ದೆಹಲಿ ಪ್ರತಿಭಟನೆಗೆ ಪಾಕ್-ಕಾಂಗ್ರೆಸ್ ಕುಮಕ್ಕು: ಪಾಟೀಲ್
Team Udayavani, Jan 27, 2021, 3:28 PM IST
ಕೊಪ್ಪಳ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಅವರೆಲ್ಲ ಭಯಾನಕ ಕೃತ್ಯ ಎಸಗುವ ಭಯೋತ್ಪಾದಕರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಭಯೋತ್ಪಾದಕರು. ಇವರಿಗೆಲ್ಲ ಬೇರೆ ಬೇರೆ ದೇಶಗಳ ಹಾಗೂ ಕಾಂಗ್ರೆಸ್ ಬೆಂಬಲವಿದೆ. ರೈತರು ಯಾವತ್ತೂ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ಇತಿಹಾಸದಲ್ಲಿ ಇಲ್ಲ. ಇವರಿಗೆಲ್ಲ ಪಾಕಿಸ್ತಾನದವರ ಕುಮ್ಮಕ್ಕಿದೆ. ಕೆಂಪು ಕೋಟೆ ಬಳಿ ಹೋಗಿ ಗಲಾಟೆ ಮಾಡುತ್ತಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಬೇಕು.
ಪ್ರಧಾನಿ ಮೋದಿ ಜನಪ್ರಿಯತೆ ಕಂಡು ಹತಾಶಾರಾಗಿದ್ದಾರೆ. ಮೋದಿ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ ಅಂದುಕೊಂಡವರು ಭಯೋತ್ಪಾದಕರನ್ನು ಕರೆತಂದು ಅವರಿಗೆ ರೈತರ ಹೆಸರಿಟ್ಟು ಭಯೋತ್ಪಾದನೆ ಮಾಡಿಸಿದ್ದಾರೆ ಎಂದರು.
ಈ ಪ್ರತಿಭಟನೆಗೆ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಕುಮ್ಮಕ್ಕಿದೆ. ನಾವು ಇದನ್ನು ಖಂಡಿಸುತ್ತೇವೆ. ಕೆಂಪು ಕೋಟೆಗೆ ತನ್ನದೇ ಆದ ಇತಿಹಾಸವಿದೆ. ರಾಷ್ಟ್ರದ ಧ್ವಜಾರೋಹಣ ಮಾಡಲು ಒಂದು ಪದ್ಧತಿ ಇದೆ. ರೈತ ಒಬ್ಬ ಪ್ರಧಾನಿಯಾಗಿ ಹೋಗಿ ರಾಷ್ಟ್ರ ಧ್ವಜಾರೋಹಣ ಮಾಡಲಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ರೈತರ ಹೆಸರಿನಲ್ಲಿ ಅಲ್ಲಿ ಹೋಗಿ ಯಾವುದೋ ಬಾವುಟ ಹಾರಿಸುತ್ತಾರೆ ಅಂದರೆ ಅವರೆಲ್ಲ ಭಯೋತ್ಪಾದಕರು. ನಾಳೆ ದೇಶದ ಗಡಿಯಲ್ಲಿ ಸೈನ್ಯಕ್ಕೆ ರೈತರ ಹೆಸರಲ್ಲಿ ದಾಳಿ ಮಾಡಲೂ ಹೇಸುವುದಿಲ್ಲ. ಸೈನಿಕರಿಗೆ ರೈತರ ಹೆಸರಲ್ಲಿ ಗುಂಡಿಟ್ಟು ಹೊಡೆದರೆ ಏನ್ಮಾಡ್ತೀರಿ? ಯಾರೇ ಕಾನೂನು ಕೈಗೆ ತೆಗೆದುಕೊಂಡರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ:ಕಲಬುರಗಿ: ವಿವಿಧ ವರ್ಗದವರಿಗೂ ಕೋವಿಡ್ ಲಸಿಕೆ
ಕಾಂಗ್ರೆಸ್‌ನವರ ಪ್ರಚೋದನೆಯಿಂದ ರೈತರು ದೆಹಲಿ, ಕರ್ನಾಟಕದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಂಚಾರ ಸುಗಮವಾಗಬೇಕು. ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದಿರಬಹುದು. ಕೃಷಿ ಕಾಯ್ದೆಯನ್ನು 2008, 2013 ಹಾಗೂ 2019ರಲ್ಲಿ ಇವರೇ ವಿರೋಧಿ ಸಿದರು. ಈಗ ರೈತರಿಗೆ ಪ್ರಚೋದನೆ ನೀಡಿ ಪ್ರತಿಭಟನೆ ನಡೆಸುವಂತೆ ಮಾಡಿದ್ದಾರೆ ಎಂದರು.
ಸಿಎಂಗೆ ಖಾತೆ ಬದಲಾವಣೆ ಮಾಡುವ ಪರಮಾಧಿಕಾರವಿದೆ. ಅವರು ಹಿರಿಯರು, ಮುತ್ಸದ್ಧಿಗಳು ಅದೆಲ್ಲವನ್ನು ಅವರು ನಿಭಾಯಿಸುತ್ತಾರೆ. ಆನಂದ್ ಸಿಂಗ್ ಖಾತೆ ಬದಲಾವಣೆ ಮಾಡಿದ್ದು, ಅವರಿಗೆ ಅಸಮಾಧಾನ ಇದೆ. ಸಿಎಂ ಭೇಟಿ ಮಾಡಿ ಮಾತನಾಡಲಿದ್ದಾರೆ. ಎಚ್. ವಿಶ್ವನಾಥ್ ಸರ್ಕಾರದಿಂದ ನಾಮ ನಿರ್ದೇಶನಗೊಂಡವರು. ಕೋರ್ಟ್ ಜನರಿಂದ ಆಯ್ಕೆಯಾದವರಿಗೆ ಮಂತ್ರಿ ಸ್ಥಾನ ಕೊಡಲು ಬರುತ್ತದೆ, ಸರ್ಕಾರದಿಂದ ನಾಮ ನಿರ್ದೇಶನಗೊಂಡವರಿಗೆ ಬರಲ್ಲ ಎಂದು ಹೇಳಿದ್ದರಿಂದ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.