ಪುರಸಭೆ ಕೆಲಸ ನಾನೇ ಮಾಡಬೇಕೆ?
Team Udayavani, Jan 28, 2021, 6:17 PM IST
ಶ್ರೀನಿವಾಸಪುರ: “ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದರೂ ಪಟ್ಟಣ ಅಭಿವೃದ್ಧಿ ಆಗುತ್ತಿಲ್ಲ. ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ ಬಗ್ಗೆ ಜನ ಪ್ರಶ್ನೆಮಾಡುತ್ತಿದ್ದಾರೆ. ಪುರಸಭೆ ಸದಸ್ಯರು ಏನ ಮಾಡುತ್ತಾರೆ ಅವರ ಕೆಲಸವನ್ನು ನಾನೇ ಮಾಡಬೇಕೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀನಿವಾಸಪುರದಲ್ಲಿ ನಡೆದ ಗಣರಾಜ್ಯೋ ತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ, ಶಾಲಾ ಮಕ್ಕಳು ಶಾಸಕರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗುತ್ತಿದ್ದಂತೆ ಕೆಲವು ಶಿಕ್ಷಕರು, ಸಾರ್ವಜನಿಕರು ಕುಡಿವ ನೀರಿನ ಬಗ್ಗೆ ಮನವಿ ಮಾಡುತ್ತಿದ್ದಂತೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಕೊಳ್ಳೂರು ರಸ್ತೆ, ಕುಡಿಯುವ ನೀರು ಸರಬರಾಜು, ಬಾಲಕಿಯರ ಕಾಲೇಜಿನಲ್ಲಿ ಸುಸಜ್ಜಿತ ಶೌಚಾಲಯವಿದ್ದರೂ ನೀರು ಸೌಕರ್ಯ ಮಾಡಲು ಪುರಸಭೆಗೆ ಆಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಕೆಲಸವೇನು, ಇನ್ನೆಷ್ಟು ಹಣ ತರಬೇಕೆಂದರು.
ಇದನ್ನೂ ಓದಿ:ರಸ್ತೆಯಲ್ಲಿಯೇ ರಾಗಿ ಒಕ್ಕಣೆ:ಸವಾರರಿಗೆ ತಪ್ಪದ ಸಂಕಟ
ಸಾರ್ವಜನಿಕ ಸೇವೆಯಲ್ಲಿ ಇರುವ ನಾವು ಜನರು ಪ್ರಶ್ನೆ ಮಾಡುವುದಕ್ಕಿಂತ ಮುಂಚೆ ಮೂಲ ಸೌಕರ್ಯ ಕಲ್ಪಿಸಬೇಕು. ಆದರೆ ನಾವು ಮಾಡುವುದಾದರೂ ಏನೆಂದರು. ಅದೇ ರೀತಿ ಬೈರಪಲ್ಲಿಯಲ್ಲಿ ಸಹ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಇಲ್ಲ ಎನ್ನುತ್ತಿದ್ದಾರೆ. ಕೊಳ್ಳೂರು ರಸ್ತೆ ತೀರಾ ಅದ್ವಾನವಾಗಿದೆ. ಈ ಬಗ್ಗೆ ಪುರಸಭೆ ಸದಸ್ಯರು ಗಮನಹರಿಸದಿದ್ದರೆ ಹೇಗೆ ಅವರ ಕೆಲಸವನ್ನು ನಾನೇ ಮಾಡಬೇಕೆ ಎಂದು ಖಾರವಾಗಿ ಪುರಸಭೆ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಬೇಸಿಗೆ ಆರಂಭವಾಗುತ್ತಿದೆ ಕುಡಿಯುವ ನೀರು ಸರಬರಾಜು ವಿತರಣೆಯಲ್ಲಿ ತಾರತಮ್ಯ ಮಾಡದೇ ಎಲ್ಲಾ ವಾರ್ಡುಗಳಿಗೆ ಅಗತ್ಯವಿರುವ ಕಡೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.