ತಾಯ್ನೆಲ-ಮಾತೃಭಾಷೆಗಿಂತ ಮಿಗಿಲು ಬೇರಿಲ್ಲ
8ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಕು| ಬಿ.ಮೇಘ ಅಭಿಮತ
Team Udayavani, Jan 28, 2021, 7:28 PM IST
ಭದ್ರಾವತಿ: ಜನ್ಮ ನೀಡಿದ ತಾಯ್ನೆಲ ಮತ್ತು ಮಾತೃ ಭಾಷೆಗಿಂತ ಮಿಗಿಲಾದದ್ದು ಮತ್ತೂಂದಿಲ್ಲ. ಕನ್ನಡ ನಾಡಿನಲ್ಲಿ ಬದುಕು
ಕಟ್ಟಿಕೊಂಡಿರುವ ಎಲ್ಲರೂ ಕನ್ನಡ ಭಾಷೆ ಕಲಿತು ಬಾಳಬೇಕು. ಕವಿ ಸಾಹಿತಿಗಳ ಲೇಖನಗಳನ್ನು ಓದುವುದರಿಂದ ಮಾತ್ರ ಕನ್ನಡ ಬಾರದು. ಕನ್ನಡ ಅನುಷ್ಠಾನಗೊಳ್ಳುವುದರಿಂದ ಭಾಷೆ ಸದೃಢವಾಗುತ್ತದೆ ಎಂದು ನ್ಯೂಟೌನ್ ಈಶ್ವರಮ್ಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು| ಬಿ.ಮೇಘ ಹೇಳಿದರು.
ನ್ಯೂಟೌನ್ ಎಸ್‌ಎವಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜುಗಳು ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ 8ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಕನ್ನಡದ ನೆಲದಲ್ಲಿ ಬಾಳುತ್ತಿರುವ ಅನೇಕ ಕನ್ನಡೇತರರು ಇಲ್ಲಿ ಎಲ್ಲವನ್ನು ಉಂಡರು ಕನ್ನಡ ಮಾತನಾಡಲು, ಬರೆಯಲು, ಓದಲು ಬರುವುದಿಲ್ಲ. ತಮ್ಮ ಬದುಕಿಗೆ ಬೇಕಾರದಷ್ಟು ಮಾತ್ರ ಕನ್ನಡ ಕಲಿತಿದ್ದಾರೆ. ಕನ್ನಡಿಗರೂ ಸಹ ಅಷ್ಟೇ ಔದಾರ್ಯದಿಂದ ಅವರನ್ನು ಅಪ್ಪಿಕೊಳ್ಳುತ್ತೇವೆ. ಶಾಲೆಗಳಲ್ಲೂ ಕನ್ನಡ ಕಸ್ತೂರಿ ಭಾಷೆ ಕ್ಷೀಣಿಸುವಂತಾಗಿದೆ. ಅದನ್ನು ಸರಿಪಡಿಸಿ ಕನ್ನಡದ ಕಂಪು ಪ್ರಜ್ವಲಿಸುವಂತಾಗಬೇಕು.
ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಕನ್ನಡ ಭಾಷೆಯನ್ನು ಕಲಿತು ಉಳಿಸಿ ಬೆಳೆಸಬೇಕಾಗಿದೆ. ಕವಿ ಸಾಹಿತಿಗಳ ಲೇಖನಗಳು, ಪುಸ್ತಕಗಳನ್ನು ಓದುವಂತಾಗಬೇಕೆಂದು ಮೇಘ ಹೇಳಿದರು. ಸಮ್ಮೇಳನಾಧ್ಯಕ್ಷೆ ಎಸ್.ಎ.ವಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು| ಭವನಶ್ರೀ
ಮಾತನಾಡಿ, ಕನ್ನಡ ಭಾಷಾ ಚಟುವಟಿಕೆಗಳು ಹೆಚ್ಚಾಗಬೇಕು. ಕನ್ನಡಿಗರಲ್ಲದವರಿಂದ ಕನ್ನಡ ಕ್ಷೀಣಿಸುತ್ತಿದೆ. ಕನ್ನಡಿಗರಿಗೆ ಸೂಕ್ತ ಸ್ಥಾನಮಾನಗಳು ಸಿಗಬೇಕಾಗಿದೆ. ಕನ್ನಡ ಸಾಹಿತ್ಯ ಮತ್ತು ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ ದೊರೆಯಬೇಕಾಗಿದೆ. ಕನ್ನಡ ನಾಡಿನಲ್ಲಿ
ಕನ್ನಡಿಗರಿಗೆ ರಕ್ಷಣೆ ನೀಡಬೇಕಾಗಿದೆ ಎಂದರು. ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಆಶಯ ನುಡಿಗಳನ್ನಾಡಿ, 14 ವರ್ಷಗಳ ಹಿಂದೆ ಎಸ್ ಎಸ್‌ಎಲ್‌ಸಿ ಫಲಿತಾಂಶ ಕಳಪೆಯಾಗಿದ್ದರಿಂದ ಚಿಂತನೆ ಹೊತ್ತ ನಾವು ಮತ್ತು ಶ್ರೀಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿ ಕಾರಿ ಗಳೊಂದಿಗೆ ಮಾತುಕತೆ ಮಾಡಿ ಮಕ್ಕಳಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣವೇ ನೆಂದು ಚಿಂತಿಸುವ ಹಾಗು ಮಕ್ಕಳಲ್ಲಿ ಓದುವ, ಬರೆಯುವ, ಸಾಹಿತ್ಯಾಭಿರುಚಿ ಮುಡಿಸುವ ಜ್ಞಾನ ಬಂಡಾರವನ್ನು ತಲೆಗೆ ತುಂಬುವ ಸಮಾವೇಶ ಮತ್ತು ಸಮ್ಮೇಳನಗಳನ್ನು ನಡೆಸುತ್ತಿರುವ ಫಲವಾಗಿ ಇಂದು ಉತ್ತಮ
ಫಲಿತಾಂಶ ದೊರೆಯುವಂತಾಗಿದೆ ಎಂದರು.
ಆದಿಚುಮಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳಿಗಾಗಿ ಮಾಡುತ್ತಿರುವ ಈ ಸಮ್ಮೇಳನಗಳು ತುಂಬಾ ಉಪಕಾರಿ ಯಾಗಿದೆ ಎಂದರು. ವೇದಿಕೆಯ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಡಾ|ಹರಿಣಾಕ್ಷಿ ಸ್ವಾಗತಿಸಿ, ವಿದ್ಯಾರ್ಥಿನಿ ಸಿ.ಲೇಖನ ಪ್ರಾರ್ಥಿಸಿ, ಶಾಲಾ ವಿದ್ಯಾರ್ಥಿಗಳು ವೇದ ಪಠಣ ಮತ್ತು ನಾಡಗೀತೆ ಹಾಡಿದರು. ಭೂಮಿಕಾ ಮತ್ತು ಶಿಕ್ಷಕಿ ಗೀತಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.