ಜಾನಪದ ಸಂಗೀತಕ್ಕೆ ತಲೆದೂಗಿದ ಸಿಎಂ
Team Udayavani, Jan 27, 2021, 11:36 AM IST
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಾನಪದ ಸಂಗೀತಕ್ಕೆ ತಲೆದೂಗಿದರು. ರಾಷ್ಟ್ರಕವಿ ಕುವೆಂಪು, ವರಕವಿ ದ.ರಾ.ಬೇಂದ್ರೆ, ಮೈಸೂರು ಮಲ್ಲಿಗೆ ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿ ಹಾಗೂ ಎಚ್. ಎಸ್.ವೆಂಕಟೇಶ ಮೂರ್ತಿ ಅವರ ಗೀತೆಗಳನ್ನು ಆಲಿಸಿ ಆನಂದಿಸಿದರು.
72ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಂದು ಗಂಟೆಗಳ ಕಾಲ ವೀಕ್ಷಿಸಿದರು. ಜಾನಪದ ಕಲಾವಿದರ ಹಾಡು ಮತ್ತು ನೃತ್ಯಕ್ಕೆ ಚಪ್ಪಾಳೆ ತಟ್ಟಿ ಖುಷಿ ಪಟ್ಟರು. ಶಿವಮೊಗ್ಗ ಮೂಲದ ಗಾಯಕಿ ದೀಪಾ ಶ್ರೀಕಾಂತ್, ಜನಪದ ಗೀತೆಗಳ ಹಾಡು ಗಾರ್ತಿ ಸವಿತಾ ಗಣೇಶ್ ಪ್ರಸಾದ್ ಸೇರಿ ದಂತೆ ಹಲವು ಗಾಯಕ -ಗಾಯಕಿಯರು ರಾಷ್ಟ್ರಕವಿ ಕುವೆಂಪು ರಚನೆಯ ನೂರು ದೇವರುಗಳ ನೂಕಾಚೆ ದೂರ,,.ಕೆ.ಎಸ್. ನರಸಿಂಹಸ್ವಾಮಿ ಅವರ ದೀಪವು ನಿನ್ನದೇ.. ಸೇರಿದಂತೆ ಹಲವು ಜನಪ್ರಿಯ ಕವಿತೆಗಳನ್ನು ಹಾಡಿ ನೆರೆದ ಸಂಗೀತ ರಸಿಕರ ಮನ ರಂಜಿಸಿದರು. ಹಲವು ದೇಶಭಕ್ತಿ ಗೀತೆಗಳಿಗೆ ಬೆಂಗಳೂರಿನ ಭ್ರಮರಿ ತಂಡ ನೃತ್ಯ ಪ್ರದರ್ಶಿಸಿತು.
ಇದನ್ನೂ ಓದಿ:ಮಾರುಕಟ್ಟೆಗೆ ಸಜ್ಜಾಗಿದೆ ಜೀಪ್ ಕಂಪಾಸ್ ಫೇಸ್ ಲಿಫ್ಟ್
ಸ್ನೇಹ ಕಪ್ಪಣ್ಣ ನಿರ್ದೇಶನದಲ್ಲಿ ಸಮೂಹ ನೃತ್ಯಗಳು ಮೂಡಿ ಬಂದವು. ಹಾಗೆಯೇ ರಾಮನಗರದ ಜಾನಪದ ಕಲಾವಿದ ಮಹಾದೇವ್ ಮತ್ತು ತಂಡ ಕಂಸಾಳೆ , ಮಂಡ್ಯದ ಕೆ.ಪಿ.ದೇವರಾಜ್ ಮತ್ತು ತಂಡ ಪೂಜಾ ಕುಣಿತವನ್ನು ಮತ್ತು ಮುಧೋಳದ ರಾಚಯ್ಯ ಮತ್ತು ತಂಡ ಜೋಗತಿ ನೃತ್ಯ ಪ್ರದರ್ಶಿಸಿತು. ರಾಮನಗರ ಜಾನಪದ ಕಲಾವಿದ ಜೈಕುಮಾರ್ ಅವರ ತಂಡ ಪಟಾ ಕುಣಿತದ ಮೂಲಕ ಸಂಗೀತ ರಸಿಕರನ್ನು ಆನಂದಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.