ಜಾತಿವಾರು ಮತ ಪಡೆಯಲು ಮತ್ತೆ “ಅನುದಾನ’ ಅಸ್ತ್ರ
20-25 ಸಾವಿರದಷ್ಟು ರೆಡ್ಡಿ ಲಿಂಗಾಯತ ಸಮುದಾಯದ ಮತಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
Team Udayavani, Jan 30, 2021, 4:46 PM IST
ಮಸ್ಕಿ(ವಿಶೇಷ ವರದಿ): ಉಪಚುನಾವಣೆ ಘೋಷಣೆ ಕ್ಷಣಗಣನೆ ಹಿನ್ನೆಲೆಯಲ್ಲಿ ಈಗಾಗಲೇ ಭರ್ಜರಿ ಪ್ರಚಾರಗಳು ಆರಂಭವಾಗಿವೆ. ಆದರೆ, ಇದರ ನಡುವೆಯೇ ಈಗ ಬಿಜೆಪಿ ಸರಕಾರ ಜಾತಿವಾರು ಮತಗಳಿಕೆ ಲೆಕ್ಕಚಾರದಲ್ಲಿ ಬಂಪರ್ ಗಿಫ್ಟ್ ಘೋಷಣೆ ಮಾಡಿದೆ!.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಶಿಫಾರಸ್ಸು ಮೇರೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಇಂತಹ ಘೋಷಣೆ ಆದೇಶ ಪತ್ರದ ಮೂಲಕ ಗುರುವಾರ
ಹೊರ ಹಾಕಿದ್ದಾರೆ. ಚುನಾವಣೆ ಘೋಷಣೆ ಹೊತ್ತಲ್ಲಿ ಹೊರ ಬಿದ್ದ ಈ ಅನುದಾನ ಹಂಚಿಕೆಯ ಆದೇಶ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಮತ್ತು ಕುರುಬ ಸಮಾಜದ ಮತಗಳಿಕೆಗಾಗಿಯೇ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕ್ಷೇತ್ರದಲ್ಲೂ ಇದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಎಲ್ಲೆಲ್ಲಿ ಅನುದಾನ?: ಮಸ್ಕಿ ಪಟ್ಟಣದಲ್ಲಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಾಣಕ್ಕೆ ಒಂದು ಕೋಟಿ ರೂ., ಕನಕ ಭವನ ನಿರ್ಮಾಣಕ್ಕಾಗಿ ಒಂದು
ಕೋಟಿ ಹಾಗೂ ತುರ್ವಿಹಾಳ ಗ್ರಾಮದಲ್ಲಿರುವ ಅಮೋಘ ಸಿದ್ದೇಶ್ವರ ದೇವಸ್ಥಾನ (ಕುರುಬ ಸಮುದಾಯಕ್ಕೆ ಸೇರಿದ) ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಟಿಪ್ಪಣಿ ಪತ್ರದ ಮೂಲಕ ಹೊರಡಿಸಲಾಗಿದೆ.
ಹೆಚ್ಚಿದ ಕುತೂಹಲ: ಸದ್ಯ ಮಸ್ಕಿ ಕ್ಷೇತ್ರದಲ್ಲಿ ಸಂಪೂರ್ಣ ಉಪಚುನಾವಣೆಯ ಕಾವು ಶುರುವಾಗಿದೆ. 5ಎ ಕಾಲುವೆ ಹೋರಾಟದ ಬೇಡಿಕೆಯ ಬಿಸಿಯೂ ಜೋರಾಗಿದ್ದು ಇದರ ನಡುವೆ ಸಮುದಾಯಗಳ ಮನವೊಲಿಕೆಗೆ ಈ ಮಾರ್ಗ ಹುಡುಕಲಾಗಿದೆಯೇ? ಎನ್ನುವ ಪ್ರಶ್ನೆಗಳು ಶುರುವಾಗಿವೆ. ವಿಶೇಷವಾಗಿ ಈ ಬಾರಿ ಲಿಂಗಾಯತ ಮತ್ತು ಕುರುಬ ಸಮಾಜದ ವೋಟುಗಳ ಕೇಂದ್ರೀಕರಿಸಿ ಅನುದಾನ ಘೋಷಣೆ ಮಾಡಿರುವುದು ಗಮನಾರ್ಹ ಸಂಗತಿ. ಕ್ಷೇತ್ರದಲ್ಲಿ
52 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ಮತಗಳಿದ್ದರೆ, 20-25 ಸಾವಿರದಷ್ಟು ರೆಡ್ಡಿ ಲಿಂಗಾಯತ ಸಮುದಾಯದ ಮತಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಮತಗಳಿಕೆ ದೂರದೃಷ್ಠಿಯಿಂದಲೇ ಈ ಸಮುದಾಯದ ಬಹುಬೇಡಿಕೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ. ಇದಕ್ಕಾಗಿ ಒಂದು ಕೋಟಿ ರೂ. ಘೋಷಣೆ ಮಾಡಲಾಗಿದೆ. ಇನ್ನು ಕುರುಬ ಸಮುದಾಯದ ಮತಗಳು ಕೂಡ ಕ್ಷೇತ್ರದಲ್ಲಿ ಅಧಿಕವಾಗಿವೆ. ಅಂದಾಜು 25 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಇದಕ್ಕಾಗಿ ಮಸ್ಕಿ ಪಟ್ಟಣದಲ್ಲಿ ಕನಕ ಭವನ ನಿರ್ಮಾಣ, ತುರುವಿಹಾಳದಲ್ಲಿರುವ ಅಮೋಘಸಿದ್ದೇಶ್ವರ ಮಠದ ಬಳಿಯೂ ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಚರ್ಚೆಗೆ ಗ್ರಾಸ: ವಿಶೇಷ ಪ್ರಾತಿನಿಧ್ಯದಡಿ ಮಸ್ಕಿ ಕ್ಷೇತ್ರಕ್ಕೆ ಸದ್ಯ 2.50 ಕೋಟಿ ರೂ. ಹಂಚಿಕೆ ಮಾಡಿದ ಈ ಆದೇಶ ಹೊರ ಬಿದ್ದ ಬಳಿಕ ಹಲವು ರೀತಿ ಚರ್ಚೆಗಳು ಶುರುವಾಗಿವೆ. ಇಷ್ಟು ವರ್ಷ ಬಿಡುಗಡೆಯಾಗದೇ ಇದ್ದ ಅನುದಾನ ಈಗ ಘೋಷಣೆಗಾಗಿರುವುದು ಎಲೆಕ್ಷನ್ ಉದ್ದೇಶಕ್ಕಾಗಿಯೇ ಎನ್ನುವ ಅಭಿಪ್ರಾಯಗಳು ಸಮಾಜಿಕ ಜಾಲತಾಣಗಳೂ ಸೇರಿ ಜನ-ಮನದಲ್ಲೂ ಹರಿದಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.