ಈಕ್ವಿಟಿಯಲ್ಲಿ ಹೂಡಿಕೆ ಉತ್ತಮ ಮಾರ್ಗ
Team Udayavani, Jan 31, 2021, 6:00 AM IST
ಖರ್ಚುಗಳೆಲ್ಲ ಕಳೆದು ಕೊನೆಗೆ ಉಳಿ ಯುವ ಹಣವನ್ನು ಉಳಿತಾಯ ಅಥವಾ ಹೂಡಿಕೆಗೆ ಮೀಸಲಿಡುವುದು ಸರಿಯಲ್ಲ. ಹೂಡಿಕೆಗಾಗಿ ಒಂದಿಷ್ಟು ಹಣವನ್ನು ತೆಗೆದಿರಿಸಿ, ಅನಂತರ ಉಳಿಯುವ ಹಣವನ್ನು ನಿತ್ಯದ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳ ಬೇಕು ಎನ್ನುವುದು ತಜ್ಞರ ಮಾತು.
ಈ ಮಾತು ಸಾಮಾನ್ಯ ಸಂದರ್ಭ ಗಳಲ್ಲಿ ಬಹುತೇಕರಿಗೆ ಹಾಸ್ಯಾಸ್ಪದ ಎನಿಸಿದ್ದಿದೆ. ಆದರೆ ಕೋವಿಡ್ ಬಿಕ್ಕ ಟ್ಟಿನ ಸಂದರ್ಭದಲ್ಲಿ ಈ ಮಾತಿನ ಹಿಂದಿನ ಮರ್ಮವೇನು ಎಂಬುದು ಅನೇಕರಿಗೆ ಅರಿವಾಗಿದೆ. ಉಳಿತಾಯ ಮಾಡಬೇಕು ಎಂಬ ಮಾತಿಗೆ ತತ್‌ಕ್ಷಣಕ್ಕೆ ಎದುರಾಗುವ ಪ್ರಶ್ನೆ, ಎಲ್ಲಿ ಉಳಿತಾಯ ಮಾಡಬೇಕು?, ಎಷ್ಟು ಉಳಿತಾಯ ಮಾಡಬೇಕು? ಎಂಬುದು. ತಿಂಗಳ ಆದಾಯದ ಶೇ.20ರಷ್ಟನ್ನಾದರೂ ನಿಶ್ಚಿತವಾಗಿ ಉಳಿತಾಯ ಮಾಡಲು ಸಾಧ್ಯವಾದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ
ಹಣವನ್ನು ಠೇವಣಿ ರೂಪದಲ್ಲಷ್ಟೇ ಇರಿಸಿದರೆ ಕಾಲಕ್ರಮೇಣ ಹಣದ ಮೌಲ್ಯವೇ ಕಡಿಮೆ ಆಗಿ ಬಿಡ ಬಹುದು. ಹಾಗಾಗಿ ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಲಾಭ ತಂದು ಕೊಡುವ ಸಾಮರ್ಥ್ಯವಿರುವ ಈಕ್ವಿಟಿಗ ಳಲ್ಲಿ ಹೂಡಿಕೆ ಮಾಡುವುದು ಉತ್ತಮ.
ವಯಸ್ಸನ್ನು ಆಧರಿಸಿ ಹೂಡಿಕೆ
ಸದಾ ಏರಿಳಿತ ಕಾಣುವ ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡುವುದು ಸೂಕ್ತ ಎಂಬುದು ಸಾಮಾನ್ಯ ಪ್ರಶ್ನೆ. ಇದು ವ್ಯಕ್ತಿಯ ವಯಸ್ಸನ್ನು ಆಧರಿಸಿರುತ್ತದೆ. ವ್ಯಕ್ತಿಯ ಈಗಿನ ವಯಸ್ಸನ್ನು 100ರಿಂದ ಕಳೆದಾಗ ಎಷ್ಟು ಮೊತ್ತ ಸಿಗುತ್ತದೆಯೋ, ಅಷ್ಟು ಪ್ರಮಾಣದ ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಉದಾಹರಣೆಗೆ ವ್ಯಕ್ತಿಯೊಬ್ಬನಿಗೆ ಈಗ 30 ವರ್ಷ ವಯಸ್ಸು ಎಂದಾದಲ್ಲಿ, ಆತ ತನ್ನ ಒಟ್ಟು ಉಳಿತಾಯದಲ್ಲಿ ಶೇ.70ರಷ್ಟನ್ನು ಈಕ್ವಿಟಿಗಳ ಮೇಲೆ ಹೂಡಿಕೆ ಮಾಡಬಹುದು.
ಇನ್ನುಳಿದ ಶೇ.30ರಷ್ಟನ್ನು ನಿಶ್ಚಿತ ಠೇವಣಿಗಳಲ್ಲಿ ಅಥವಾ ಸಾಲಪತ್ರಗಳಲ್ಲಿ ಹೂಡಿಕೆ ಮಾಡಬಹುದು. 70 ವರ್ಷದವರು ಈಕ್ವಿಟಿಗಳ ಮೇಲಿನ ಹೂಡಿಕೆಯನ್ನು ಶೇ.30ರಷ್ಟಕ್ಕೆ ಇಳಿಸಿ, ಇನ್ನುಳಿದ ಶೇ.70ನ್ನು ನಿಶ್ಚಿತ ಠೇವಣಿಗಳಲ್ಲಿ ಇರಿಸುವುದು ಉತ್ತಮ. ಈ ಸೂತ್ರ ವನ್ನು ಎಲ್ಲರೂ ಪಾಲಿಸಬೇಕು ಎಂದೇನೂ ಇಲ್ಲ. ಮಾರುಕಟ್ಟೆಯ ಏರಿಳಿತ ಜೀರ್ಣಿಸಿಕೊಳ್ಳುವ ಶಕ್ತಿ ಇರುವವರು ಹೆಚ್ಚಿನ ಮೊತ್ತವನ್ನು ಅಲ್ಲಿ ಹೂಡಿಕೆ ಮಾಡಬಹುದು.
ನೇರ ಹೂಡಿಕೆ ಎಚ್ಚರ ಅಗತ್ಯ
ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಕೆಲವು ಆ್ಯಪ್ ಅತ್ಯಂತ ಸುಲಭವಾಗಿ, ಮನೆ ಯಲ್ಲಿ ಕುಳಿತೇ ಡಿಮ್ಯಾಟ್ ಖಾತೆ ತೆರೆ ಯುವ, ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಸೌಲಭ್ಯ ನೀಡುತ್ತಿವೆ. ಇದು ನೇರ ವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವ ಆಸೆಯನ್ನು ಹಲವರಲ್ಲಿ ಹುಟ್ಟಿಸಬಹುದು. ಆದರೆ ಕಂಪೆನಿಗಳ ಶಕ್ತಿ-ದೌರ್ಬಲ್ಯಗಳನ್ನು ಖು¨ªಾಗಿ ಅರ್ಥ ಮಾಡಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಷೇರುಗಳಲ್ಲಿ ನೇರ ಹೂಡಿಕೆ ಬೇಡವೇ ಬೇಡ. ಮ್ಯೂಚುವಲ್ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಹೆಚ್ಚು ಸುರಕ್ಷಿತ. ಮ್ಯೂಚುವಲ್ ಫಂಡ್‌ಗಳನ್ನು ನಿರ್ವಹಿಸುವವರು, ಪ್ರತೀ ಕಂಪೆನಿಯ ಶಕ್ತಿ- ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು ಹಣ ಹೂಡಿಕೆ ಮಾಡಿ ಗರಿಷ್ಠ ಲಾಭವನ್ನು ತಂದು ಕೊಡುವ ಹೊಣೆ ಹೊತ್ತಿ ರುತ್ತಾರೆ. ಹಾಗಾಗಿ ಷೇರು ಮಾರುಕಟ್ಟೆಯ ಏರಿಳಿತಗಳ ಅರಿವು ಇಲ್ಲ ದವರಿಗೆ ನೇರವಾಗಿ ಷೇರು ವಹಿವಾಟು ಸೂಕ್ತ ವಲ್ಲ ಎಂಬುದು ತಜ್ಞರ ಕಿವಿಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.