ ಪರೇಡ್ :
ಈ ಬಾರಿ ಮುಖ್ಯ ಅತಿಥಿಯಾಗಿ ಯಾರೂ ಭಾಗವಹಿಸುತ್ತಿಲ್ಲ. ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಅತಿಥಿಗಳಿಲ್ಲದೇ ಮೆರವಣಿಗೆ ನಡೆಯುತ್ತಿದೆ. ಮೊದಲು ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಆದರೆ ಬ್ರಿಟನ್‌ನಲ್ಲಿ ಹೊಸ ಕೊರೊನಾ ಸೋಂಕಿನ ರೂಪಾಂತರ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಅವರು ತಮ್ಮ ಭೇಟಿಯನ್ನು ರದ್ದುಗೊಳಿಸಿದರು.
ಎಷ್ಟು ಜನರಿಂದ ಪರೇಡ್ ವೀಕ್ಷಣೆ :
ಈ ಬಾರಿ 25,000 ಮಂದಿಗೆ ಮಾತ್ರ ಪರೇಡ್ ವೀಕ್ಷಿಸಲು ಅನುಮತಿ ನೀಡಲಾಗಿದೆ. ಕಳೆದ ಬಾರಿ 1,50,000 ಮಂದಿಗೆ ಅವಕಾಶ ನೀಡಲಾಗಿತ್ತು.
15 ವರ್ಷದೊಳಗಿನ ಮಕ್ಕಳಿಗೆ ಅವಕಾಶ ನೀಡಲಾಗಿಲ್ಲ. ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಮೋಟಾರ್ ಸೈಕಲ್ ಸ್ಟಂಟ್ ಈ ಬಾರಿ ಕಾಣ ಸಿಗುವುದಿಲ್ಲ. ಶೌರ್ಯ ಪ್ರಶಸ್ತಿ ಪುರಸ್ಕೃತರ ಮೆರವಣಿಗೆಯನ್ನೂ ಈ ಬಾರಿ ನಡೆಸಲಾಗುತ್ತಿಲ್ಲ.
ಈ ಬಾರಿಯ ವಿಶೇಷ! :
ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ರಫೇಲ್ ಫೈಟರ್ ಜೆಟ್ ಮತ್ತು ಮೊದಲ ಮಹಿಳಾ ಫೈಟರ್ ಪೈಲಟ್ ಭಾವನಾ ಕಾಂತ್ ಭಾಗವಹಿಸುತ್ತಿರುವುದು ವಿಶೇಷ. ಜತೆಗೆ ಅಯೋಧ್ಯೆಯ ರಾಮಮಂದಿರ ಪ್ರತಿಕೃತಿ ಒಳಗೊಂಡಂತೆ 9 ಸಾಕ್ಷ್ಯಚಿತ್ರಗಳಿರಲಿವೆ.
ಆಗಸ್ಟ್ 29, 1947
ಡಾ| ಬಿ. ಅರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನೆ ಸಮಿತಿ ನೇಮಕ
7635
ಪ್ರಸ್ತಾವಗೊಂಡ ತಿದ್ದುಪಡಿಗಳು
2473
ಚರ್ಚೆಗೆ ಒಳಪಟ್ಟಿದ್ದು
2 ವರ್ಷ, 11 ತಿಂಗಳು, 18 ದಿವಸ
ಸಂವಿಧಾನ ರಚನೆಗೆ ತಗಲಿದ ಅವಧಿ
1949ರ ನವೆಂಬರ್ 26
ಕರಡು ಸಲ್ಲಿಕೆ
ಜನವರಿ 24, 1950
ಸಂವಿಧಾನಕ್ಕೆ 284 ಮಂದಿ ಸದಸ್ಯರು ಸಹಿ ಹಾಕಿದರು.
395 ವಿಧಿಗಳು,
8 ಅನುಸೂಚಿ, 8 ವಿಭಾಗ
ಮೂಲ ಸಂವಿಧಾನದಲ್ಲಿದ್ದದ್ದು
448 ವಿಧಿ, 12 ಅನುಸೂಚಿ,
25 ವಿಭಾಗ, 104 ತಿದ್ದುಪಡಿ
ಈಗಿನ ಸಂವಿಧಾನದಲ್ಲಿರುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.