ಸರ್ಕಾರದ ಆದೇಶಕ್ಕೆ ಆಕ್ರೋಶ
Team Udayavani, Feb 1, 2021, 4:00 PM IST
ವಿಜಯಪುರ: ರಾಜ್ಯ ಸರ್ಕಾರ ಸಂವಿಧಾನದ ಅನುಚ್ಛೇದ 19(1)ರಲ್ಲಿ ಪ್ರದತ್ತ ಅಧಿ ಕಾರ ಕಿತ್ತಿಕೊಳ್ಳುವ ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್. ನಾಡಗಿರಿ ಮಾತನಾಡಿ, ರಾಜ್ಯ ಸರ್ಕಾರ ಜ. 18ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೇವಾ ನಿಯಮಗಳು ವಿಶೇಷ ಕೋಶ ಇವರ ಮೂಲಕ ಸುತ್ತೋಲೆ ಹೊರಡಿಸಿ ಸೇವಾ ಸಂಘವನ್ನು ಜಾತಿ, ಧರ್ಮ ವಂಶ, ಇತ್ಯಾದಿ ಯಾವುದೇ ಸಮೂಹದ ಆಧಾರದ ಮೇಲೆ ಸಂಘ ರಚಿಸತಕ್ಕದಲ್ಲಎಂದು ನಿರ್ಬಂ ಧಿಸಿದೆ. ಈಗಾಗಲೇ ನಿಯಮ 3(2)(ಸಿ)ನಲ್ಲಿ ಜಾತಿ ಧರ್ಮ ಇತ್ಯಾಗಿ ಒಳಗಿರುವ ಯಾವುದೇ ಸಮೂಹದ ಆಧಾರದ ಮೇಲೆ ರಚಿತವಾಗಿರುವ ಸೇವಾ ಸಂಘಗಳ ಮಾನ್ಯತೆಯನ್ನು ಈ ಕೂಡಲೆ ರದ್ದುಪಡಿಸಬೇಕು. ಮಾನ್ಯತೆ ಪಡೆಯದೇ ಚಾಲ್ತಿಯಲ್ಲಿರುವ ಸಂಘವನ್ನು ನಿರ್ಬಂ ಧಿಸುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಿದೆ.
ಇದು ಸಂವಿಧಾನದ ಅನುಚ್ಛೇದದ 19(1) ರಲ್ಲಿ ಪ್ರದತ್ತವದ ಅಧಿ ಕಾರವನ್ನು ಜನತೆಯಿಂದ ಕಿತ್ತಿಕೊಳ್ಳುವ ಹುನ್ನಾರ ಎಂದು ಹರಿಹಾಯ್ದರು. ರಾಜ್ಯ ಸರ್ಕಾರದ ಈ ತಿರ್ಮಾನವನ್ನು ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿ ಖಂಡಿಸುತ್ತದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೋಷಿತ ಜನಾಂದವರಿಗೆ ಆಗುವ ಸಾಮಾಜಿಕ ಕಿರುಕುಳವನ್ನು ಸೂಕ್ತ ವೇದಿಕೆಗಳಲ್ಲಿ ಪ್ರಸ್ತಾಪಿಸಿನ್ಯಾಯ ಕಂಡುಕೊಳ್ಳುವ ದೃಷ್ಟಿಯಿಂದ ಸಂಘಟನೆಗಳನ್ನು ಹುಟ್ಟು ಹಾಕಿಕೊಳ್ಳಲಾಗಿದೆ. ಸಂಘ-ಸಂಸ್ಥೆಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಜಾತಿ ಸಂಘಟನೆಗಳನ್ನು ನಿರ್ಬಂಧಿ ಸುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಸರ್ಕಾರ ಜ. 18 ರಂದು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ರಾಮ ಮಂದಿರ ನಿಧಿಗೆ 1.20ಲಕ್ಷ ಸಂಗ್ರಹ
ಸಂಘಟನೆಯ ಗೌರವಾಧ್ಯಕ್ಷ ಬಸವಂತ ಗುಣದಾಳ, ಅಡಿವೆಪ್ಪ ಸಾಲಗಲ್, ಅಮರಪ್ಪ ಚಲವಾದಿ, ಬಿ.ಟಿ. ವಾಘಮೋರೆ, ಸಿ.ಕೆ. ಗುಂದವಾನ, ವಿಜಯಕುಮಾರ ಸೂರ್ಯವಂಶಿ, ನಿಜು ಮೇಲಿನಕೇರಿ, ಮಲ್ಲಿಕಾರ್ಜುನ ಮಾದರ, ವೈ.ಎಸ್. ಖಜಾಪುರ, ಆರ್.ಎಸ್. ದೊಡ್ಡಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.