ಸರಳವಾಗಿ ಸೆಟ್ಟೇರಿದ ಬೆಲ್ಬಾಟಂ-2: ರಿಷಭ್ ಗೆ ಹರಿಪ್ರಿಯಾ, ತಾನ್ಯ ಹೋಪ್ ಸಾಥ್
Team Udayavani, Jan 28, 2021, 8:23 AM IST
ಎರಡು ವರ್ಷದ ಹಿಂದೆ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ, ರಿಷಭ್ ಶೆಟ್ಟಿ ಅಭಿನಯದ “ಬೆಲ್ ಬಾಟಂ’ ಚಿತ್ರದ ಸೀಕ್ವೆಲ್ ತೆರೆಮೇಲೆ ಬರುತ್ತಿರುವ ವಿಷಯವನ್ನು ಇದೇ “ಬಾಲ್ಕನಿ’ಯಲ್ಲಿ ನೋಡಿರುತ್ತೀರಿ.
ಇದೀಗ “ಬೆಲ್ ಬಾಟಂ’ ಚಿತ್ರದ ಮುಂದುವರಿದ ಭಾಗಕ್ಕೆ “ಬೆಲ್ ಬಾಟಂ-2′ ಎಂದು ಹೆಸರಿಡಲಾಗಿದ್ದು, ಬುಧವಾರ ಈ ಚಿತ್ರದ ಮುಹೂರ್ತ ಸಮಾರಂಭ ಕೂಡ ನೆರವೇರಿತು. ಜೊತೆಗೆ “ಬೆಲ್ ಬಾಟಂ-2′ ಟೈಟಲ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
ಇನ್ನು “ಬೆಲ್ ಬಾಟಂ-2′ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ನಟ ಪುನೀತ್ ರಾಜಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಇನ್ನು “ಬೆಲ್ ಬಾಟಂ’ ಚಿತ್ರದ ಮೊದಲ ಭಾಗದಲ್ಲಿ ಸಿನಿಪ್ರೇಕ್ಷಕರ ಮನರಂಜಿಸಿದ್ದ ಡಿಟೆಕ್ಟಿವ್ ದಿವಾಕರ್ ಅಲಿಯಾಸ್ ರಿಷಭ್ ಶೆಟ್ಟಿ, “ಬೆಲ್ ಬಾಟಂ-2’ನಲ್ಲಿ ಚೆಂಡು ಹೂವಿನ ಪ್ರಕರಣ ಎಂಬ ಮತ್ತೂಂದು ಹೊಸ ಥ್ರಿಲ್ಲಿಂಗ್ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
“ಬೆಲ್ ಬಾಟಂ-2’ನಲ್ಲಿ ಹರಿಪ್ರಿಯಾ, ತಾನ್ಯಾ ಹೋಪ್ ಇಬ್ಬರು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ “ಬೆಲ್ ಬಾಟಂ’ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು “ಬೆಲ್ ಬಾಟಂ-2′ ಮುಂದುವರೆದ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಚಿತ್ರಕ್ಕೆ ದಯಾನಂದ ಟಿ.ಕೆ ಕಥೆ ಬರೆದಿದ್ದು, ಸಂತೋಷ್ ಕುಮಾರ್ ಕೆ.ಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಬೆಲ್ ಬಾಟಂ’ ಚಿತ್ರಕ್ಕೆ ಆ್ಯಕ್ಷನ್- ಕಟ್ ಹೇಳಿದ್ದ ನಿರ್ದೇಶಕ ಜಯತೀರ್ಥ ಅವರೇ “ಬೆಲ್ ಬಾಟಂ-2′ ಚಿತ್ರಕ್ಕೂ ಆಕ್ಷನ್- ಕಟ್ ಹೇಳುತ್ತಿದ್ದಾರೆ.
ಸದ್ಯ ಚಿತ್ರದ ಚಿತ್ರೀಕರಣ ಶುರು ಮಾಡಿರುವ ಚಿತ್ರತಂಡ, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವಷಾಂತ್ಯದೊಳಗೆ “ಬೆಲ್ ಬಾಟಂ-2′ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.