ಮೀಸಲಾತಿ ಘೋಷಣೆವರೆಗೂ ಹೋರಾಟ
ನಾವು ಕೇಳುತ್ತಿರುವುದು ಮೀಸಲಾತಿಯೆಂಬ ರೊಟ್ಟಿಯಲ್ಲಿನ ಒಂದು ಚೂರು: ಕೂಡಲಸಂಗಮ ಶ್ರೀ
Team Udayavani, Feb 1, 2021, 2:46 PM IST
ಭರಮಸಾಗರ: ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿನ ಪಾದಯಾತ್ರೆ ದಾವಣಗೆರೆ ತಲುಪಿದ ವೇಳೆ ಸಮಾಜದ ಯುವಕರು
ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸುವ ಮೂಲಕ ನಮ್ಮ ಸಮಾಜದ ನೋವನ್ನು ಹೊರಹಾಕಿದ್ದಾರೆ ಎಂದು ಕೂಡಲಸಂಗಮದ
ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜ ನಡೆಸುತ್ತಿರುವ ಪಾದಯಾತ್ರೆ ಇಲ್ಲಿನ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣಕ್ಕೆ
ಆಗಮಿಸಿದ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.
ಸಂವಿಧಾನದ ಮೂಲಕ ಅಂಬೇಡ್ಕರ್ ರವರು ಒದಗಿಸಿರುವ ಮೀಸಲಾತಿಯೆಂಬ ರೊಟ್ಟಿಯಲ್ಲಿ ಒಂದು ಚೂರು ಕೇಳುತ್ತಿದ್ದೇವೆ. ಮುಖ್ಯಮಂತ್ರಿಗಳು ಎಲ್ಲಾ ವರದಿಗಳನ್ನು ತರಿಸಿಕೊಂಡು ಪರಿಶೀಲಿಸಿ 2ಎ ಮೀಸಲಾತಿ ಘೋಷಿಸಿ ಆದೇಶ ಹೊರಡಿಸುವವರೆಗೂ
ನಮ್ಮ ಹೋರಾಟ ನಿಲ್ಲದು. ಈ ಕುರಿತು ಪ್ರಧಾನಮಂತ್ರಿಯವರು ದೆಹಲಿಗೆ ಕರೆದರೂ ನಾವು ಹೋಗಲು ಸಿದ್ಧರಿಲ್ಲ. ಏಕೆಂದರೆ ನಮ್ಮ
ಪಾದಯಾತ್ರೆ ನಿರ್ದಿಷ್ಟ ಉದ್ದೇಶ ಹೊಂದಿದೆ.
ಮುಖ್ಯಮಂತ್ರಿಯವರು ಸಚಿವ ಮುರುಗೇಶ್ ನಿರಾಣಿ ಮೂಲಕ ಪಾದಯಾತ್ರೆ ಕುರಿತು ಹೇಳಿಕೆ ಕೊಡಿಸಿದ್ದಾರೆ. ಈ ಮೂಲಕ ಸಚಿವರನ್ನು
ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
18 ದಿನಕ್ಕೆ ಪಾದಯಾತ್ರೆ ಕಾಲಿಟ್ಟಿದ್ದು, 400 ಕಿಮೀ ಸಾಗಿದೆ. ಭೇದ ಭಾವವಿಲ್ಲದ ಏಕೈಕ ಸಮಾಜ ಪಂಚಮಸಾಲಿ ಸಮಾಜವಾಗಿದೆ.
ಕೇಳುವ ಗುಣ ನಮಗೆ ಇರಲಿಲ್ಲ. ಕೊಟ್ಟು ದೊಡ್ಡವರಾಗಿದ್ದೇವೆ. ಶಿಕ್ಷಣ ಮತ್ತು ದಾಸೋಹಕ್ಕೆ ಸಮಾಜದ ಕೊಡುಗೆ ಅಪಾರ. ಸೊಲ್ಲಾಪುರದಿಂದ
ಕೊಳ್ಳೇಗಾಲವರೆಗೆ ಸಮಾಜ ಹಾಸ್ಟೆಲ್‌ಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಕೊಡುಗೆ ನೀಡಿದೆ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಬೀದಿಗಿಳಿದು ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.
“ಊರಿಗೆ ಉಪಕಾರಿ ಮನೆಗೆ ಮಾರಿ’ ಎಂಬಂತೆ ಸಮಾಜದ ಸ್ಥಿತಿಯಾಗಿದೆ. ಸಮಾಜದ ಮಕ್ಕಳಿಗೆ ಶಿಕ್ಷಣದಲ್ಲಿ ಸ್ಥಾನ ಸಿಗದೆ ವಂಚಿತರಾಗುತ್ತಿರುವ ಬಗ್ಗೆ ಮಕ್ಕಳು ಪೋಷಕರನ್ನು ಪ್ರಶ್ನಿಸುತ್ತಿದ್ದಾರೆ. ಉನ್ನತ ಹುದ್ದೆಗಳಿಂದ ನಮ್ಮವರು ವಂಚಿತರಾಗುತ್ತಿದ್ದಾರೆ.
ಲಿಂಗಾಯಿತರಲ್ಲೆ ಹಲವರಿಗೆ ಮೀಸಲಾತಿ ದೊರೆತಿದೆ. ನಮ್ಮ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗದೆ ಅನ್ಯಾಯವಾಗಿದೆ ಎಂದರು.
ಹರಿಹರದ ವಚನಾನಂದ ಸ್ವಾಮೀಜಿ ಮಾತನಾಡಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ನಾವು ಸಮಾಜದ ಉದ್ಧಾರಕ್ಕಾಗಿ ಹೆದ್ದಾರಿಗೆ ಬಂದಿದ್ದೇವೆ. ತಾತ್ವಿಕ ಭೇದದಿಂದ ಮಠಗಳು ಬೇರೆಯಾಗಿದ್ದರೂ ಇದೀಗ ಸಮಾಜದ ಒಳಿತಿಗಾಗಿ ನಾವೆಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ.
ತಂದೆಯಂತಿರುವ ಸಮಾಜದ ಶ್ರೀರಕ್ಷೆ ನಮ್ಮ ಮೇಲಿರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ ಕೀರ್ತಿ ಲಿಂಗೈಕ್ಯ ಜಯದೇವ ಶ್ರೀಗಳಿಗೆ ಸಲ್ಲುತ್ತದೆ. ನಮ್ಮಲ್ಲಿ ನಡೆ-ನುಡಿ
ಒಂದಾಗಿರಬೇಕು. ನಮ್ಮ ಮಠದ ಶ್ರೀಗಳ ಪಾದಯಾತ್ರೆ ಬಗ್ಗೆ ಬೇರೆಯವರು ಅವಹೇಳನ ಮಾಡುವುದು ನಿಲ್ಲಿಸಬೇಕು. ಸಮಾಧಾನವಾಗಿ ಸಮಾಜವನ್ನು ಕಟ್ಟೋಣ ಎಂದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ತೇರದಾಳ ಶಾಸಕ ಸಿದ್ದು ಸವದಿ, ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಎನ್. ಕೋಟ್ರೇಶ್, ಚಂದ್ರಶೇಖರ್ ಪೂಜಾರ್, ಕಲ್ಲಪ್ಪ, ನಾಗರಾಜ್, ರುದ್ರಾಣಿ ಗಂಗಾಧರ, ಎಂ.ಎಸ್. ಪಾಟೀಲ್, ವಿರಾಜ್ ಪಾಟೀಲ್, ವೀರೇಶ್, ಶಾಂತಕುಮಾರ್, ಪ್ರಭು ಕಲುºರ್ಗಿ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ,ಸಿದ್ದಮ್ಮ, ಪ್ರವೀಣ್‌ಕುಮಾರ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.