ನಾಟಕದಿಂದ ಮನುಷ್ಯನ ಬದುಕು ಬದಲಾವಣೆ
Team Udayavani, Feb 1, 2021, 2:24 PM IST
ಮುಂಡರಗಿ: ನಾಟಕ, ಬಯಲಾಟ ಉಳಿಸಿ-ಬೆಳೆಸಿ ಪ್ರೋತ್ಸಾಹಿಸುವುದು ಕಲಾಭಿಮಾನಿಗಳ ಕರ್ತವ್ಯ. ನಾಟಕದಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದು ಮುಂಡರಗಿ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಪೀಠಾಧಿ ಪತಿ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಹೇಳಿದರು. ಪಟ್ಟಣದ ಪೋಲೀಸ್ ಪರೇಡ ಮೈದಾನದಲ್ಲಿಬಸವ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳು ಮನರಂಜನೆಗೆ ಸೀಮಿತವಾಗಿಲ್ಲ. ನಾಟಕಗಳು ಮನುಷ್ಯನ ಸಾಮಾಜಿಕ ಜೀವನದಲ್ಲಿ ಬದಲಾವಣೆ ತರಬಲ್ಲವು. ನಾಟಕ, ಬಯಲಾಟಗಳಿಗೆ ಹಿನ್ನೆಲೆ ಇದೆ. ಅವುಗಳನ್ನು ಉಳಿಸಿ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನವಾಗಬೇಕಿದೆ ಎಂದರು.
12ನೇ ಶತಮಾನದ ಡೋಹರ ಕಕ್ಕಯ್ಯ, ಮಾದರ ಚನ್ನಯ್ಯ ಮೊದಲಾದ ಶರಣರು ಬಸವಣ್ಣನವರ ಜೊತೆಗೂಡಿ ಸಮಾಜದಲ್ಲಿ ಸುಧಾರಣೆ ತರಲು ಪ್ ಯತ್ನಿಸಿದ್ದಾರೆ. ಮಹಾತ್ಮ ಗಾಂಧಿಧೀಜಿ ನಾಟಕ ನೋಡಿಯೇ ಪ್ರೇರಣೆ ಪಡೆದು ಸತ್ಯದ ಮಾರ್ಗದಲ್ಲಿ ಸಾಗಿ ಮಹಾತ್ಮರಾದರು. ಆನಂದಗೌಡ ಪಾಟೀಲ ಕುಟುಂಬ ವರ್ಗದವರು ಶಿವಸಂಚಾರ ನಾಟಕ ಕಲಾವಿದರ ತಂಡ ಕರೆಸಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ:ಕುಡಿವ ನೀರು ಪೂರೈಕೆಗೆ ಅನುದಾನ ನೀಡಿ
ನಂತರ ಡೋಹರ ಕಕ್ಕಯ್ಯ, ಜೀವವಿದ್ದರೆ ಜೀವನ ಎಂಬಬ . ಈ ವೇಳೆ ಶ್ರೀ ಗೋಣಿರುದ್ರ ಸ್ವಾಮೀಜಿ, ನಾಗೇಶ ಹುಬ್ಬಳ್ಳಿ, ಬಿ. ಬಾಬು, ಆನಂದಗೌಡ ಪಾಟೀಲ, ಬಡಿಗೇರ, ಗೋವಿಂದರಾಜ ಕಾಲವಾಡ, ಲಿಂಗರಾಜಗೌಡ ಪಾಟೀಲ, ಪಾಲಾಕ್ಷಿ ಗಣದಿನ್ನಿ,ಮಹಾಂತೇಶ ತ್ಯಾಮಾನವರ, ವೀರಣ್ಣ ತುಪ್ಪದ, ಮೈಲಾರಪ್ಪ ಕಲಕೇರಿ, ಬಸವರಾಜ ರಾಮೇನಹಳ್ಳಿ, ಶ್ರೀನಿವಾಸ ಅಬ್ಬಿಗೇರಿ ಇತರರಿದ್ದರು. ಡಾ| ನಿಂಗು ಸೊಲಗಿ ಪ್ರಾಸ್ತಾವಿಕಮಾತನಾಡಿದರು. ಎ.ಕೆ. ಮುಲ್ಲಾನವರ ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.