ತಾಲೂಕು ಪಂಚಾಯತ್ : ಅನುದಾನ ಹೆಚ್ಚಿಸಿ, ಆಶಯ ಉಳಿಸಿ
Team Udayavani, Jan 29, 2021, 6:20 AM IST
ಬೆಂಗಳೂರು: ಅಧಿಕಾರ ವಿಕೇಂದ್ರೀಕರಣದ ಆಶಯ ಸಾಕಾರವಾಗಬೇಕಾದರೆ ಮೂರು ಹಂತಗಳ ಅಧಿಕಾರ ಇರಲೇಬೇಕು- ಇದು ತಾಲೂಕು ಪಂಚಾಯತ್ ಅಧ್ಯಕ್ಷರ ಅಭಿಪ್ರಾಯ. ಅಧಿಕಾರವೇ ಇಲ್ಲದ ತಾ.ಪಂ. ವ್ಯವಸ್ಥೆಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿರುವ ಈ ವೇಳೆ “ಉದಯವಾಣಿ’ ರಾಜ್ಯಾದ್ಯಂತ ತಾ.ಪಂ. ಅಧ್ಯಕ್ಷರನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿದೆ. ಹೆಚ್ಚು ಕಡಿಮೆ ಶೇ. 75 ಮಂದಿ ತಾ.ಪಂ. ಇರಲಿ ಎಂದಿದ್ದಾರೆ. ತಾ.ಪಂ. ಇರಲಿ, ಜತೆಗೆ ಹೆಚ್ಚಿನ ಅಧಿಕಾರ ಕೊಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ತಾ. ಪಂಚಾಯತ್‌ಗೆ ಅಧಿಕಾರ – ಸಮರ್ಪಕ ಅನುದಾನ ಕೊರತೆ ಇದೆ. ಇದರಿಂದ ಸದಸ್ಯರಿಗೆ ಜನರ ನಿರೀಕ್ಷೆಗಳಿಗೆ ತಕ್ಕಂತೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ತಾ.ಪಂ.ಗಳನ್ನು ರದ್ದುಗೊಳಿಸುವ ಬದಲು ಹೆಚ್ಚಿನ ಅನುದಾನ ಮತ್ತು ಅಧಿಕಾರ ನೀಡಿ ಬಲವರ್ಧನೆಗೊಳಿಸಬೇಕು.
-ಇದು ರಾಜ್ಯದ ಬಹುತೇಕ ತಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರು ಮತ್ತು ಸದಸ್ಯರ ಒಕ್ಕೊರಲ ಆಗ್ರಹ. ಪಂಚಾಯತ್ ವ್ಯವಸ್ಥೆಯ 3 ಹಂತಗಳನ್ನು ಎರಡಕ್ಕಿಳಿಸಲು ಸರಕಾರ ಚಿಂತನೆ ನಡೆಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಾ.ಪಂ. ವ್ಯವಸ್ಥೆಗೆ ಹೆಚ್ಚು ಅನುದಾನ, ಅಧಿಕಾರ ನೀಡಬೇಕು. ಇದಕ್ಕಾಗಿ ಪಂ.ರಾಜ್ ಕಾಯಿದೆಯಲ್ಲಿ ಮಾರ್ಪಾಟು ತರಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಏಕೆ ಬೇಕು?
1 ಸ್ಥಳೀಯ ಸಂಸ್ಥೆಗಳು ಗ್ರಾಮೀಣಾಭಿವೃದ್ಧಿಗಾಗಿ ಜಿ. ಪಂ., ಸರಕಾರಗಳ ನಡುವೆ ಸೇತುವೆಯಂತಿವೆ.
2 ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳ ಮೇಲುಸ್ತುವಾರಿ, ಕಾರ್ಯವೈಖರಿ ತಪಾಸಣೆ, ಲೆಕ್ಕಪತ್ರ ಪರಿಶೋಧನೆಗೆ ಅನುಕೂಲ.
3 ಗ್ರಾ.ಪಂ. ಮಟ್ಟದ ದೂರು, ಸಮಸ್ಯೆಗಳಿಗೆ ತಾ.ಪಂ. ಹತ್ತಿರದ ವ್ಯವಸ್ಥೆ.
4 ಜಿಲ್ಲೆಯ ಎಲ್ಲ ಗ್ರಾ.ಪಂ.ಗಳ ಸಮರ್ಪಕ ಉಸ್ತುವಾರಿ ಜಿ.ಪಂ.ನಿಂದ ಅಸಾಧ್ಯ.
5 ತಾ.ಪಂ. ಸದಸ್ಯರು ಜಿಲ್ಲಾ ಮತ್ತು ಗ್ರಾ.ಪಂ. ನಡುವೆ ಸಂಪರ್ಕ ಸೇತುವಾಗಿರುತ್ತಾರೆ.
ವಿರೋಧ ಏಕೆ ?
1ಕಡಿಮೆ ಅನುದಾನ, ಕಡಿಮೆ ಅಧಿಕಾರ.
2ಹಿಂದೆ 32 ಇಲಾಖೆಗಳಿಗೆ ತಾ.ಪಂ. ಮೂಲಕ ಅನುದಾನ ಹೋಗುತ್ತಿತ್ತು. ಈಗಿಲ್ಲ.
3 20-30 ಸದಸ್ಯರಿರುವ ತಾ.ಪಂ.ನಲ್ಲಿ ಒಬ್ಬರಿಗೆ ನಾಲ್ಕೆ çದು ಲಕ್ಷ ರೂ. ಕೂಡ ಅನುದಾನ ಸಿಗುವುದಿಲ್ಲ.
4ಇಷ್ಟು ಕಡಿಮೆ ಅನುದಾನದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಿಕೊಡಲಾಗುತ್ತಿಲ್ಲ.
ಆಗಬೇಕಿದೆ ಬಲವರ್ಧನೆ
– ಸರಕಾರವು ತಾ. ಪಂ. ಬಲವರ್ಧನೆಗೆ ಏನು ಮಾಡಬೇಕು ಎಂಬ ಬಗ್ಗೆ ಕೆಲವು ತಾ.ಪಂ. ಅಧ್ಯಕ್ಷರ ಸಲಹೆ ಹೀಗಿವೆ:
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ತ್ರಿಸ್ತರಗಳೂ ಪ್ರಮುಖ. ಹೀಗಾಗಿ ತಾ.ಪಂ. ವ್ಯವಸ್ಥೆಗೆ ಇನ್ನಷ್ಟು ಪುಷ್ಟಿ ತುಂಬ ಬೇ ಕು.
– ಪ್ರತೀ ತಾ.ಪಂ.ಗೆ ಹೆಚ್ಚಿನ ಅನುದಾನ ಮತ್ತು ಅಧಿಕಾರ ನೀಡಬೇಕು. ಇದಕ್ಕಾಗಿ ಕಾಯ್ದೆಯಲ್ಲಿ ಮಾರ್ಪಾಟು ತರಬೇಕು.
– ತಾ.ಪಂ. ಮೂಲಕ ನರೇಗಾ, ವಸತಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಆದಾಯ ತರುವ ಮಾರ್ಗ ಒದಗಿಸಬೇಕು.
– ಪ್ರತ್ಯೇಕವಾಗಿ ಬಜೆಟ್ ಮಂಡಿಸುವ ಶಕ್ತಿ ತುಂಬಬೇಕು. ಅದಕ್ಕಾಗಿ ವಿವಿಧ ತೆರಿಗೆ ವಿಧಿಸುವ ಅಧಿಕಾರ ನೀಡಬೇಕು.
– ಗ್ರಾಮೀಣ ಭಾಗದಲ್ಲಿ ದೊಡ್ಡಮಟ್ಟದ ಯೋಜನೆ ಅನುಷ್ಠಾವನ್ನು ತಾ.ಪಂ.ಗೆ ವಹಿಸಬೇಕು.
– ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆ ಗೊಳಿಸಬೇಕು. ವಾರ್ಷಿಕ ಅನುದಾನ 5-6 ಕೋ.ರೂ.ಗಳಿಗೆ ಹೆಚ್ಚಿಸಬೇಕು.
– ಶಾಸಕರ ಅನಗತ್ಯ ಹಸ್ತಕ್ಷೇಪ ತಪ್ಪಿಸಬೇಕು. ಪಿಡಿಒ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಅಧಿ ಕಾರ ನೀಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.