ಸುದ್ದಿಯಲ್ಲಿದ್ದಾರೆ ನ್ಯಾ| ಗಣೇದಿವಾಲಾ
Team Udayavani, Jan 30, 2021, 6:55 AM IST
ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಇತ್ತೀಚಿನ ಮೂರು ತೀರ್ಪುಗಳು ದೇಶಾದ್ಯಂತ ಚರ್ಚೆಗೆ ಕಾರಣವಾಗಿವೆ. ಮೊದಲನೆಯದು ಸ್ಕಿನ್ ಟು ಸ್ಕಿನ್ ಸ್ಪರ್ಶವಾದರೆ ಮಾತ್ರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಬಹುದು, 2ನೆಯದು ಪ್ಯಾಂಟ್ ಜಿಪ್ ಬಿಚ್ಚಿದ ಕಾರಣಕ್ಕಾಗಿ ಲೈಂಗಿಕ ಕಿರುಕುಳವೆನ್ನಲಾಗದು ಎಂಬ ತೀರ್ಪು, 3ನೆಯದು ಏಕಕಾಲದಲ್ಲಿ ವ್ಯಕ್ತಿಯೊಬ್ಬ ಸಂತ್ರಸ್ತೆಯ ಬಾಯಿ ಮುಚ್ಚಿ, ಆಕೆಯ ವಸ್ತ್ರ ಮತ್ತು ತನ್ನ ವಸ್ತ್ರವನ್ನು ಬಿಚ್ಚಿ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ಮೂರು ತೀರ್ಪುಗಳ ಹಿಂದಿನ ಪ್ರಮುಖ ಹೆಸರು ನ್ಯಾಯಮೂರ್ತಿ ಪುಷ್ಪಾಗಣೇ ದಿವಾಲ ಅವರದ್ದು.
1969ರಲ್ಲಿ ಮಹಾರಾಷ್ಟ್ರದ ಪರಾಟ್ವಾ ಡಾದಲ್ಲಿ ಜನಿಸಿದ ಗಣೇದಿವಾಲಾ ಬಿ.ಕಾಂ, ಎಲ್‌ಎಲ್‌ಬಿ ಮತ್ತು ಎಲ್‌ಎಲ್. ಎಂ ಪದವೀಧರೆಯಾಗಿದ್ದಾರೆ. 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾದ ಅವರು, ಮುಂದೆ ಮುಂಬಯಿಯ ಸಿಟಿ ಸಿವಿಲ್ ಕೋರ್ಟ್ ಮತ್ತು ನಾಗಪುರದ ಜಿಲ್ಲಾ ಮತ್ತು ಕುಟುಂಬ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತದನಂತರ ಅವರು ನಾಗಪುರದ ಸೆಷನ್ಸ್ ನ್ಯಾಯಾಧೀಶರಾಗಿಯೂ ನೇಮಕವಾದರು. 2018ರಲ್ಲಿ ಬಾಂಬೆ ಹೈಕೋರ್ಟ್ ಗೆ ನೇಮಕಾತಿಗಾಗಿ ಪರಿಗಣಿಸಲ್ಪಟ್ಟ ಹಲವಾರು ನ್ಯಾಯಾಧೀಶರಲ್ಲಿ ಗಣೇದಿವಾಲಾ ಸಹ ಒಬ್ಬರಾಗಿದ್ದರು ಆದರೆ ಬಾಂಬೆ ಹೈಕೋರ್ಟ್ ಹಲವು ಕಾರಣಗಳಿಗಾಗಿ ಅವರ ನೇಮಕಾತಿಯ ವಿರುದ್ಧ ಶಿಫಾರಸು ಮಾಡಿತ್ತು. ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ಅವರ ನೇಮಕಾತಿಯನ್ನು ನಿರಾಕರಿಸಿತ್ತು. ಆದರೆ 2019ರಲ್ಲಿ ಮತ್ತೆ ಪರಿಶೀ ಲಿಸಿ, ಅವರನ್ನು ಬಾಂಬೆ ಹೈಕೋರ್ಟ್ ಹೆ ಚ್ಚುವರಿ ನ್ಯಾಯಾಧೀಶರನ್ನಾಗಿಸಲಾಯಿತು.
2019ರಲ್ಲಿ “ಪೆರೋಲ್ ಎನ್ನುವುದು ಕೈದಿಗಳಿಗೆ ಲಭ್ಯವಿರುವ ಹಕ್ಕು ಮತ್ತು ಅದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ’ ಎಂದು ಅವರನ್ನೊಳಗೊಂಡ ಪೀಠ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಅನಂತರ, ಕೈದಿಯೊಬ್ಬ ಒಂದು ವರ್ಷದಲ್ಲಿ ಹಲವು ಬಾರಿ ಪೆರೋಲ್ ಪಡೆಯಬಹುದಾಗಿದೆ.
2020ರ ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಗೆ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿತ್ತು. ಆಗ ಮಧ್ಯಪ್ರವೇಶಿಸಿದ ಅವರು, ಆ ಮಹಿಳೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ನಿರ್ದೇಶಿಸಿ ದ್ದಷ್ಟೇ ಅಲ್ಲದೇ ಕೋವಿಡ್-19 ಸೋಂಕಿತರ ವಿರುದ್ಧದ ತಾರತಮ್ಯವನ್ನು, ದಲಿತರ ವಿರುದ್ಧದ ಅಸ್ಪೃಶ್ಯತೆಯ ಆಚರಣೆಗೆ ಹೋಲಿಸಿದ್ದರು. ಕುಟುಂಬ ನ್ಯಾಯಾಲಯಗಳಲ್ಲಿರುವ ಬಾಕಿ ಪ್ರಕರಣಗಳನ್ನು ತಗ್ಗಿಸಬೇಕು ಎಂದು ಅವರು ಸಾರ್ವಜನಿಕ ವಾಗಿಯೇ ಹೇಳುತ್ತಾ ಬಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಪೊಲೀಸರು ಸರಿಯಾಗಿ ತನಿಖೆ ನಡೆಸಲು ವಿಫಲವಾಗುತ್ತಿರುವುದರಿಂದ, ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳು ವಂತಾಗುತ್ತಿದೆ ಎಂದು ಸಾರ್ವ ಜನಿಕವಾಗಿಯೇ ಟೀಕಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.