ತನ್ನ 93ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಮಹಿಳೆ..!
ತಮ್ಮ 93 ನೇ ವಯಸ್ಸಿನ ತನಕ ವೃತ್ತಿಪರರಾಗಿದ್ದು, ಈಗ ವೃತ್ತಿ ಜೀವನಕ್ಕೆ ಬ್ರೇಕ್ ಹಾಕುತ್ತಿದ್ದಾರೆ ಈ ಮಹಿಳೆ
ಶ್ರೀರಾಜ್ ವಕ್ವಾಡಿ, Jan 28, 2021, 7:40 PM IST
ನ್ಯೂಯಾರ್ಕ್ : ನಿವೃತ್ತಿಯ ವಿಷಯಕ್ಕೆ ಬಂದರೆ, ಹೆಚ್ಚಿನವರು ತಮ್ಮ 60, 70 ವರ್ಷಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ. ಆದರೇ ಇಲ್ಲೊಬ್ಬ ಮಹಿಳೆ ಅದಕ್ಕೂ ಮೀರಿ ಕಾರ್ಯ ನಿರ್ವಹಿಸಿ ಇಡೀ ಜಗತ್ತನ್ನು ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ.
ಹೌದು, ಈ ಮಹಿಳೆ ಎಲ್ಲರಂತಲ್ಲ. ತಮ್ಮ 93 ನೇ ವಯಸ್ಸಿನ ತನಕ ವೃತ್ತಿಪರರಾಗಿದ್ದು ಈಗ ವೃತ್ತಿ ಜೀವನಕ್ಕೆ ಬ್ರೇಕ್ ಹಾಕುತ್ತಿದ್ದಾರೆ ಈ ಮಹಿಳೆ. ಅವರೇ, ವರ್ಜೀನಿಯಾದ “ಗಿನ್ನಿ” ಬಹರ್.
ಓದಿ : ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ
ಡಿಸೆಂಬರ್ 1951 ರಲ್ಲಿ, ಕೇವಲ 24 ವರ್ಷ ವಯಸ್ಸಿನಲ್ಲಿ, ಬಹರ್ ನ್ಯೂಯಾರ್ಕ್ ಮೂಲದ ಜಾಹೀರಾತು ಏಜೆನ್ಸಿಯಾದ ಜೆ. ವಾಲ್ಟರ್ ಥಾಂಪ್ಸನ್ (ಜೆಡಬ್ಲ್ಯೂಟಿ) ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.ನಂತರದ ದಿನಗಳಲ್ಲಿ ಅದು ವಂಡರ್ಮನ್ ನೊಂದಿಗೆ ವಿಲೀನವಾಗಿ 2018ರಿಂದ ವಂಡರ್ ಮನ್ ಥಾಂಪ್ಸನ್ ಆಗಿದೆ.
ಈಗ ತಮ್ಮ 93ನೇ ವಯಸ್ಸಿನಲ್ಲಿ, ಮನೆಯವರ ಒತ್ತಾಯದ ಮೇರೆಗೆ ದೀರ್ಘಾವಧಿಯ ಉದ್ಯೋಗದಿಂದ ಅಂತಿಮವಾಗಿ ನಿವೃತ್ತರಾಗುತ್ತಿದ್ದಾರೆ.
“ನಾನು ಪ್ರತಿದಿನ ಜನರನ್ನು ನೋಡುವ ಎಲ್ಲ ಉತ್ಸಾಹವನ್ನು ಕಳೆದುಕೊಳ್ಳಲಿದ್ದೇನೆ. “ನಾನು ತುಂಬಾ ಅದೃಷ್ಟ ಶಾಲಿಯಾಗಿದ್ದೇನೆ,ನನ್ನ ಕಂಪೆನಿಯೊಂದಿಗಿನ ದೀರ್ಘ ಕಾಲದ ಸೇವೆ ಜೀವನದ ಶ್ರೇಷ್ಠ ದಿನಗಳು” ಎಂದು ಬಹರ್ ಹೇಳಿಕೊಳ್ಳುತ್ತಾರೆ.
ಬಹರ್, ಆರಂಭದ ಹಂತದಲ್ಲಿ ಒಂದು ಪ್ರಕಾಶನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ನನ್ನ ಬಗ್ಗೆ ತೃಪ್ತಿ ಇರಲಿಲ್ಲ. ಅಲ್ಲಿ ನನ್ನ ವೃತ್ತಿ ಜೀವನದಲ್ಲಿ ಅನೇಕ ಏಳು ಬೀಳುಗಳಾಗಿವೆ. ಅವೆಲ್ಲವನ್ನೂ ನಾನು ಸಹಿಸಿಕೊಂಡು ಇದುವರೆಗೆ ಬಂದಿದ್ದೇನೆ. ನಾನು ನಡೆದು ಬಂದ ಹಾದಿಯ ಬಗ್ಗೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಬಹರ್.
ಓದಿ : ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು
ಕಂಪೆನಿ, ಅವರ ನಿವೃತ್ತಿಯ ಗೌರವಾರ್ಥವಾಗಿ, ಬಹರ್ ಅವರಿಗೆ “ಗೌರವ ಅಧ್ಯಕ್ಷೆ” ಪ್ರಶಸ್ತಿಯನ್ನು ನೀಡಿದೆ. ಏಜೆನ್ಸಿಯ ನ್ಯೂಯಾರ್ಕ್ ಕಚೇರಿಯಲ್ಲಿ ಅವರ ಮ್ಯೂರಲ್ ಅನ್ನು ಸಹ ರಚಿಸಲಾಗುತ್ತಿದೆ. ಮತ್ತು ಕಂಪನಿಯು ಕಚೇರಿಯ ಚೇಂಬರ್ ವೊಂದಕ್ಕೆ “ಗಿನ್ನಿ ಬಹರ್” ಎಂದು ಮರುನಾಮಕರಣ ಮಾಡುತ್ತಿದೆ ಎನ್ನುವುದು ವಿಶೇಷ.
“ಗಿನ್ನಿ, ಜಾಹೀರಾತು ಉದ್ಯಮದಲ್ಲಿ ಒಂದು ಸಂಪೂರ್ಣ ದಂತಕಥೆ. 69 ವರ್ಷಗಳಿಂದ ಅವರು ನಮ್ಮ ಕಂಪನಿಯಲ್ಲಿ ಸಕಾರಾತ್ಮಕ ಶಕ್ತಿಯಾಗಿದ್ದಾರೆ. ಸಂತೋಷ ಮತ್ತು ಗೌರವವನ್ನು ಹಂಚಲು ಮತ್ತು ಜನರನ್ನು ಒಟ್ಟುಗೂಡಿಸುವುದಕ್ಕಾಗಿ ಅವರು ಜೀವನವನ್ನು ಸವೆಸಿದ್ದಾರೆ. “ಅವರ ಉದಾರ ಮನೋಭಾವವು ನಮ್ಮ ನ್ಯೂಯಾರ್ಕ್ ಕಚೇರಿಗೆ ಹೆಮ್ಮೆಯ ವಿಷಯ.” ಎಂದು ವಂಡರ್ಮನ್ ಥಾಂಪ್ಸನ್ ಉತ್ತರ ಅಮೆರಿಕದ ಸಿಇಒ ಶೇನ್ ಅಟ್ಚಿಸನ್ ಹೇಳುತ್ತಾರೆ.
“ನನಗೆ ಗೌರವದ ಬಗ್ಗೆ ನಿರೀಕ್ಷೆ ಇರಲಿಲ್ಲ. ನಾನು ಮಾಡುತ್ತಿರುವುದು ಪ್ರತಿದಿನದ ಕೆಲಸ, ಮತ್ತು ಅದು ನನ್ನ ಜೀವನದ ಒಂದು ಭಾಗವಾಗಿದೆ. ನಾನು ಅದನ್ನು ಅಲ್ಲಿ ಆನಂದಿಸಿದೆ. ಎಂದು ಬಹರ್ ಮುಜುಗರ ವ್ಯಕ್ತ ಪಡಿಸುತ್ತಾರೆ.
ಒಟ್ಟಿನಲ್ಲಿ, ಸುದೀರ್ಘ ವೃತ್ತಿ ಜೀವನದಿಂದ ಹೊರ ಬರುತ್ತಿರುವ ಬಹರ್ ಅಕ್ಷರಶಃ ಮಾದರಿ ಮಹಿಳೆ ಎನ್ನುವುದರಲ್ಲಿ ಸಂಶಯ ಪಡಬೇಕಾಗಿಲ್ಲ.
–ಶ್ರೀರಾಜ್ ವಕ್ವಾಡಿ
ಓದಿ : ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.