ಪ್ರಶ್ನಿಸಿದಾಗ ಉತ್ತರ ಸಿಗಲು ಸಾಧ್ಯ


Team Udayavani, Jan 29, 2021, 8:24 PM IST

Isaac-Newton

ನಮ್ಮಲ್ಲಿನ ಹೊಸ ಆಲೋಚನೆಗಳು ನಮ್ಮನ್ನು ಹೊಸ ಜಗತ್ತಿಗೆ ಕರೆದುಕೊಂಡು ಹೋಗುತ್ತವೆ. ಎಲ್ಲರಂತೆ ವಿಭಿನ್ನರಾಗಿ ಕಾಣುವಂತೆ ಮಾಡುತ್ತವೆ. ಅಂತಹ ವಿಭಿನ್ನ ಅಲೋಚನೆಯಿಂದ ಜಗತ್ತಿನ ಗಮನಸೆಳೆದ ವಿಜ್ಞಾನಿ ಐಸಾಕ್‌ ನ್ಯೂಟನ್‌.

ನ್ಯೂಟನ್‌ ಜಗತ್ತು ಕಂಡ ಅಪ್ರತಿಮ ವಿಜ್ಞಾನಿ. ತಾಳ್ಮೆ, ಸಹನೆ ಮತ್ತು ವಿಭಿನ್ನ ಕಲಾತ್ಮಕ ದೃಷ್ಟಿಕೋನ ಅವರನ್ನು ಇಡೀ ಜಗತ್ತಿನ ಮುಂದೆ ಸಾಧಕನಾಗಿ ನಿಲ್ಲುವಂತೆ ಮಾಡಿತು. ನ್ಯೂಟನ್‌ ಅವರ ಜೀವನ ಮತ್ತು ಸಾಧನೆ ಸ್ಫೂರ್ತಿ ಮತ್ತು ಆದರ್ಶ. ಹೀಗಾಗಿ ಅವರು ತಮ್ಮ ಜೀವನದಲ್ಲಿ ಕಂಡ ಏಳು-ಬೀಳುಗಳನ್ನು ಮೆಟ್ಟಿನಿಂತು ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ತಿಳಿದುಕೊಳ್ಳೋಣ.

ಸರ್‌ ಐಸಾಕ್‌ ನ್ಯೂಟನ್‌ ಇಂಗ್ಲೆಂಡ್‌ನ‌ಲ್ಲಿ 1642ರಲ್ಲಿ ಜನಿಸಿದರು. ಹುಟ್ಟುವ ಮೂರು ತಿಂಗಳ ಮೊದಲೇ ತಂದೆಯನ್ನು ಕಳೆದುಕೊಂಡ ನತದೃಷ್ಟ ಹಣೆಪಟ್ಟಿ ಅವರಿಗಿದೆ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡ ನ್ಯೂಟನ್‌ನಿಗೆ ಅವರ ಅಜ್ಜಿ ಆ ಕೊರತೆಯನ್ನು ನೀಗಿಸುತ್ತಾಳೆ. ಚಿಕ್ಕಂದಿನಿಂದಲೂ ಅನ್ವೇಷಣೆ ಮತ್ತು ಪ್ರಶ್ನಿಸುವ ಮನೋಭಾವದವನಾಗಿದ್ದ ನ್ಯೂಟನ್‌ ಪ್ರತೀ ವಿಚಾರಕ್ಕೂ ಅಜ್ಜಿಯನ್ನು ಪ್ರಶ್ನಿಸಿಯೇ ಉತ್ತರ ಪಡೆದುಕೊಳ್ಳುತ್ತಿದ್ದ. ಇದೇ ಮುಂದೆ ಆತನನ್ನು ವಿಜ್ಞಾನಿಯಾಗಲು ಪ್ರೇರೇಪಿಸಿತು.

ಸೇಬಿನ ಮರದ ಕೆಳಗೆ…!
ಅದೊಂದು ದಿನ ನ್ಯೂಟನ್‌ ಸೇಬಿನ ಮರದ ಕೆಳಗೆ ತನ್ನದೇ ಲೋಕದಲ್ಲಿ ಆಟವಾಡುತ್ತ ಕುಳಿತ್ತಿದ್ದ. ಒಮ್ಮಿಂದೊಮ್ಮೆಲೇ ಮರದಿಂದ ಸೇಬು ಹಣ್ಣೊಂದು ಆತನ ತಲೆಯ ಮೇಲೆ ಬಿದ್ದಿತು. ಚಿಕ್ಕಂದಿನಿಂದಲೂ ಪ್ರಶ್ನಿಸುವ ಮನೋಭಾವದವನಾಗಿದ್ದ ಈತ ಮತ್ತೆ ಈ ಬಗ್ಗೆ ತನ್ನಲ್ಲಿ ತಾನೇ ಕೇಳಿಕೊಂಡ. ಈ ಸೇಬು ಹೇಗೆ ಬಿದ್ದಿತ್ತು. ಮೇಲೆ ಯಾರು ಇಲ್ಲದಿದ್ದರೂ ಹೇಗೆ ಬಿದ್ದಿತ್ತು.?ಹೀಗೆ ಪ್ರಶ್ನೆಯೇ ಮೇಲೆ ಪ್ರಶ್ನೆಯ ಕೇಳಿಕೊಂಡನು. ಕೊನೆಗೆ ಒಂದು ದಿನ ಫ‌ಲಿತಾಂಶ ಬಂದೇ ಬಿಟ್ಟಿತ್ತು. ಅದುವೇ ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂಬ ಸಂಶೋಧನೆ. ಇದು ಇಡೀ ಜಗತ್ತಿನ ಕಣ್ಣು ತೆರೆಸಿತ್ತು.

ವಿಜ್ಞಾನದ ಮೇಲೆ ಅಪರಿಮಿತ ಆಸಕ್ತಿ!
ನ್ಯೂಟನ್‌ ಚಿಕ್ಕಂದಿನಿಂದಲೂ ವಿಜ್ಞಾನದ ಮೇಲೆ ಕುತೂಹಲ ಕಣ್ಣು. ಪ್ರಶ್ನಿಸುವ ಮನೋಭಾವನಾಗಿದ್ದನು. ಈತನಿಗೆ ವಿಜ್ಞಾನ ಅಚ್ಚುಮೆಚ್ಚಿನ ವಿಷಯವಾಗಿತ್ತು. ಗೆಲಿಲಿಯೋ ಹಾಗೂ ಆತನ ಇನ್ನಿತರ ಸಂಶೋಧನೆಯ ಮೇಲೆ ತೀವ್ರ ಆಸಕ್ತಿ ಹೊಂದಿದ್ದನು. 1687ರಲ್ಲಿ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನಲ್ಲಿ ಗಣಿತ ಅಧ್ಯಾಪಕರಾಗಿ ಕಾರ್ಯನಿರ್ವಹಿಸುವ ಸಂದರ್ಭ ಪ್ರಿನ್ಸಿಪಿಯಾ ಎಂಬ ಪುಸ್ತಕ ಪ್ರಕಟಿಸುತ್ತಾರೆ. ಈ ಪುಸ್ತಕದಲ್ಲಿ ಗುರುತ್ವ ಸಿದ್ಧಾಂತ ಹಾಗೂ ವಸ್ತುಗಳು ಕೆಳಗೆ ಬೀಳಲು ಕಾರಣವೇನು ಹಾಗೂ ಗ್ರಹಗಳು ಸೂರ್ಯನ ಸುತ್ತಲೂ ಸುತ್ತುತ್ತದೆ ಎಂದು ಪ್ರತಿಪಾದಿಸುವ ವಿವರಣೆ ನೀಡಿದರು.

ನ್ಯೂಟನ್‌ನ ಮೂರು ನಿಯಮಗಳು ಜನಪ್ರಿಯವಾಗಿವೆ. ನ್ಯೂಟನ್‌ ಲೆಕ್ಕಾಚಾರ ಜನರಿಗೆ ಖಗೋಳದ ಮೇಲಿರುವ ಅರ್ಥವನ್ನೇ ಬದಲಿಸುವಂತೆ ಮಾಡಿತು. ನ್ಯೂಟನ್‌ಗೂ ಮೊದಲು ಗ್ರಹಗಳು ತಮ್ಮದೇ ಆದ ಕಕ್ಷೆಯಲ್ಲಿ ಏಕೆ ಇವೆ ಎನ್ನುವ ವಿಷಯದ ಕುರಿತು ಯಾರಿಗೂ ವಿವರಣೆ ನೀಡಲು ಸಾಧ್ಯವಾಗಿರಲಿಲ್ಲ. ಶ್ರೇಷ್ಠ ವಿಜ್ಞಾನಿ ಐಸಾಕ್‌ ನ್ಯೂಟನ್‌ ಅನಾರೋಗ್ಯದಿಂದ ಮಾರ್ಚ್‌ 20, 1727 ರಂದು ನಿಧನರಾದರು.


 ಭರತ್‌ ಕುಮಾರ್‌, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು 

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.