ಭಾಗ್ಯದ ಬೆಳೆಗಾರ : ಎಪಿಎಂಸಿಗೆ ಬಲ, ಮತ್ತಷ್ಟು ಕೃಷಿ ಸಾಲ
Team Udayavani, Feb 2, 2021, 6:20 AM IST
ನವದೆಹಲಿ: ರೈತರ ಪ್ರತಿಭಟನೆ, 3 ಕೃಷಿ ಕಾಯ್ದೆಗಳ ಮೇಲಿರುವ ಆತಂಕ ನಿವಾರಣೆಗೂ ಕೇಂದ್ರ ಬಜೆಟ್ ಭರ್ಜರಿ ಲಸಿಕೆ ನೀಡಿದೆ. ಕನಿಷ್ಠ ಬೆಂಬಲ ಬೆಲೆ ನೀತಿ (ಎಂಎಸ್‌ಪಿ), ಮಂಡಿ ವ್ಯವಸ್ಥೆ ಮುಂದುವರಿಕೆಯಲ್ಲದೆ, ಅವುಗಳಿಗೆ ಇನ್ನಷ್ಟು ಬಲ ತುಂಬಲು ಸರ್ಕಾರ ಮುಂದಾಗಿದೆ.
“ಸರ್ಕಾರ ರೈತ ಕಲ್ಯಾಣಕ್ಕೆ ಬದ್ಧವಾಗಿದೆ. ಬೇರೆಲ್ಲ ಉತ್ಪನ್ನಗಳಿಗಿಂತ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯನ್ನು 1.5 ಪಟ್ಟು ಹೆಚ್ಚಿಸಲಾಗಿದೆ’ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಆದಾಯ ದುಪ್ಪಟ್ಟು: ಭತ್ತಕ್ಕೆ ಈ ವರ್ಷ ದುಪ್ಪಟ್ಟು ಎಂಎಸ್‌ಪಿ ಹೆಚ್ಚಿಸಲಾಗಿದ್ದು, ಒಟ್ಟು 1,72,752 ಕೋಟಿ ರೂ. ಮೀಸಲಿಡಲಾಗಿದೆ. 1.5 ಕೋಟಿ ರೈತರಿಗೆ ಇದರಿಂದ ಪ್ರಯೋಜನ ದಕ್ಕಲಿದೆ. 2013-14ರಲ್ಲಿ ದೇಶದ ಭತ್ತ ಬೆಳೆಗಾರರಿಗೆ 63,928 ಕೋಟಿ ರೂ. ಕನಿಷ್ಠ ಬೆಂಬಲ ಬೆಲೆ ನೀಡಲಾಗಿತ್ತು. 2020-21ರಲ್ಲಿ ಒಟ್ಟು 1,41,930 ಕೋಟಿ ರೂ. ಎಂಎಸ್‌ಪಿ ನೀಡಲಾಗಿತ್ತು. ಗೋಧಿ ಬೆಳೆಗೆ 2013-14ರಲ್ಲಿ 33,874 ಕೋಟಿ ರೂ. ನೀಡಲಾಗಿತ್ತು. 2020-21ರಲ್ಲಿ 75,060 ಕೋಟಿ ರೂ. ಎಂಎಸ್‌ಪಿಯನ್ನು ರೈತರು ಪಡೆದಿದ್ದಾರೆ. ಹತ್ತಿ ಬೆಳೆಗೆ 2013ಕ್ಕಿಂತ (236 ಕೋ.ರೂ.) ಈ ವರ್ಷ 40 ಪಟ್ಟು ಹೆಚ್ಚು (ಒಟ್ಟು 10,532 ಕೋಟಿ ರೂ.) ಎಂಎಸ್‌ಪಿ ನೀಡಲಾಗಿದೆ.
“ಬೆಳೆ ಖರೀದಿ ಪ್ರಕ್ರಿಯೆ ಸರ್ಕಾರ ನಿಲ್ಲಿಸಿಲ್ಲ. ಕನಿಷ್ಠ ಬೆಂಬಲ ಬೆಲೆ ಪಡೆದ ರೈತರ ಸಂಖ್ಯೆ 2019- 20ರಲ್ಲಿ 1.24 ಕೋಟಿ ಇತ್ತು. 2020-21ರಲ್ಲಿ ಈ ಸಂಖ್ಯೆ 1.54 ಕೋಟಿಗೆ ಹೆಚ್ಚಳವಾಗಿದೆ. 2013ಕ್ಕೆ ಹೋಲಿಸಿದರೆ ಗೋಧಿ ಬೆಳೆಗಾರರು ಶೇ.121, ಭತ್ತದ ರೈತರು ಶೇ.170.23ರಷ್ಟು ಎಂಎಸ್‌ಪಿ ಪಡೆದಿದ್ದಾರೆ’ ಎಂದು ಸಚಿವೆ ಹೇಳಿದ್ದಾರೆ.
ನೀರಾವರಿಗೂ ಒತ್ತು
ಸೂಕ್ಷ್ಮ ನೀರಾವರಿ ನಿಧಿಗೆ ನಬಾರ್ಡ್ ಯೋಜನೆಯಡಿ ಈಗಾಗಲೇ 5 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ಮೊತ್ತವನ್ನು 10 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ. ಅಲ್ಲದೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಟ್ಟಿದ್ದ ನಿಧಿಯನ್ನು 30 ಸಾವಿರ ಕೋಟಿ ರೂ.ನಿಂದ 40 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ.
22 ಉತ್ಪನ್ನಗಳಿಗೆ “ಗ್ರೀನ್ ಸ್ಕೀಮ್’ ಶ್ರೀರಕ್ಷೆ
ಕೃಷಿ ಉತ್ಪನ್ನಗಳ ಸಂರಕ್ಷಣೆ ಮತ್ತು ರಫ್ತುಗೆ ಆದ್ಯತೆ ನೀಡುವ ಸಲುವಾಗಿ “ಆಪರೇಷನ್ ಗ್ರೀನ್ ಸ್ಕೀಮ್’ ಅಡಿಯಲ್ಲಿ 22 ಉತ್ಪನ್ನಗಳನ್ನು ಸೇರಿಸಲಾಗುತ್ತಿದೆ. ಈ ಮೊದಲು ಟೊಮೆಟೊ, ಈರುಳ್ಳಿ, ಆಲೂಗಡ್ಡೆ (ಟಾಪ್) ಮಾತ್ರವೇ ಯೋಜನೆ ಸೌಲಭ್ಯವಿತ್ತು. ಲೌಕ್‌ಡೌನ್ ಅವಧಿ ಯಲ್ಲಿ ಬೆಳೆ ಸಂರಕ್ಷಣೆ, ಮಾರಾಟಕ್ಕೆ ಸಂಕಷ್ಟ ಒದಗಿದ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿಯಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಅದನ್ನೇ ಈಗ ವಿಸ್ತರಿಸಲಾಗಿದೆ.
16.5 ಲಕ್ಷ ಕೋಟಿ ರೂ. ಕೃಷಿ ಸಾಲ ಟಾರ್ಗೆಟ್!
ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲಕ್ಕಾಗಿ 16.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಕೃಷಿ ಸಂಬಂಧಿತ ಸಾಲ ಯೋಜನೆಗಳ ಮೂಲಕ ಸರ್ಕಾರ ರೈತರನ್ನು ಸೆಳೆಯಲು ಈ ಮೂಲಕ ಯತ್ನಿಸಲಾಗಿದೆ. ಕಳೆದವರ್ಷ 15 ಲಕ್ಷ ಕೋಟಿ ರೂ. ಇದ್ದ ಟಾರ್ಗೆಟ್ ಅನ್ನು ಈ ಬಾರಿ ಶೇ.10ರಷ್ಟು ಹೆಚ್ಚಿಸಲಾಗಿದೆ.
ದೇಶಾದ್ಯಂತ “ಸ್ವಾಮಿತ್ವ’ ಕಾರ್ಡ್ ಜಾರಿ
ಗ್ರಾಮೀಣ ಪ್ರದೇಶದ ಜನರಿಗೆ ವ್ಯಾಜ್ಯರಹಿತ ಆಸ್ತಿ ಹಕ್ಕಿಗೆ ಅನುಕೂಲ ಕಲ್ಪಿಸುವ “ಸ್ವಾಮಿತ್ವ ಕಾರ್ಡ್’ ದೇಶದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. 2021ರ ಆರಂಭದಲ್ಲಿ ಪ್ರಧಾನಿ ಮೋದಿ “ಸ್ವಾಮಿತ್ವ’ಕ್ಕೆ ಚಾಲನೆ ನೀಡಿದ್ದರಾದರೂ, ಪ್ರಾಯೋಗಿಕ ಹಂತಕ್ಕಷ್ಟೇ ಸೀಮಿತವಾಗಿತ್ತು. ಇದುವರೆಗೂ ದೇಶದ 1,241 ಹಳ್ಳಿಗಳ 1.80 ಲಕ್ಷ ಭೂಮಾಲೀಕರಿಗೆ ಸ್ವಾಮಿತ್ವ ಕಾರ್ಡ್ ಪೂರೈಸಲಾಗಿದೆ.
“ಫ್ರೀಲಾನ್ಸ್’ ಮಂದಿಗೆ ಭದ್ರತೆ
ಕೇಂದ್ರಸರ್ಕಾರ ಕಳೆದ 20 ವರ್ಷಗಳ ಹಿಂದೆ ಆರಂಭವಾದ ಪ್ರಕ್ರಿಯೆಯೊಂದನ್ನು ಮುಗಿಸುತ್ತಿರು ವುದಾಗಿ ಹೇಳಿಕೊಂಡಿದೆ. ಇಲ್ಲಿ 4 ಕಾರ್ಮಿಕನೀತಿಗಳನ್ನು ಜಾರಿ ಮಾಡ ಲಾಗುತ್ತದೆ. ಇಡೀ ಜಗತ್ತಿ ನಲ್ಲಿಯೇ ಮೊದಲಬಾರಿಗೆ ತಾತ್ಕಾಲಿಕ ಅಥವಾ ಫ್ರೀಲಾನ್ಸ್ ಉದ್ಯೋಗಿಗಳು ಹಾಗೆಯೇ ಆನ್‌ಲೈನ್ ಆ್ಯಪ್‌ಗ್ಳು, ವೆಬ್‌ಸೈಟ್‌ಗಳನ್ನು ಬಳಸಿಕೊಂಡು ಸೇವೆ ನೀಡುವ ಉದ್ಯೋಗಿಗಳನ್ನು ಸಾಮಾಜಿಕ ಸುರಕ್ಷಾ ಲಾಭಗಳ ವ್ಯಾಪ್ತಿಗೆ ತರಲು ನಿರ್ಧ ರಿಸಲಾಗಿದೆ. ಅವರನ್ನೆಲ್ಲ ಉದ್ಯೋಗಿಗಳ ವಿಮಾ ನಿಗಮ ವ್ಯಾಪ್ತಿಗೆ ತರಲಾಗುತ್ತದೆ. ಮಹತ್ವದ ಸಂಗತಿಯೆಂದರೆ ಮಹಿಳೆ ಯರು ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ನೀಡ ಲಾ ಗಿದೆ. ಹಾಗೆಯೇ ಎಲ್ಲ ರೀತಿಯ ಕೆಲಸ ಮಾಡಲೂ ಒಪ್ಪಿಗೆ ನೀಡಲಾಗಿದೆ. ಆದರೆ ಇದಕ್ಕೆ ಸೂಕ್ತ ಭದ್ರತಾವ್ಯವಸ್ಥೆಯೂ ಇರಬೇಕು ಎಂದು ತಿಳಿಸಲಾಗಿದೆ. ಇದೇ ವೇಳೆ ಉದ್ಯೋಗ ನೀಡುವ ಉದ್ಯಮಿಗಳ ಮೇಲಿರುವ ಒತ್ತಡ ತಗ್ಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.