![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 1, 2021, 7:27 PM IST
ಮಿರಾರೋಡ್: ಮೀರಾರೋಡ್ ಪರಿಸರದ ಪುಣ್ಯಕ್ಷೇತ್ರವಾದ ಪಲಿಮಾರು ಮಠದ ಬಾಲಾಜಿ ಸನ್ನಿಧಿಯ 8ನೇ ವರ್ಧಂತಿ ಉತ್ಸವವನ್ನು ಜ. 28ರಂದು ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು.
ವರ್ಧಂತಿ ಉತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7ರಿಂದ ಪ್ರಾರ್ಥನೆ, ಪಂಚ ವಿಶಂತಿ ಕಲಶ-ತತ್ತÌಹೋಮ, ವಿಷ್ಣು ಸಹಸ್ರನಾಮ ಹೋಮ, ಬೆಳಗ್ಗೆ 9ರಿಂದ ಕಲಶಾಭಿಷೇಕ, ಮಧ್ಯಾಹ್ನ 12ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4.30ರಿಂದ ಸತ್ಯನಾರಾಯಣ ಮಹಾಪೂಜೆ, ಸಂಜೆ 6ರಿಂದ ದೇವರ ಉತ್ಸವ ಬಲಿ, ತೊಟ್ಟಿಲು ಪೂಜೆ, ನೃತ್ಯ ವೈಭವ, ಭಜನ ಕಾರ್ಯಕ್ರಮ, ರಾತ್ರಿ 8ರಿಂದ ರಂಗಪೂಜೆ ಹಾಗೂ ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಇದೇ ಸಂದರ್ಭದಲ್ಲಿ ಮಂದಿರದ ಟ್ರಸ್ಟಿ ಹಾಗೂ ಪ್ರಧಾನ ಅರ್ಚಕರಾದ ವಾಸುದೇವ ಉಪಾಧ್ಯಾಯ ಅವರು ಮಾತನಾಡಿ, ವರ್ಧತಿ ಉತ್ಸವಗಳಿಂದ ದೇವತಾ ಸಾನ್ನಿಧ್ಯ ಒದಗುವುದರ ಜತೆಗೆ ಪರಿಸರದ ಅಭಿವೃದ್ಧಿ, ಭಕ್ತಾದಿಗಳ ಶ್ರೇಯೋಭಿವೃದ್ಧಿಯು ಆಗುತ್ತದೆ. ದೇವರ ಆರಾಧನೆಯಿಂದ ಮಾನಸಿಕ ಸಮತೋಲವನ್ನು ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇವರ ಅನುಗ್ರಹದಿಂದ ಕೊರೊನಾ ಮಹಾಮಾರಿಯಿಂದ ಲೋಕವು ಮುಕ್ತಗೊಳ್ಳಲಿ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪೂಜಾ ಕೈಂಕರ್ಯಗಳನ್ನು ಗೋಪಾಲ್ ಭಟ್, ದೇವಿಪ್ರಸಾದ್ ಭಟ್, ಸಂತೋಷ್ ಭಟ್, ಕೃಷ್ಣಮೂರ್ತಿ ಉಪಾಧ್ಯಾಯ, ಸಾತಿಂಜ ಜನಾರ್ದನ ಭಟ್, ಸುರೇಶ್ ಭಟ್, ಯತಿರಾಜ್ ಉಪಾಧ್ಯಾಯ, ಶ್ರೀಶ ಉಪಾಧ್ಯಾಯ, ಕಾರ್ತಿಕ್ ಭಟ್ ಮೊದಲಾದವರು ನೆರವೇರಿಸಿದರು. ಬಾಲಾಜಿ ಭಜನ ಮಂಡಳಿಯ ಸದಸ್ಯ, ಸದಸ್ಯೆಯರು ಮತ್ತು ಕರಮಚಂದ ಗೌಡ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ:ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿ ಬಜೆಟ್ – ಜನಪರ ಬಜೆಟ್ ಸ್ವಾಗತಿಸಿದ ಜಲಸಂಪನ್ಮೂಲ ಸಚಿವ
ಕ್ಷೇತ್ರದ ಇತಿಹಾಸ
2013ರಲ್ಲಿ ಅಷ್ಠಮಠಗಳಲ್ಲೊಂದಾದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದಂವರು ಸರ್ವರಿಗೂ ಶ್ರೀನಿವಾಸ ದೇವರ ದರ್ಶನದ ಭಾಗ್ಯ ಲಭಿಸಲಿ ಎಂಬ ಅಪೇಕ್ಷೆಯಿಂದ ಸ್ಥಾಪಿತಗೊಂಡ ಪಲಿಮಾರು ಮಠದ ಬಾಲಾಜಿ ಸನ್ನಿಧಿಯು ಪ್ರಸ್ತುತ ತುಳು, ಕನ್ನಡಿಗರು ಮಾತ್ರವಲ್ಲದೆ ಅನ್ಯ ಭಾಷಿಗರಿಗೂ ಭಕ್ತಿಯ ತಾಣವಾಗಿ ಕಂಗೊಳಿ ಸುತ್ತಿದೆ. ಸ್ವಾಮೀಜಿಯವರ ಅಪೇಕ್ಷೆ
ಯಂತೆ ಶ್ರೀಕ್ಷೇತ್ರದಲ್ಲಿ ಸುಮಾರು 5 ಅಡಿ ಎತ್ತರದ ಶ್ರೀನಿವಾಸ ದೇವರ ಮೂರ್ತಿಯನ್ನು ತಿರುಪತಿಯಿಂದಲೇ ತಂದು ಪ್ರತಿಷ್ಠಾಪಿಸಲಾಗಿದೆ. ಪುರಾತನ ಹಿನ್ನೆಲೆಯುಳ್ಳ ಜಗದೊಡೆಯ ರುದ್ರೇಶ ದೇವರು, ನಾಗದೇವರು, ಪದ್ಮಾವತಿ ಸನ್ನಿದಾನ, ಅಂಜನೇಯ ಗುಡಿ, ನವಗ್ರಹ ಪೀಠವು ಇಲ್ಲಿ ರಾರಾಜಿಸುತ್ತಿದೆ.
ಚಿತ್ರ-ವರದಿ: ವೈ. ಟಿ. ಶೆಟ್ಟಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.