ನಿಜಲಿಂಗಪ್ಪ ಬಡಾವಣೆಯಲ್ಲಿ ಸೈನಿಕರ ಉದ್ಯಾನ
ದೂಡಾದಿಂದ 75 ಲಕ್ಷ ವೆಚ್ಚದಲ್ಲಿ ನಿರ್ಮಾಣ: ರಾಜನಹಳ್ಳಿ ಶಿವಕುಮಾರ್
Team Udayavani, Feb 1, 2021, 5:25 PM IST
ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯಲ್ಲಿ·ಸೈನಿಕರ ಉದ್ಯಾನ ನಿರ್ಮಿಸಲಾಗುವುದು ಎಂದುದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.ಭಾನುವಾರ ಸರ್ಕಾರಿ ನೌಕರರ ಸಮುದಾಯಭವನದಲ್ಲಿ ನಡೆದ ದಾವಣಗೆರೆ ಮಾಜಿ ಸೈನಿಕರಸಂಘದ ವಾರ್ಷಿಕ ಸಭೆ ಹಾಗೂ ಗಣ್ಯರಿಗೆ ಸನ್ಮಾನಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿನೌಕರರ ಸಮುದಾಯ ಭವನದ ಎದುರಿನನಿವೇಶನದಲ್ಲಿ ದೂಡಾದಿಂದ 75 ಲಕ್ಷ ವೆಚ್ಚದಲ್ಲಿಸೈನಿಕರ ಉದ್ಯಾನವನ ನಿರ್ಮಾಣ ಮಾಡಲಾಗುವುದುಎಂದು ತಿಳಿಸಿದರು.
ಸೈನಿಕರ ಉದ್ಯಾನವನ ನಿರ್ಮಾಣದ ಟೆಂಡರ್‌ಪ್ರಕ್ರಿಯೆ ನಡೆಯಬೇಕಿದೆ. ಅಮರ್ ಜವಾನ್…ಸ್ಮಾರಕ ನಿರ್ಮಾಣ ಮಾಡಲಾಗುವುದು. ಸುತ್ತಲೂಕಾಂಪೌಂಡ್ ನಿರ್ಮಿಸಿ, ಉದ್ಯಾನದಲ್ಲಿ ಒಂದು ಶೆಡ್‌ನಿರ್ಮಿಸಿ ಸಭೆ, ಸಮಾರಂಭ ನಡೆಸಲು ಅನುಕೂಲಮಾಡಿಕೊಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರುಹಾಗೂ ಶಾಸಕರ ಜೊತೆಗೂಡಿ ಶೀಘ್ರದಲ್ಲೇಸೈನಿಕರ ಉದ್ಯಾನವನ ನಿರ್ಮಾಣಕ್ಕೆ ಚಾಲನೆ
ನೀಡಲಾಗುವುದು ಎಂದು ತಿಳಿಸಿದರು.
ಇಲ್ಲಿಯವರೆಗೆ ಲಕ್ಷಾಂತರ ಜನರು ದೇಶ ರಕ್ಷಣೆಗೆಪ್ರಾಣ ತ್ಯಾಗ ಮಾಡಿದ್ದಾರೆ. ಮೊದಲು ಸರ್ಜಿಕಲ್‌ದಾಳಿ ನಡೆಸಿದ ಕೀರ್ತಿಗೆ ಪಾತ್ರವಾಗಿರುವ ಶಿವಾಜಿಕಾಲದಲ್ಲಿ ಜಗತ್ತಿಗೆ ಮಾದರಿಯಾಗಿತ್ತು. ಅಂದುದೇಶದ ಬಗ್ಗೆ ಅಪಾರ ಗೌರವವಿತ್ತು. ಆದರೆ,
ಬ್ರಿಟಿಷರ ಶಿಕ್ಷಣ ಪದ್ದತಿಯಿಂದಾಗಿ ದೇಶ ಭಕ್ತಿಯಪಾಠ ದಾಖಲಾಗಿಲ್ಲ. ದೇಶ ಉತ್ತಮವಾಗಬೇಕಾದರೆಒಳ್ಳೆಯ ವಿಷಯವನ್ನು ಮಕ್ಕಳಿಗೆ ಕಲಿಸಬೇಕುಎಂದರು.
ನಗಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್ ಮಾತನಾಡಿ, ಬೆಂಗಳೂರುಮಾದರಿಯಲ್ಲೇ ದಾವಣಗೆರೆ ಮಹಾನಗರ
ಪಾಲಿಕೆಯಿಂದ ಮಾಜಿ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಕ ಮಾಡುವ ಸಂಬಂಧ ಚರ್ಚೆನಡೆಯುತ್ತಿದೆ. ನಗರಪಾಲಿಕೆಯಲ್ಲಿ ಯಾವುದಾದರೂಕೆಲಸಗಳಿದ್ದರೆ ಮಾಜಿ ಸೈನಿಕರಿಗೆ ಆದ್ಯತೆ ನೀಡಲುಸಂಬಂಧಿತರ ಗಮನಕ್ಕೆ ತರಲಾಗಿದೆ ಎಂದುತಿಳಿಸಿದರು.
ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷಮನೋಹರ್ ಮಹೇಂದ್ರಕರ್ ಮಾತನಾಡಿ,ದಾವಣಗೆರೆ ಜಿಲ್ಲೆಯಲ್ಲಿ ಇರುವಂತಹ 2- 3 ಸಾವಿರಮಾಜಿಸೈನಿಕರು, ಕುಟುಂಬದವರ ಅನುಕೂಲಕ್ಕಾಗಿಅಗತ್ಯವಾಗಿರುವ ಕ್ಯಾಂಟೀನ್ ಪ್ರಾರಂಭಿಸುವಂತೆಸಂಸದರು ಹಾಗೂ ಸಂಬಂಧಪಟ್ಟ ಅಧಿ ಕಾರಿಗಳಿಗೆಮನವಿ ನೀಡಿದರೂಪ್ರಯೋಜನವಾಗಿಲ್ಲ ಎಂದುಬೇಸರ ವ್ಯಕ್ತಪಡಿಸಿದರು.
ಮಾಜಿ ಸೈನಿಕ ಬೇತೂರು ಬಸವರಾಜಪ್ಪಮಾತನಾಡಿ, ಸೈನ್ಯ ಸೇರ ಬಯಸುವಂತಹರಿಗೆಅಗತ್ಯ ತರಬೇತಿ ನೀಡಲು ಅಕಾಡೆಮಿ ಸ್ಥಾಪನೆಗೆ
ಸಂಬಂಧಿತರು ಅವಕಾಶ ಮಾಡಿಕೊಡಬೇಕುಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಸತ್ಯಪ್ರಕಾಶ್,ಪ್ರಧಾನ ಕಾರ್ಯದರ್ಶಿ ಶಶಿಕಾಂತ್, ಮಾಜಿ ಅಧ್ಯಕ್ಷರಾಮಚಂದ್ರ, ಖಜಾಂಚಿ ದಾಸಪ್ಪ, ಪ್ರಮೋದ್‌ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.