ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ!
Team Udayavani, Jan 26, 2021, 8:31 AM IST
26-01-2021
ಮೇಷ: ವೃತ್ತಿರಂಗದಲ್ಲಿ ಅಭಿವೃದ್ಧಿದಾಯಕವಾದ ಬೆಳವಣಿಗೆಗಳು ಕಂಡುಬಂದರೂ ತುಸು ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಮರ್ಪಣಾ ಭಾವ ಇರತಕ್ಕದ್ದು.
ವೃಷಭ: ಅವಿವಾಹಿತರು ಬಂದ ಸಂಬಂಧಗಳನ್ನು ಸದುಪಯೋಗಿಸಿಕೊಂಡಲ್ಲಿ ಮಾತ್ರ ವೈವಾಹಿಕ ಭಾಗ್ಯವು ಕೈಗೂಡಲಿದೆ. ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರುಕುಳದಿಂದ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದು ಬೇಸರವಾದೀತು.
ಮಿಥುನ: ನಿಮ್ಮ ನಿರ್ಧಾರಗಳು ಅಚಲವಾಗಿರದೆ ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿದೆ. ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ. ವೃತ್ತಿರಂಗದ ಯೋಜನೆಯೊಂದು ಸಾಕಾರಗೊಳ್ಳಲಿದೆ. ಅಧಿಕ ಖರ್ಚು ಬರಲಿದೆ.
ಕರ್ಕ: ಹಂತ ಹಂತವಾಗಿ ಶತ್ರುಬಾಧೆಯು ಕಡಿಮೆಯಾಗಲಿದೆ. ಅಲೆದಾಟವಿದ್ದರೂ ಕಾರ್ಯಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ವಿಶೇಷ ಪ್ರಯಾಣವು ನಿಮಗೆ ಶುಭ ತಂದೀತು. ದೇವತಾನುಗ್ರಹಕ್ಕಾಗಿ ಪ್ರಾರ್ಥಿಸುವುದು.
ಸಿಂಹ: ಗೃಹದಲ್ಲಿ ಸಣ್ಣ ಸಣ್ಣ ಮನಸ್ತಾಪದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ತಾಳ್ಮೆ ಸಹನೆ ಅಗತ್ಯವಿದೆ. ಚಿಂತೆಯನ್ನು ಬದಿಗೊತ್ತಿರಿ. ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫಲಕಾರಿಯಾಗಲಿದೆ. ಸಂತೋಷದಿಂದಿರಿ.
ಕನ್ಯಾ: ನವದಂಪತಿಗಳಿಗೆ ಸಂತಾನಭಾಗ್ಯದ ಕುರುಹು ಕಂಡುಬಂದು ಸಂತಸವಾಗಲಿದೆ. ಅಧ್ಯಯನದಲ್ಲಿ ಸಮರ್ಪಣಾ ಮನೋಭಾವ ಸಾರ್ಥಕ್ಯ ತಂದು ಕೊಡಲಿದೆ. ವಾತ, ಪಿತ್ತ, ಕಫದ ಬಾಧೆಯು ಕಾಡಲಿದೆ.
ತುಲಾ: ಹೊಸತನ ಕಾರ್ಯಸಾಧನೆಗೆ ಪೂರಕವಾಗಲಿದೆ. ಸಾಂಸಾರಿಕವಾಗಿ ಸಂತಸದ ವಾತಾವರಣ ಉತ್ಸಾಹಿಕರನ್ನಾಗಿ ಮಾಡಲಿದೆ. ವೈವಾಹಿಕ ಭಾಗ್ಯ ಫಲ ನೀಡಲು ಹೊಂದಾಣಿಕೆಯ ಅಗತ್ಯವಿದೆ. ಚಂಚಲತೆ ಕಾಡಬಹುದು.
ವೃಶ್ಚಿಕ: ಆರೋಗ್ಯಭಾಗ್ಯವು ಹಂತಹಂತವಾಗಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವು ಬಾಳಿಗೆ ಭದ್ರತೆಯನ್ನು ನೀಡಲಿದೆ. ಕಾರ್ಯರಂಗದಲ್ಲಿ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗಬಹುದಾಗಿದೆ.
ಧನು: ಬೇಸಾಯ, ಕೃಷಿಯ ಅಭಿರುಚಿಯನ್ನು ಹೆಚ್ಚಿಸಿಕೊಂಡು ಕಠಿಣ ಪರಿಶ್ರಮದಿಂದ ದುಡಿದಲ್ಲಿ ಹೆಚ್ಚಿನ ಲಾಭವು ನಿಮಗೆ ದೊರಕಲಿದೆ. ಕೋರ್ಟು ಕಚೇರಿ ವ್ಯವಹಾರಗಳು ಅಸಾಧ್ಯವಾದುದನ್ನು ಸಾಧ್ಯ ಮಾಡಿಸಲಿದೆ.
ಮಕರ: ಹೂಡಿಕೆಗಳು ತಕ್ಕಮಟ್ಟಿಗೆ ಲಾಭಕರವಾಗಿ ಕಂಡುಬಂದಾವು. ಶತ್ರುಬಾಧೆ-ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಇರದು. ಆರ್ಥಿಕವಾಗಿ ಕಿರಿಕಿರಿಯನ್ನು ಅನುಭವಿಸುವಿರಿ. ಕಾಳಜಿ ಮುಖ್ಯವಾಗಿದೆ.
ಕುಂಭ: ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿಬಂದರೂ ಅದನ್ನು ಸಹಿಸಿ ಮುನ್ನಡೆದರೆ ಉತ್ತಮ. ಯಾವುದೇ ವಾದ ವಿವಾದಗಳಿಗೆ ಸಿಲುಕದಿರಿ. ಹಿರಿಯರ ಆರೋಗ್ಯಕ್ಕಾಗಿ ಅಲೆದಾಟವು ತೋರಿಬರುವುದು.
ಮೀನ: ಕುಟುಂಬ ವರ್ಗದಲ್ಲಿ ಸಹಮತವಿರದೆ ಕೆಲಸಕಾರ್ಯಗಳು ವಿಳಂಬಗತಿ ಪಡೆದಾವು. ಕಾರ್ಯಕ್ಷೇತ್ರದಲ್ಲಿ ಬುದ್ಧಿಜೀವಿಗಳಿಗೆ ಮುಖಭಂಗವಾದೀತು. ರಾಜಕೀಯರಂಗದಲ್ಲಿ ವಂಚನೆಗೆ ಆಸ್ಪದವಿರುತ್ತದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.