ಬುಡಾ ಅಧ್ಯಕ್ಷ ದಿಢೀರ್ ಬದಲಾವಣೆ
ನೂತನ ಅಧ್ಯಕ್ಷರಾಗಿ ಕೆ.ಎ. ರಾಮಲಿಂಗಪ್ಪ ಅ ಧಿಕಾರ ಸ್ವೀಕಾರ
Team Udayavani, Jan 28, 2021, 5:22 PM IST
ಬಳ್ಳಾರಿ: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ದಿಢೀರ್ ಬದಲಾವಣೆ·ಮಾಡಲಾಗಿದೆ. ನೂತನ ಅಧ್ಯಕ್ಷರನ್ನಾಗಿ
ಬಿಜೆಪಿ ಹಿರಿಯ ಮುಖಂಡ ಕೆ.ಎ.·ರಾಮಲಿಂಗಪ್ಪರನ್ನು ನೇಮಕ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದ್ದು ಬುಧವಾರಸಂಜೆ ಅಧಿ ಕಾರ ವಹಿಸಿಕೊಂಡಿದ್ದಾರೆ.
ಪ್ರಾಧಿಕಾರದ ಮಾಜಿ ಅಧ್ಯಕ್ಷರು ಅಥವಾಆಯುಕ್ತರಿಂದ ಅ ಧಿಕಾರ ಸ್ವೀಕರಿಸಬೇಕಿತ್ತು.ಆದರೆ ತರಾತುರಿಯಲ್ಲಿ ಕಚೇರಿಯ ಪ್ರಥಮದರ್ಜೆ ಸಹಾಯಕರಿಂದ ಅಧಿ ಕಾರ ಸ್ವೀಕರಿಸಿಪುಸ್ತಕಕ್ಕೆ ಸಹಿ ಹಾಕಿದ್ದಾರೆ.
ಪಕ್ಷದಲ್ಲೇ ಹಲವು ವಿರೋಧಗಳ ನಡುವೆಬಳ್ಳಾರಿ ನಗರಾಭಿವೃದ್ಧಿ ಪ್ರಾ ಧಿಕಾರದಅಧ್ಯಕ್ಷರಾಗಿ ಅ ಧಿಕಾರ ವಹಿಸಿಕೊಂಡಿದ್ದದಮ್ಮೂರು ಶೇಖರ್ ಅಧಿಕಾರವಧಿವರ್ಷದೊಳಗೆ ಮುಗಿದಿದ್ದು, ರಾಜಕೀಯವಲಯದಲ್ಲಿ ಕುತೂಹಲ ಮೂಡಿಸಿದೆ.ಉತ್ತಮವಾಗಿಯೇ ಕಾರ್ಯನಿರ್ವಹಿಸಿದ್ದದಮ್ಮೂರು ಶೇಖರ್ ಅವರನ್ನು ದಿಢೀರ್‌ಬದಲಾಯಿಸಿ ಅವರ ಸ್ಥಾನಕ್ಕೆ ಜಿಪಂ ಮಾಜಿಉಪಾಧ್ಯಕ್ಷ ಕೆ.ಎ. ರಾಮಲಿಂಗಪ್ಪರನ್ನು
ನಿಯೋಜಿಸಿದೆ.
ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆ ಬಂದ ಬಳಿಕಖಾಲಿಯಾಗಿದ್ದ ಬುಡಾ ಅಧ್ಯಕ್ಷ ಸ್ಥಾನಕ್ಕೆ ಕಳೆದ2019ರ ಕೊನೆಯಲ್ಲಿ ದಮ್ಮೂರು ಶೇಖರ್‌ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಿಸಿರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.ಮಾಜಿ ಸಚಿವ ಜಿ. ಜನಾರ್ದನರೆಡ್ಡಿಯವರ
ಆಪ್ತರಾಗಿದ್ದ ದಮ್ಮೂರು ಶೇಖರ್,ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿಅವರೊಂದಿಗೂ ಉತ್ತಮ ಸಂಬಂಧಹೊಂದಿದ್ದರು. ಈ ಹಿನ್ನೆಲೆಯಲ್ಲಿ
ಪಕ್ಷದ ಕಾರ್ಯಕರ್ತರು, ಹಿರಿಯಮುಖಂಡರು ವಿರೋ ಧಿಸಿದ್ದರೂ ಶಾಸಕಸೋಮಶೇಖರರೆಡ್ಡಿ ಬೆಂಬಲಿಸಿದ್ದರು. ಇದುಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿಅಸಮಾಧಾನ ಭುಗಿಲೇಳುವಂತೆ ಮಾಡಿತ್ತು.ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಕೆ.ಎ.ರಾಮಲಿಂಗಪ್ಪ (ಹಾಲಿ ಬುಡಾ ಅಧ್ಯಕ್ಷ)ಸೇರಿಹಿರಿಯ ಮುಖಂಡರು, ಕಾರ್ಯಕರ್ತರುತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈವಿಷಯಕ್ಕೆ ಶಾಸಕಸೋಮಶೇಖರರೆಡ್ಡಿ,ಜಿಲ್ಲಾಧ್ಯಕ್ಷಚನ್ನಬಸವನಗೌಡರ ನಡುವೆಪರಸ್ಪರ ಆರೋಪ-ಪ್ರತ್ಯಾರೋಪಗಳುನಡೆದಿದ್ದವು. ಪಕ್ಷದ ಸದಸ್ಯತ್ವಕ್ಕೆ ಸಾಮೂಹಿಕರಾಜೀನಾಮೆ ಸಲ್ಲಿಸಲಾಗಿತ್ತು. ಇದರಿಂದಆಗ ದಮ್ಮೂರು ಶೇಖರ್ ನೇಮಕವನ್ನುತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
ಪಕ್ಷದಲ್ಲೇ ಇದ್ದ ಈ ಅಸಮಾಧಾನಶಮನವಾಗುತ್ತಿದ್ದಂತೆ ರಾಜ್ಯ ಸರ್ಕಾರಪುನಃ ದಮ್ಮೂರು ಶೇಖರ್ ಅವರನ್ನೇಬುಡಾ ಅಧ್ಯಕ್ಷರನ್ನಾಗಿ ನೇಮಿಸಿ 2020ಮೇ 22ರಂದು ಆದೇಶ ಹೊರಡಿಸಿತ್ತು.
ಮೇ 23ರಂದು ದಮ್ಮೂರು ಶೇಖರ್‌ಬುಡಾ ನೂತನ ಅಧ್ಯಕ್ಷರಾಗಿ ಅ ಧಿಕಾರಸ್ವೀಕರಿಸಿ 8 ತಿಂಗಳ ಕಾಲ ಅ ಧಿಕಾರನಡೆಸಿದ್ದಾರೆ. ಇದೀಗ ನಡೆದ ದಿಢೀರ್‌ರಾಜಕೀಯ ಬೆಳವಣಿಗೆಯಲ್ಲಿ ದಮ್ಮೂರುಶೇಖರ್ ಅವರ ಬದಲಿಗೆ ಬುಡಾ ನೂತನಅಧ್ಯಕ್ಷರನ್ನಾಗಿ ಪಕ್ಷದ ಹಿರಿಯ ಮುಖಂಡಕೆ.ಎ. ರಾಮಲಿಂಗಪ್ಪರನ್ನು ನಿಯೋಜಿಸಿಬುಧವಾರ ಆದೇಶ ಹೊರಡಿಸಿ ಅಚ್ಚರಿಮೂಡಿಸಿದೆ.
ಈ ಕುರಿತು ಜಿಲ್ಲಾಧ್ಯಕ್ಷಚನ್ನಬಸವನಗೌಡರನ್ನು ಸಂಪರ್ಕಿಸಿದಾಗ,ಬುಡಾ ಅಧ್ಯಕ್ಷರ ನೇಮಕಕ್ಕೆ ಸಂಬಂ ಧಿಸಿದಂತೆಪಕ್ಷದ ರಾಜ್ಯ ಮುಖಂಡರೇ ನಿರ್ಣಯಕೈಗೊಳ್ಳುತ್ತಾರೆ. ಬುಡಾ ನೂತನ ಅಧ್ಯಕ್ಷರನ್ನಾಗಿರಾಮಲಿಂಗಪ್ಪರನ್ನು ಅವರನ್ನು ಸಹ ಪಕ್ಷದರಾಜ್ಯ ಮುಖಂಡರ ನಿರ್ಣಯವಾಗಿರುತ್ತದೆ
ಎಂದಷ್ಟೇ ಹೇಳಿದರು.
ಅಲ್ಲದೇ ದಮ್ಮೂರುಶೇಖರ್ ಅವರಿಗೆ ಕೇವಲ ಒಂದುವರ್ಷದ ಅವ ಧಿಗೆ ಮಾತ್ರ ಬುಡಾ ಅಧ್ಯಕ್ಷಸ್ಥಾನ ನೀಡುವುದಾಗಿ ಒಪ್ಪಂದವಾಗಿತ್ತು.ಅದರಂತೆ ಒಂದು ವರ್ಷ ಪೂರ್ಣಗೊಂಡಹಿನ್ನೆಲೆಯಲ್ಲಿ ಬುಡಾ ಅಧ್ಯಕ್ಷ ಸ್ಥಾನಕ್ಕೆಬೇರೆಯವರನ್ನು ನಿಯೋಜಿಸಿ ಸರ್ಕಾರಆದೇಶ ಮಾಡಿದೆ ಎಂಬ ಮಾತುಗಳು ಸಹಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.