ಜನ ಸುಮ್ಮನಿರುವುದರಿಂದಲೇ ದೇಶ ಹಾಳಾಗುತ್ತಿದೆ

Team Udayavani, Feb 1, 2021, 11:08 AM IST

Siddaramaiah speach

ಮೈಸೂರು: “ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಜಿಡಿಪಿ ಕುಸಿಯುತ್ತಿದೆ. ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೂ, ಜನ ಸುಮ್ಮನಿದ್ದಾರೆ. ಹೀಗಾಗಿಯೇ ದೇಶ ಹಾಳಾ ಗುತ್ತಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.  ಮನಮೋಹನ್‌ ಸಿಂಗ್‌ ಸರ್ಕಾರವಿದ್ದಾಗ ದೇಶದ ಜಿಡಿಪಿ ಶೇ.9ರಷ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿ ನಿಂದ ಜಿಡಿಪಿ ಕ್ರಮೇಣ ಕ್ಷೀಣಿಸಿ ಶೇ.7.7ಕ್ಕೆ ಇಳಿದಿದೆ. ಆರ್ಥಿಕ ಬೆಳವಣಿಗೆ ನರಾಕಾತ್ಮಕವಾಗಿದೆ. ಅಲ್ಲದೆ ಪೆಟ್ರೋಲ್‌ ಬೆಲೆ 92 ರೂ. ಆಗಿದೆ. ಇದೆಲ್ಲವನ್ನೂ ಮುಚ್ಚಿ ಹಾಕಲು ಮೋದಿ ಸರ್ಕಾರ ಮುಂದಿನ 2021 22ನೇ ವರ್ಷಕ್ಕೆ ಜಿಡಿಪಿ ಶೇ.11ಕ್ಕೆ ಏರುತ್ತದೆ ಎಂದ ಸುಳ್ಳು ಹೇಳುತ್ತಿದ್ದಾರೆ. ಯಾವ ಅರ್ಥದಲ್ಲಿ ಈ ಮಾತು ಹೇಳುತ್ತಿದ್ದಾರೆ? ಜಿಡಿಪಿ ಅಂಕಿ ಸಂಖ್ಯೆಯಲ್ಲೂ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಡೀ ದೇಶದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್‌ ರಾಜಕೀಯ ಪಕ್ಷವೇ ಅಲ್ಲ: ರಾಷ್ಟ್ರಪತಿ ಭಾಷಣ ತ್ಯಜಿಸುವುದಾಗಿ ಮಾಜಿ ಪ್ರಧಾನಿ ಎಚ್‌. ಡಿ.ದೇವೆಗೌಡರ ಹೇಳಿಕೆ ಕುರಿತು ಪ್ರತಿ ಕ್ರಿಯಿಸಿ, ಜೆಡಿಎಸ್‌ ಒಂದು ರಾಜಕೀಯ ಪಕ್ಷವೇ ಅಲ್ಲ. ಅವರ ಬಗ್ಗೆ ನಾನು ಮಾತೇ ಆಡಲ್ಲ ಎಂದರು.

ಇದನ್ನೂ ಓದಿ:ಪಾತ್ರಗಳ ಸುತ್ತ ದರ್ಶನ್‌ ಕಟೌಟ್: ಅಭಿಮಾನಿಗಳ ಹೊಸ ಪ್ರಯತ್ನ

ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಜನತೆಗೆ ಉತ್ತರ ಕೊಟ್ಟಿದ್ದಾರಾ?

ಬಿಜೆಪಿ ನೇತೃತ್ವದ ಸರ್ಕಾರಗಳಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ. ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ಕೊಡಬೇಕು. ರಫ್ತು-ಆಮದು ಹೆಚ್ಚಾಗಬೇಕು. ಕೈಗಾರಿಕಾ, ಕೃಷಿ ಉತ್ಪನ್ನ ಹೆಚ್ಚಾಗಬೇಕು. ಏನೂ ಮಾಡದಿದ್ದರೆ ಅಭಿವೃದ್ಧಿ ಹೇಗಾಗುತ್ತದೆ. ಇಲ್ಲಿಯವರೆಗೆ ಪ್ರಧಾನಿಗಳು ಮನ್‌ ಕಿ ಬಾತ್‌ನಲ್ಲಿ ಉತ್ತರ ಕೊಟ್ಟಿದ್ದಾರಾ? ಯಾಕೆ ಹೇಳಿಲ್ಲ? ಮನಮೋಹನ್‌ ಸಿಂಗ್‌ಕಾಲದಲ್ಲಿ ಪೆಟ್ರೋಲ್‌ 60 ರೂ, ಡೀಸೆಲ್‌ 44 ರೂ. ಇತ್ತು. ಈಗ ಏಕೆ  ಹೆಚ್ಚಾಗಿದೆ?. ಮನಮೋಹನ್‌ ಸಿಂಗ್‌ ಕಾಲದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 110 ಡಾಲರ್‌ ಇತ್ತು. ಈಗ 45-46 ಡಾಲರ್‌ ಇದೆ. ಆದರೂ, 110 ಡಾಲರ್‌ ಇದ್ದಾಗ ಪೆಟ್ರೋಲ್‌ ಬೆಲೆ 60 ರೂ. ಇತ್ತು. ಈಗ ಬ್ಯಾರಲ್‌ ಬೆಲೆ 45-36 ಡಾಲರ್‌ ಇದೆ. ಆದರೆ, ಪೆಟ್ರೋಲ್‌ ಬೆಲೆ 92 ರೂ. ಆಗಿದೆ. ಆದರೂ ಜನ ಸುಮ್ಮನಿದ್ದಾರಲ್ಲಾ. ದೇಶ ಹಾಳಾಗಿರುವುದು ಇದಕ್ಕೋಸ್ಕರವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ

Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.