![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 30, 2021, 1:00 AM IST
ಕರಾಚಿ: ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಸ್ಪಿನ್ ಬಲೆಗೆ ಬೀಳಿಸಿದ ಪಾಕಿಸ್ಥಾನ ಕರಾಚಿ ಟೆಸ್ಟ್ ಪಂದ್ಯವನ್ನು ನಾಲ್ಕೇ ದಿನಗಳಲ್ಲಿ 7 ವಿಕೆಟ್‌ಗಳಿಂದ ಗೆದ್ದಿದೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
158 ರನ್ ಹಿನ್ನಡೆಗೆ ಸಿಲುಕಿದ ದಕ್ಷಿಣ ಆಫ್ರಿಕಾ ಒಂದು ವಿಕೆಟಿಗೆ 175 ರನ್ ಪೇರಿಸಿ ದಿಟ್ಟ ಹೋರಾಟದ ಸೂಚನೆ ನೀಡಿತ್ತು. ಆದರೆ 4ನೇ ದಿನವಾದ ಶುಕ್ರವಾರ 245ಕ್ಕೆ ತಲಪುವಷ್ಟರಲ್ಲಿ ಆಲೌಟ್ ಆಯಿತು. ಕ್ವಿಂಟನ್ ಡಿ ಕಾಕ್ ಪಡೆ 4ಕ್ಕೆ 187 ರನ್ ಮಾಡಿದಲ್ಲಿಂದ 4ನೇ ದಿನದಾಟ ಮುಂದುವರಿಸಿತ್ತು.
ಸ್ಪಿನ್ನರ್‌ಗಳಾದ ನೌಮಾನ್ ಅಲಿ 35ಕ್ಕೆ 5 ಹಾಗೂ ಯಾಸಿರ್ ಶಾ 79ಕ್ಕೆ 4 ವಿಕೆಟ್ ಉರುಳಿಸಿ ಪ್ರವಾಸಿಗರನ್ನು ಕಾಡಿದರು. ಇವರಲ್ಲಿ 34 ವರ್ಷದ ನೌಮಾನ್ ಅಲಿ ಪಾಲಿಗೆ ಇದು ಚೊಚ್ಚಲ ಟೆಸ್ಟ್ ಆಗಿತ್ತು.
ಹತ್ತರಲ್ಲಿ 9 ಸೋಲು!
ಗೆಲುವಿಗೆ 88 ರನ್ ಗುರಿ ಪಡೆದ ಪಾಕಿಸ್ಥಾನ ಇಮ್ರಾನ್ ಬಟ್ (12), ಅಬಿದ್ ಅಲಿ (10) ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಆದರೆ ಯಾವುದೇ ನಾಟಕೀಯ ಘಟನೆ ಸಂಭವಿಸಲಿಲ್ಲ. ಅಜರ್ ಅಲಿ ಔಟಾಗದೆ 31 ಹಾಗೂ ನಾಯಕ ಬಾಬರ್ ಆಜಂ 30 ರನ್ ಹೊಡೆದು ಗೆಲುವು ಸಾರಿದರು. ಇದು ಏಶ್ಯದಲ್ಲಿ ಆಡಲಾದ ಕಳೆದ 10 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ಅನುಭವಿಸಿದ 9ನೇ ಸೋಲು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.