ಬೇಂದ್ರೆ ಕನ್ನಡ ಸಾಹಿತ್ಯದ ಮೇರು ಶಿಖರ
ಕಾರ್ಯಕ್ರಮದಲ್ಲಿ ಡಾ| ಶಾಂತಿನಾಥ ದಿಬ್ಬದ ಉಪನ್ಯಾಸ ನೀಡಿದರು.
Team Udayavani, Jan 28, 2021, 5:33 PM IST
ಕೂಡ್ಲಿಗಿ: ಬೇಂದ್ರೆಯವರು ಮಾತನಾಡುವ ಮಾತುಗಳಲ್ಲಿಯೇ ಅತ್ಯದ್ಭುತ ಕಾವ್ಯಗಳು ಉಗಮವಾಗುತ್ತಿದ್ದವು. ಅವರು ಕನ್ನಡ ಸಾಹಿತ್ಯದ ಮೇರು ಶಿಖರ ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಡಾ| ಶಾಂತಿನಾಥ
ದಿಬ್ಬದ ನುಡಿದರು.
ಕಾನಾಹೊಸಹಳ್ಳಿಯಲ್ಲಿ ಡಾ| ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಶಾಂತಿನಿಕೇತನ ವಿದ್ಯಾಸಂಸ್ಥೆ ಹುಲಿಕೆರೆ ಸಹಯೋಗದಲ್ಲಿ ನಡೆದ ಬೇಂದ್ರೆ ಕಾವ್ಯಾನುಭವ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ
ಮಾತನಾಡಿದರು.
ಹಿರಿಯ ವಿದ್ವಾಂಸ ಡಾ| ಕೆ.ಆರ್. ದುರ್ಗಾದಾಸ್ ಮಾತನಾಡಿ, ಬೇಂದ್ರೆ ಕಾವ್ಯದಲ್ಲಿ ದೇಶಿಯತೆ ಕುರಿತು ಮಾತನಾಡಿ, ಬೇಂದ್ರೆ ಸಾಹಿತ್ಯವನ್ನು ಎಲ್ಲ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಬೇಂದ್ರೆಯವರ ಬಗ್ಗೆ ಎಷ್ಟು ಪಿಎಚ್‌ಡಿ ಮಾಡಿದರೂ ಅದು ಕಡಿಮೆ ಎಂದರು. ಹಿರಿಯ ವಿದ್ವಾಂಸ ಡಾ| ವೃಷಭೇಂದ್ರಾಚಾರ್, ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿವಾನಂದ, ಚಿತ್ರನಟ ಆನಂತದೇಶಪಾಂಡೆ ಅವರು ಬೇಂದ್ರೆಯ ರೀತಿಯಲ್ಲಿ ವೇಶ ಧರಿಸಿ ಒಂದು ಗಂಟೆಗೂ ಅ ಧಿಕ ಕಾಲ ಸಾಕ್ಷಾತ್ ಬೇಂದ್ರೆಯಂತೆ ನೆರೆದಿದ್ದ ಸಾಹಿತ್ಯ ಆಸಕ್ತರಿಗೆ ಹಾಡು ಕಾವ್ಯಗಳ ಮೂಲಕ ರಸದೌತಣವನ್ನು ಉಣಬಡಿಸಿದರು.
ಕಾರ್ಯಕ್ರಮದಲ್ಲಿ ಡಾ| ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ ಕಾರ್ಯಕ್ರಮದಲ್ಲಿ ಸಾಹಿತಿ ಎನ್. ಎಂ.ರವಿಕುಮಾರ್, ಸಂಡೂರು ಕಸಾಪ ಮಾಜಿ ಅಧ್ಯಕ್ಷ ನಾಗನಗೌಡ, ಸಾವಯವ ಕೃಷಿಕ ಎಚ್. ವಿ.ಸಜ್ಜನ್, ಶಾಂತಿನಿಕೇತನ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಕಾಶೀಂಸಾಹೇಬ್, ಕಾರ್ಯದರ್ಶಿ ಆರ್.ರಮೇಶ್ ಜಗದೀಶಚಂದ್ರಬೋಸ್ ಸೇರಿದ್ದಂತೆ ಹಲವರು ಇದ್ದರು.
ಡಾ| ವೃಷಭೇಂದ್ರಾಚಾರ್ ನೇತೃತ್ವದ ಕಲಾವಿದರರಾದ ಕೆ.ವಿರೂಪಾಕ್ಷಪ್ಪ,ಮಲ್ಲಿಕಾರ್ಜುನ, ಪ್ರಕಾಶ್‌ಬಡಿಗೇರ್, ಅನುರಾಧಪತ್ತಾರ್, ಗೌತಮಕರುಣಾನಿ , ರೋಜಾರಾಣಿ, ಕುಮಾರಸ್ವಾಮಿ, ಕೋಟ್ರೇಶ್, ವಿಜಯಕುಮಾರ್, ತಿಪ್ಪೇಸ್ವಾಮಿ, ನಂದಿನಿವೀರೇಂದ್ರೆ ಅವರಿಂದ ಬೇಂದ್ರೆ ಗೀತ ಗಾಯನ ಕಾರ್ಯಕ್ರಮ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.