ಸೀತಾನದಿ ತಟದಲ್ಲಿ ಸಂಪನ್ನಗೊಂಡ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ವೈದೇಹಿಯವರ ಅಧ್ಯಕ್ಷತೆಯಲ್ಲಿ ಸರಳ ಕಾರ್ಯಕ್ರಮ; ಗಮನಸೆಳೆದ ಗೋಷ್ಠಿಗಳು

Team Udayavani, Jan 27, 2021, 4:40 AM IST

ಸೀತಾನದಿ ತಟದಲ್ಲಿ ಸಂಪನ್ನಗೊಂಡ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಕೋಟ:  ಸೀತಾ ನದಿ ತಟದಲ್ಲಿರುವ ಸುಂದರ ಊರು ಮಾಬುಕಳದ ಚೇತನಾ ಪ್ರೌಢಶಾಲೆಯ ಮೈದಾನದಲ್ಲಿ 14ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ  “ಇರುವಂತಿಗೆ’   ಜ. 26ರಂದು ಅತ್ಯಂತ ಸರಳವಾಗಿ ಮೂಡಿಬಂತು.

ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲೆ  ಆಶ್ರಯದಲ್ಲಿ ಉಸಿರು ಕೋಟ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ವೈದೇಹಿಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು.

ಆರಂಭದಲ್ಲಿ ಬ್ರಹ್ಮಾವರ ತಾ.ಪಂ. ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರಿಷತ್‌ ಧ್ವಜ ಅರಳಿಸಿದರು. ಮಹಿಳಾ ಸಾಧಕಿ ಜಾನಕಿ ಹಂದೆ, ಬೆಂಗಳೂರು ಕೃಷಿ ವಿ.ವಿ. ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಕುಲಾಲ್‌  ಆವರ್ಸೆ ಜಂಟಿಯಾಗಿ ದೀಪ  ಪ್ರಜ್ವಲನೆ ಮೂಲಕ ಸಮ್ಮೇಳನ ಉದ್ಘಾಟಿಸಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಚೇತನಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್‌ ಕುಮಾರ್‌ ಶೆಟ್ಟಿ ಉದ್ಘಾಟಿಸಿದರು.  ಕಸಾಪ ಪೂರ್ವಾಧ್ಯಕ್ಷ  ಹರಿಕೃಷ್ಣ ಪುನರೂರು ಸಮ್ಮೇಳನಾಧ್ಯಕ್ಷರ  ಭಾಷಣ ಬಿಡುಗಡೆಗೊಳಿಸಿದರು.

ನನ್ನ ಕಥೆ ನಿಮ್ಮ ಜತೆ ವಿಚಾರಗೋಷ್ಠಿ, ಗ್ರಾಮ್ಯ ಭಾಷೆ ಸೊಗಡು, ರಂಗಭೂಮಿ, ಹೈನುಗಾರಿಕೆ, ಕೃಷಿ, ಪತ್ರಿಕೋದ್ಯಮದ ಸವಾಲುಗಳು ವಿಚಾರಗಳನ್ನೊಳ‌ಗೊಂಡ ನಮ್ಮ ಉಡುಪಿ ಎನ್ನುವ ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕೂಟ ಮಹಾಜಗತ್ತು ಮಹಿಳಾ ವೇದಿಕೆ ಯಿಂದ ನೃತ್ಯ ವೈಭವ, ಗೀತಾ ಗಾಯನ, ಹಿರಿಯ ಚೇತನ ಕೋಟೇಶ್ವರ ಸುಬ್ಬಣ್ಣ ಶೆಟ್ಟಿಯವರೊಂದಿಗೆ ನನ್ನ ಭಾಷೆ-ನನ್ನ ಹೆಮ್ಮೆ ಸಂವಾದ, ಬಹಿರಂಗ ಅಧಿವೇಶನ ಅತ್ಯಂತ ಸುಂದರವಾಗಿ ನೆರವೇರಿತು.

ಸಮ್ಮೇಳನದ ಉಪ ವೇದಿಕೆಯಲ್ಲಿ ಯುವ ಕವಿಗಳಿಂದ ಕವಿಗೋಷ್ಠಿ, ಮರೆಯಲಾಗದ ಮಹನೀಯರು ವಿಚಾರಗೋಷ್ಠಿ, ಯಕ್ಷಗಾನದ ಸ್ಥಿತ್ಯಂತರ ಗಳ ಕುರಿತು ವಿಚಾರ ವಿನಿಮಯ, ಮಹಿಳೆ ಮತ್ತು ಸಾಮಾಜಿಕ ಸವಾಲುಗಳು ಎನ್ನುವ ವಿಚಾರದ ಕುರಿತು ಚರ್ಚೆ ಹಾಗೂ ವೈದೇಹಿಯವರ ಬರಹದಲ್ಲಿ ಮಹಿಳಾ ಪ್ರಜ್ಞೆ ವಿಚಾರ ವಿನಿಮಯ ನಡೆಯಿತು.

ಉದಯವಾಣಿ ಕುರಿತು ಪ್ರಸ್ತಾವ :

ಸಮ್ಮೇಳನಾಧ್ಯಕ್ಷೆ ಲೇಖಕಿ ವೈದೇಹಿ ಯವರನ್ನು ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು ಎನ್ನುವ ಆಶಯ ವ್ಯಕ್ತಪಡಿಸಿರುವುದು ಅವರಲ್ಲಿನ ಸ್ತ್ರೀಪರ ಚಿಂತನೆಗಳು ವ್ಯಕ್ತವಾಗುತ್ತವೆ ಮತ್ತು ಸಂದರ್ಶನ ಉತ್ತಮವಾಗಿದ್ದು ಮನದ ಮಾತುಗಳು ದಾಖಲಾಗಿವೆ ಎಂದು  ಸಮ್ಮೇಳನ ಉದ್ಘಾಟಿಸಿದ ಜಾನಕಿ ಹಂದೆ ತಿಳಿಸಿದರು.

ಸರಳ ಮೆರವಣಿಗೆ  :

ಈ ಹಿಂದಿನ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ  ಮೆರವಣಿಗೆ ಕೇವಲ ಚೆಂಡೆ ನಿನಾದ, ಮಂಗಳವಾದ್ಯದೊಂದಿಗೆ, ಸಮ್ಮೇಳನದ  ವಠಾರ ದಲ್ಲಿ  ಸರಳವಾಗಿ ನಡೆಯಿತು.

ವ್ಯವಸ್ಥಿತ ಊಟೋಪಚಾರ  : ಸಮ್ಮೇಳಕ್ಕೆ ಆಗಮಿಸಿದವರಿಗೆ ಬೆಳಗ್ಗೆ ಉಪಹಾರ, ಅಪರಾಹ್ನ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಕೈಗೊಳ್ಳಲಾಗಿತ್ತು. ಊಟೋಪಚಾರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.