ಚರ್ಚೆಗೆ ಕಾರಣವಾದ ಅರವಿಂದ ಪಾಟೀಲ ಮೌನ
Team Udayavani, Feb 1, 2021, 1:53 PM IST
ಖಾನಾಪುರ: ಮಾಜಿ ಶಾಸಕ ಅರವಿಂದನ ಪಾಟೀಲ ಬಿಜೆಪಿ ಸೇರ್ಪಡೆ ಕುರಿತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಂಇಎಸ್‌ದಲ್ಲಿ ಅಕ್ರೋಶ ವ್ಯಕ್ತವಾಗಿದ್ದರೂ ಮಾಜಿ ಶಾಸಕ ಅರವಿಂದ ಪಾಟೀಲ ಅದಕ್ಕೆ ಯಾವುದೇ ಉತ್ತರ ನೀಡದೇ ಮೌನಕ್ಕೆ ಜಾರಿರುವುದು ಅಚ್ಚರಿಗೆ ಕಾರಣವಾಗಿದೆ. ತಮ್ಮ ಎಂಇಎಸ್ ನಿಷ್ಟೆ ಎಷ್ಟು ಎನ್ನುವದನ್ನು ಅವರು ಪ್ರದರ್ಶಿಸಬೇಕಾಗಿತ್ತಾದರೂ ಅವರು ಮೌನ ತಾಳಿರುವುದು ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಅಪರೋಕ್ಷವಾಗಿ ಬೆಂಬಲಿಸಿದಂತಾಗಿದೆ.
ಅರವಿಂದ ಪಾಟೀಲ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿ ತಾವು ಬಿಜೆಪಿ ಸೇರುವ ಗೊಂದಲಕ್ಕೆ ಕೊನೆ ಹಾಡಬಹುದಾಗಿತ್ತು. ಆದರೆ ಈ ಕುರಿತು ತುಟಿಪಿಟಕ್ಕೆನ್ನದೆ ಮೌನವಾಗಿದ್ದು ಒಂದು ಕಾಲು ಎಂಇಎಸ್ ಕಡೆಗೆ, ಇನ್ನೊಂದು ಕಾಲು ಬಿಜೆಪಿಯತ್ತ ಎನ್ನುವ ಅಚ್ಚರಿಯ ನಡುವಳಿಕೆ ಪ್ರದರ್ಶಿಸುತ್ತಿದ್ದಾರೆ. ಗಡಿ ಮತ್ತು ಭಾಷೆ ವಿಷಯಗಳ ಇವರ ಹೋರಾಟ ಎಷ್ಟು ನಾಟಕೀಯ ಎನ್ನುವದು ಇಲ್ಲಿ ಅನಾವರಣಗೊಂಡಿದೆ. ಡಿಸಿಎಂ ಲಕ್ಷ್ಮಣ ಸವದಿ ರೆಡ್ ಕಾಪೆìಟ್ ಹಾಸಿ ಇವರನ್ನು ಬಿಜೆಪಿಗೆ ಕರೆದಿದ್ದಾರಾದರೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬಲಿ ಕೊಟ್ಟು ಪಾಟೀಲ ಬಿಜೆಪಿಗೆ ಜಿಗಿಯುವರೇ ಎನ್ನುವುದು ಬಿಜೆಪಿ ಮತ್ತು ಎಂಇಎಸ್ ಪಕ್ಷಗಳಲ್ಲಿ ಭಾರಿ ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ವಿಚಿತ್ರ ಎಂದರೆ ಬಿಜೆಪಿಯಲ್ಲಿ ಕೂಡ ಒಳಗಡೆ ಇರುವ ಗುಂಪುಗಾರಿಕೆಯಿಂದ ಹಲವು ನಾಯಕರು ಮಾಜಿ ಶಾಸಕ ಅರವಿಂದ ಪಾಟೀಲರನ್ನು ಅಪ್ಪಿ ಕೊಂಡು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಹಲವರು ಅವರ ಆಗಮನ ವಿರೋ ಧಿಸಲು ಸಜ್ಜಾಗುತ್ತಿದ್ದಾರೆ. ಎಂಇಎಸ್ ಹಾಗೂ ಬಿಜೆಪಿಯವರು ತಮ್ಮ ತಮ್ಮ ಹೈಕಮಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಖಾನಾಪುರ ಮತ ಕ್ಷೇತ್ರದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲರದೇ ಪ್ರಮುಖ ಚರ್ಚೆ ವಿಷಯವಾಗಿದೆ. ಎಂಇಎಸ್ ಕಟ್ಟಾ ಕಾರ್ಯಕರ್ತರಿಗೆ ಅರವಿಂದ ಪಾಟೀಲರ ಡಬಲ್ ಗೇಮ್‌ನಿಂದ ಶಾಕ್ ಆಗಿದ್ದರೆ ಅರವಿಂದ ಪಾಟೀಲರಿಗೆ ತಾವು ಬಿಜೆಪಿ ಸೇರ್ಪಡೆಯಾದರೆ ಎಲ್ಲಿ ಎಂಇಎಸ್ ಕಾರ್ಯಕರ್ತರು ತಮ್ಮಿಂದ ದೂರ ಸರಿಯುತ್ತಾರೊ ಎನ್ನುವ ಅಂಜಿಕೆ ಭಯ ಕೂಡ ಇದ್ದಂತಿದೆ.
ಇದನ್ನೂ ಓದಿ:ಕೇಂದ್ರ ಬಜೆಟ್ 2021 : ವೈಯಕ್ತಿಕ ತೆರಿಗೆದಾರರಿಗೆ ದೊಡ್ಡ ನಿರಾಶೆ !
ಹೀಗಾಗಿ ಅವರು ಕಾಯ್ದು ನೋಡುವ ತಂತ್ರಕ್ಕೆ ಶರಣಾದಂತಿದೆ. ಅಥವಾ ನಿಜವಾಗಿ ಅರವಿಂದ ಪಾಟೀಲರು ತಮ್ಮ ಮುಂದಿನ ನಡೆ ಬಗ್ಗೆ ತಾವೇ ಗೊಂದಲದಲ್ಲಿ ಇದ್ದಂತಿದೆ. ಕಳೆದ ವಿಧಾನಸಭೆ ಚುನಾವಣೆ ಕಾಲಕ್ಕೆ ಬಿಜೆಪಿ ಸೇರ್ಪಡೆ ವಿಚಾರ ಬಂದಾಗಲೂ ತಾವು ಬಿಜೆಪಿ ಸೇರ್ಪಡೆಯಾಗುತ್ತಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅವರ ವರ್ತನೆ ಬದಲಾಗಿದ್ದು ಎಂಇಎಸ್ ಹೋರಾಟಕ್ಕೆ ತಿಲಾಂಜಲಿ ನೀಡುವ ಸಾಧ್ಯತೆ ದಟ್ಟಗಾಗಿ ಕಂಡು ಬರುತ್ತಿದೆ. ಇವರು ಎಂಇಎಸ್‌ನಲ್ಲಿ ಉಳಿದರೂ ಬಿಜೆಪಿ ಸೇರ್ಪಡೆಯಾದರೂ ಎರಡು ಕಡೆ ಪ್ರಬಲ ಬಂಡಾಯ ಎದುರಿಸಬೇಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಜಗದೀಶ ಹೊಸಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.