ಯುಗಾದಿ ಬಳಿಕ ಹೊಸ ಮುಖ್ಯಮಂತ್ರಿ
ಉತ್ತರ ಕರ್ನಾಟಕ ಭಾಗದವರೇ ನೂತನ ಮುಖ್ಯಮಂತ್ರಿ ಆಗಲಿದ್ದಾರೆ
Team Udayavani, Jan 31, 2021, 2:30 PM IST
ವಿಜಯಪುರ: ಮುಂಬರುವ ಯುಗಾದಿ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದು, ಉತ್ತರ ಕರ್ನಾಟಕ ಭಾಗದವರೇ ನೂತನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಹೊಸ ಮುಖ್ಯಮಂತ್ರಿ ಬರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಮಂತ್ರಿ ಸ್ಥಾನ ಬೇಕು ಎಂದು ದಾವಣಗೆರೆಯಲ್ಲಿ ಮಾತನಾಡಿಲ್ಲ. ಬ್ಲಾಕ್‌ವೆುಲ್ ಮಾಡಿಲ್ಲ, ಮಾಡುತ್ತಿಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಿಲ್ಲ. ಮಂತ್ರಿ ಕೊಡುವ ಸ್ಥಾನದಲ್ಲಿ ನಮ್ಮವರೇ ಬರುತ್ತಾರೆ ಕಾಯಿರಿ ಎಂದು ಮತ್ತೂಮ್ಮೆ ಮಾರ್ಮಿಕವಾಗಿಯೇ ಉತ್ತರಿಸಿದರು.
ರಾಮ ಮಂದಿರ ನಿರ್ಮಾಣ ನಿ ಧಿ ಸಂಗ್ರಹ ವಾಹನದ ಮೇಲೆ ಕಲ್ಲು ಎಸೆಯುವ ಮೂಲಕ ಬೆಂಗಳೂರು ಮತೀಯ ಗಲಭೆ ಸೃಷ್ಟಿಸುವ ಹಾಟ್‌ಸ್ಪಾಟ್ ಆಗುತ್ತಿದೆ ಎಂಬುದಕ್ಕೆ ಮತ್ತೂಮ್ಮೆ ಸಾಕ್ಷಿ ಒದಗಿಸಿದೆ. ರಾಜ್ಯದಲ್ಲಿ ಕೋಮು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಕೋಮು ಗಲಭೆ ಸೃಷ್ಟಿಸುವವರ ಜೊತೆ ಮುಖ್ಯಮಂತ್ರಿ, ಗೃಹ ಸಚಿವರು ಸಲುಗೆ ಹೊಂದಿದ್ದರೆ ರಾಜ್ಯಕ್ಕೆ ದುಸ್ಥಿತಿ ತಪ್ಪಲ್ಲ. ಇದಲ್ಲದೇ ರಾಜ್ಯದಲ್ಲಿ ವಿರೋಧ ಪಕ್ಷಗಳೇ ಸತ್ತು ಹೋಗಿವೆ ಎಂದು ವಿಪಕ್ಷಗಳ ವಿರುದ್ಧವೂ ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.