ತಾಳ್ಮೆ ಪರೀಕ್ಷಿಸದೆ ಮೀಸಲು ಕೊಡಿ
ಪಂಚಲಕ್ಷ ಪಾದಯಾತ್ರೆಯಲ್ಲಿ ಸಿಎಂ ಬಿಎಸ್‌ವೈ ಪ್ರತಿಕೃತಿ ದಹನ
Team Udayavani, Jan 31, 2021, 2:25 PM IST
ದಾವಣಗೆರೆ: ಮುಖ್ಯಮಂತ್ರಿಗಳೇ, ಇನ್ನೂ ನಮ್ಮ ತಾಳ್ಮೆ ಪರೀಕ್ಷಿಸ ಬೇಡಿ, ಕೂಡಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ. ಇನ್ನು ಮುಂದಿನ ಹೋರಾಟ ಉಗ್ರ ಸ್ವರೂಪ ಪಡೆ ಕೊಳ್ಳಲಿದ್ದು ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ನೀವೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ
ಎಚ್ಚರಿಕೆ ನೀಡಿದರು.
ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯ ವರೊಂದಿಗೆ ಶನಿವಾರ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಾರುಕೋಲು ಬೀಸುವ ಮೂಲಕ ಪಾದಯಾತ್ರೆ ಮುಂದು ವರಿಸಿ ಶ್ರೀಗಳು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂ ರಪ್ಪ ಅವರು ಲಿಂಗಾಯತ ಸಮಾಜದ ಒಳಪಂಗಡವೊಂದರ ನಾಯಕರು. ಅವರು ತಮ್ಮ ಪಂಗಡಕ್ಕೆ 2ಎ ಮೀಸಲಾತಿ ಪಡೆದಾಗ ನಾವೆಲ್ಲ ಬೆಂಬಲಿಸಿದ್ದೇವೆ. ಅವರಿಗೆ ಯಾರಾದರೂ ತಪ್ಪು ತಿಳಿವಳಿಕೆ ನೀಡಿದ್ದರೆ ಮುಖ್ಯ ಮಂತ್ರಿಯವರು ಕೂಡಲೇ ಅದನ್ನು ತೆಗೆದುಹಾಕಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಅಧಿವೇಶನದಲ್ಲಿ ಚರ್ಚಿಸಿ: ರಾಜ್ಯದಲ್ಲಿ 17 ಜನ ಪಂಚಮ ಸಾಲಿ ಶಾಸಕರಿದ್ದು ಎಲ್ಲರೂ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಶಾಸಕರು ಎಲ್ಲ ಸಮುದಾಯದಿಂದ ಆಗಿರಬಹುದು. ಆದರೆ ಟಿಕೆಟ್ ಕೊಡುವಾಗ ಪಂಚಮಸಾಲಿ ಎಂಬ ಜಾತಿ ನೋಡಿಯೇ ಕೊಡಲಾಗಿದೆ ಎಂಬುದನ್ನು ಶಾಸಕರು ಅರಿಯಬೇಕು. ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಬೇಕು. ಉಳಿದವರಿಗೆ ನ್ಯಾಯ ಕೊಡುತ್ತೀರಿ, ಪಂಚಮಸಾಲಿಗಳಿಗೆ ನ್ಯಾಯ ಏಕೆ ಒದಗಿಸುತ್ತಿಲ್ಲ ಎಂದು ಕೇಳಬೇಕು.
ಮೀಸಲಾತಿ ಕೊಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಬೇಕು. ಈ ವಿಚಾರದಲ್ಲಿ ಪಂಚಮಸಾಲಿ ಸಮಾಜದ ಎಲ್ಲ ಶಾಸಕರು ಸಹ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, 2ಎ ಮೀಸಲಾತಿ ಪಂಚಮಸಾಲಿಗಳಿಗೆ ನೀಡುವ ಭಿಕ್ಷೆಯಲ್ಲ, ಅದು ಹಕ್ಕು. ಲಿಂಗಾಯತದ ಅನೇಕ ಒಳಪಂಗಡಗಳು 2ಎ ಮೀಸಲಾತಿಯನ್ನು ಈಗಾಗಲೇ ಪಡೆದಿವೆ. ಅದು ಪಂಚಮಸಾಲಿಗಳಿಗೂ ಸಿಗಬೇಕು. ಉಭಯ ಶ್ರೀಗಳು ಸಮಾಜದ ಉದ್ಧಾರದ ಹೆದ್ದಾರಿಯಲ್ಲಿ ನಡೆಯುತ್ತಿದ್ದೇವೆ. ಎಲ್ಲರೂ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು
ಎಂದರು.
ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಸಮಾ ಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಶ್ರೀಗಳ ಪಾದಯಾತ್ರೆ 369 ಕಿ.ಮೀ. ಕ್ರಮಿಸಿದರೂ ಸರ್ಕಾರ ಕಣ್ಣು ತೆರೆದಿಲ್ಲ. ಶ್ರೀಗಳನ್ನು ರಸ್ತೆಯಲ್ಲಿ ನಡೆಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪಂಚಮಸಾಲಿ ಸಮಾಜದ ಪ್ರಮುಖರಾದ ಬಿ.ಸಿ. ಉಮಾಪತಿ, ಎಚ್.ಎಸ್. ನಾಗರಾಜ್, ಪ್ರಭು ಕಲಬುರ್ಗಿ ಇನ್ನಿತರರು ಇದ್ದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಒತ್ತಾಯಿಸಿ ಕೂಡಲಸಂಗಮದಿಂದ ಆರಂಭವಾಗಿರುವ ಪಂಚಲಕ್ಷ ಪಾದಯಾತ್ರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ಶನಿವಾರ ಕ್ರಾಂತಿ ರೂಪ ಪಡೆದುಕೊಂಡಿತು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು, ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬಾರುಕೋಲು ಬೀಸಿ ಹೋರಾಟದ ತೀವ್ರತೆ ಹೆಚ್ಚಿಸಿದರು. ಪಾದಯಾತ್ರೆ ನಗರದ ಗಾಂಧಿ ವೃತ್ತ ತಲುಪುತ್ತಿದ್ದಂತೆ ಪಂಚಮಸಾಲಿ ಸಮಾಜದ ಪ್ರಮುಖರು, ಉಭಯ ಶ್ರೀಗಳ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.ಈ ಸಂದರ್ಭ ಮಾತನಾಡಿದ ಉಭಯ ಶ್ರೀಗಳು ಹಾಗೂ ಸಮಾಜದ ಮುಖಂಡರು, ಪಾದಯಾತ್ರೆ ಮುಂದೆ ಸಾಗುತ್ತಿದ್ದಂತೆ ಇನ್ನಷ್ಟು ಉಗ್ರರೂಪ ತಾಳುತ್ತದೆ. ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.