ಮ್ಯಾನ್‌ಹೋಲ್ ಸ್ವತ್ಛತೆಗೆ ರೋಬೋಟ್ ಬಳಕೆ
Team Udayavani, Jan 31, 2021, 2:14 PM IST
ಮೈಸೂರು: ರಾಜ್ಯದಲ್ಲೇ ಪ್ರಥಮವಾಗಿ ಒಳಚರಂಡಿ ಸ್ವತ್ಛತೆಗೆ ರೋಬೋಟ್ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.
ಸ್ವತ್ಛ ಸರ್ವೇಕ್ಷಣ್ ಅಭಿಯಾನ ಆರಂಭವಾಗಿರುವ ಬೆನ್ನಲ್ಲೆ ಮೈಸೂರು ಮಹಾನಗರ ಪಾಲಿಕೆ, ರೋಬೋಟ್ ಬಳಸಿ ಒಳ ಚರಂಡಿಯನ್ನು ಸ್ವತ್ಛಗೊಳಿಸುವ ಸಲುವಾಗಿ ಬ್ಯಾಂಡಿಕೋಡ್ ರೋಬೋಟ್ ಯಂತ್ರ ಖರೀದಿಸಿದೆ. ಬ್ಯಾಂಡಿಕೋಡ್ ರೋಬೋಟ್ ಮೂಲತಃ ಕೇರಳ ರಾಜ್ಯದ್ದು. ಅಲ್ಲಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಪ್ರಯೋಗಾತ್ಮಕವಾಗಿ ತಯಾರಿಸಿದ್ದ ಈ ಯಂತ್ರ 2018ರಿಂದಲೂ ಚಾಲ್ತಿಯಲ್ಲಿದೆ.
32 ಲಕ್ಷಕ್ಕಿಂತ ಹೆಚ್ಚಿನ ಖರ್ಚು ಈ ರೋಬೋಟ್ ಖರೀದಿಗೆ ಆಗಲಿದೆ. ಮಹಾನಗರ ಪಾಲಿಕೆ ಈ ಯಂತ್ರದ ಬಗ್ಗೆ ಮಾಹಿತಿ ಪಡೆದುಕೊಂಡು ಪುಣೆಯ ಕಂಪನಿಯೊಂದರಿಂದ ಈ ಯಂತ್ರ ಖರೀದಿಸಿದೆ. ಪುಣೆಯ ತಂಡವೊಂದು ಮೈಸೂರಿಗೆ ಆಗಮಿಸಿ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗೆ ಈ ಬ್ಯಾಂಡಿಕೋಡ್ ರೋಬೋಟ್ ಬಳಕೆಯ ವಿಧಾನಗಳ ಕುರಿತು ತರಬೇತಿ ನೀಡಲಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಇನ್ಮುಂದೆ ಮ್ಯಾನ್‌ಹೋಲ್ ಒಳಗೆ ಮನುಷ್ಯರು ಇಳಿದು ಕೆಲಸ ಮಾಡುವ ಪ್ರಮಯವೇ ಉದ್ಬವವಾಗುವುದಿಲ್ಲ. ಈ ಹೊಸ ಟೆಕ್ನಾಲಜಿಯ ರೋಬೋಟ್ ಅನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಲೋಕಾರ್ಪಣೆ ಮಾಡಲಿದ್ದು, ಅದಕ್ಕಾಗಿ ಸಚಿವರ ಬಳಿ ದಿನಾಂಕ ಕೇಳಲಾಗಿದೆ. ಶೀಘ್ರದಲ್ಲೆ ರೋಬೋಟ್‌ನಿಂದ ಮ್ಯಾನ್ ಹೋಲ್ ಕ್ಲೀನಿಂಗ್ ನಡೆಯಲಿದೆ.
ಇದನ್ನೂ ಓದಿ:ಕಸದ ಕೊಂಪೆಯಂತಾದ ವೇಮಗಲ್ ಪಟ್ಟಣ
ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ಪಾಲಿಕೆ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಈಗಾಗಲೇ ಬ್ಯಾಂಡಿಕೋಡ್ ರೊಬೋಟ್ ಖರೀದಿಸಲಾಗಿದೆ. ಮ್ಯಾನ್ ಹೋಲ್ ಸ್ವತ್ಛಗೊಳಿಸಲು ಈ ರೊಬೋಟ್ ಬಹಳ ಉಪಯುಕ್ತ ವಾಗಲಿದೆ. ಕಾರ್ಮಿಕರ ಅನಾರೋಗ್ಯ, ಅವಘಡ ತಪ್ಪಿಸಲು ಇದು ಸಹಕಾರಿ. ಈ ಮೂಲಕ ಶೀಘ್ರದಲ್ಲೇ ನಗರದ ಒಳ ಚರಂಡಿ ಸ್ವತ್ಛತೆಗೆ ರೊಬೋಟ್ ಬಳಕೆ ಮಾಡಲಿದ್ದು, ನಗರಾಭಿವೃದ್ಧಿ ಸಚಿವರಿಂದ ಯಂತ್ರಕ್ಕೆ ಚಾಲನೆ ಸಿಗಲಿದೆ.
ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.