ಈ ಬಜೆಟ್‌ಗೆ ವಾಸ್ತವದ ಅರಿವೂ ಇದೆ, ವಿಕಾಸದ ವಿಶ್ವಾಸವೂ ಇದೆ : ಪ್ರಧಾನಿ ನರೇಂದ್ರ ಮೋದಿ
Team Udayavani, Feb 2, 2021, 7:05 AM IST
ನಮಸ್ಕಾರ…
ಅಸಾಮಾನ್ಯ ಪರಿಸ್ಥಿತಿಗಳ ನಡುವೆಯೇ 2021ರ ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ವಾಸ್ತವದ ಅರಿವೂ ಇದೆ, ವಿಕಾಸದ ವಿಶ್ವಾಸವೂ ಇದೆ. ಒಂದೆಡೆ ಕೊರೊನಾ ಇಡೀ ವಿಶ್ವವನ್ನೇ, ಮಾನವಕುಲವನ್ನೇ ಅಲುಗಾಡಿಸಿಬಿಟ್ಟಿದೆ. ಇದರ ನಡುವೆಯೇ ಮಂಡಿಸಲಾಗಿರುವ ಬಜೆಟ್ ಭಾರತದ ಆತ್ಮವಿಶ್ವಾಸವನ್ನು ಸಾದ ರ ಪಡಿಸಲಿದೆ. ಜತೆಯಲ್ಲೇ ಪ್ರಪಂಚದಲ್ಲಿ ಒಂದು ಹೊಸ ಆತ್ಮವಿಶ್ವಾಸವನ್ನು ತುಂಬಲಿದೆ. ಇವತ್ತಿನ ಆಯವ್ಯಯದಲ್ಲಿ ಆತ್ಮನಿರ್ಭರತೆಯ ದೃಷ್ಟಿಯೂ ಇದೆ, ಮತ್ತಿದು ಎಲ್ಲಾ ನಾಗರಿಕರ ಶ್ರೇಯೋಭಿವೃದ್ಧಿಯ ಹಿತಚಿಂತನೆಯನ್ನೂ ಒಳಗೊಂಡಿದೆ.
ಬೆಳವಣಿಗೆಗಾಗಿ ಹೊಸ ದ್ವಾರಗಳನ್ನು ತೆರೆಯುವುದು, ನವ ಸಂಭಾವ್ಯತೆಗಳನ್ನು ವಿಸ್ತರಿಸುವುದು, ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಮಾನವಸಂಪ ನ್ಮೂಲಕ್ಕೆ ಹೊಸ ಆಯಾಮ ಕೊಡುವುದು, ಮೂಲಸೌಕರ್ಯ ನಿರ್ಮಾಣಕ್ಕಾಗಿ ಹೊಸ ಹೊಸ ಕ್ಷೇತ್ರಗಳನ್ನು ವಿಕಾಸಗೊಳಿ ಸುವುದು, ಆಧುನಿಕತೆಯೆಡೆಗೆ ಮುನ್ನಡೆಯುವುದು, ನವ ಸುಧಾರಣೆಗಳನ್ನು ತರುವುದು…ಇವೇ ಸಿದ್ಧಾಂತಗಳ ಆಧಾರದಲ್ಲೇ ನಾವು ಈ ಬಜೆಟ್ ತಂದಿದ್ದೇವೆ. ಗೆಳೆಯರೇ ಜಟಿಲ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಿ ಸಾಮಾನ್ಯ ಜನರ ಜೀವನದಲ್ಲಿ ಈಸ್ ಆಫ್ ಲಿವಿಂಗ್(ಜೀವನ ಸುಲಭಗೊಳ್ಳುವುದು) ಹೆಚ್ಚಿಸಲು ಗಮನ ನೀಡಲಾಗಿದೆ. ಇಂಡಿವಿಷುವಲ್ಸ್ (ವ್ಯಕ್ತಿ ಗಳು), ಇನ್ವೆಸ್ಟರ್ಸ್(ಹೂಡಿಕೆದಾರರು),
ಇಂಡಸ್ಟ್ರಿ(ಉದ್ಯಮ) ಮತ್ತು ಇನ್‌ಫ್ರಾಸ್ಟ್ರಕ್ಚರ್(ಮೂಲಸೌಕರ್ಯ) ಕ್ಷೇತ್ರದಲ್ಲಿ ಬಹಳ ಸಕಾರಾತ್ಮಕ ಬದಲಾವಣೆ ತರಲಿದೆ.
ನಾನು ಇದಕ್ಕಾಗಿ ದೇಶದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ, ಅವರ ಸಹಸಚಿವರಾದ ಅನುರಾಗ್ ಅವರಿಗೆ ಮತ್ತು ವಿತ್ತ ಸಚಿವಾಲಯದ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ನೇಹಿತರೇ, ಒಂದು ಬಜೆಟ್ ಮಂಡನೆಯಾದ ಕೆಲವೇ ಗಂಟೆಗಳಲ್ಲಿ ಅದಕ್ಕೆ ಇಷ್ಟೊಂದು ಪ್ರಮಾಣದ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆಯು ವುದಿದೆಯಲ್ಲ, ಅದು ಅಪರೂಪದಲ್ಲಿ ಅಪರೂಪವಾದದ್ದು. ಕೊರೊನಾದ ಈ ವೇಳೆಯಲ್ಲಿ ಅನೇಕ ಪರಿಣತರು, “”ಸರ್ಕಾರ ಸಾರ್ವಜನಿಕರ ಮೇಲಿನ ಹೊರೆ ಹೆಚ್ಚಿಸಲಿದೆ” ಎಂದೇ ಭಾವಿಸಿದ್ದರು. ಆದರೆ ಸರ್ಕಾರ ಹಣಕಾಸು ಸುಸ್ಥಿರತೆಯೆಡೆಗಿನ ತನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನ ಗಾತ್ರ ಹೆಚ್ಚಿಸಲು ಒತ್ತು ನೀಡಿತು. ಬಜೆಟ್ ಪಾರದರ್ಶಿ ಯಾಗಿರಬೇಕು ಎಂದು ನಮ್ಮ ಆಡಳಿತ ಬಹಳ ಶ್ರಮಪಟ್ಟಿತು. ಹೀಗಾಗೇ, ಇಂದು ಅನೇಕ ತಜ್ಞರು ಬಜೆಟ್‌ನ ಪಾರದರ್ಶಕತೆಯನ್ನು ಶ್ಲಾಘಿಸುತ್ತಿರುವುದು ನನಗೆ ಖುಷಿ ತಂದಿದೆ.
ಕೊರೊನಾ ಕಾಲದಲ್ಲಿ ಮಾಡಲಾದ ಸುಧಾರಣೆಗಳಿರಲಿ ಅಥವಾ ಆತ್ಮನಿರ್ಭರ ಭಾರತದ ಸಂಕಲ್ಪವಾಗಿರಲಿ ಸಾಂಕ್ರಾಮಿಕದ ಈ ಹೋರಾಟದಲ್ಲಿ ಭಾರತ reactive ಆಗಿರುವ ಬದಲು ಮೊದಲಿಂದಲೂ proactive ಆಗಿದೆ. ದೇಶದ ಈ proactive ಅನ್ನು ಹೆಚ್ಚಿಸುವ ನಿಟ್ಟಿನಲ್ಲೂ ಈ ಬಜೆಟ್ ರೂಪುಗೊಂಡಿದೆ.
ಜಾನ್ ಭೀ ಜಹಾಂ ಭಿ(ಜೀವವೂ ಮುಖ್ಯ ಜಗತ್ತೂ ಮುಖ್ಯ) ಎಂದ ಧ್ಯೇಯೋದ್ದೇಶದಡಿಯಲ್ಲಿ ಯಾವ ಕ್ಷೇತ್ರಗಳಲ್ಲಿ ಸಮೃದ್ಧಿ ಮತ್ತು ಸ್ವಾಸ್ಥ್ಯ ವೇಗವಾಗಿ ಬೆಳೆಯುತ್ತದೋ ಅಂಥ ಕ್ಷೇತ್ರಗಳ ಅಭಿವೃದ್ಧಿಯ ಮೇಲೆ ಆಯವ್ಯಯ ಗಮನ ಕೇಂದ್ರೀಕರಿಸಿದೆ. ಉದಾಹರಣೆಗೆ, ಎಂಎಸ್‌ಎಂಇ ಮತ್ತು ಮೂಲಸೌಕರ್ಯಕ್ಕೆ ವಿಶೇಷವಾಗಿ ಒತ್ತು ನೀಡಲಾಗಿದೆ. ಅದಷ್ಟೇ ಅಲ್ಲದೇ, ಈ ಬಜೆಟ್ ಆರೋಗ್ಯ ಕ್ಷೇತ್ರದ ಮೇಲೆ ಗಮನಹರಿಸಿರುವ ರೀತಿಯೂ ಅಭೂತಪೂರ್ವವಾದದ್ದು.
ನನಗೆ ಖುಷಿ ಆಗುತ್ತಿರುವುದೇನೆಂದರೆ, ಮುಖ್ಯವಾಗಿ ನಮ್ಮ ದಕ್ಷಿಣದ ರಾಜ್ಯಗಳು, ನಮ್ಮ ಈಶಾನ್ಯದ ರಾಜ್ಯಗಳು ಹಾಗೂ ಉತ್ತರದ ಲೇಹ್-ಲಡಾಖ್‌ನಂಥ ಕ್ಷೇತ್ರಗಳ ವಿಕಾಸಕ್ಕೆ ವಿಶೇಷ ಗಮನ ನೀಡಲಾಗಿರುವುದು. ಇನ್ನು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಂಥ ಭಾರತದ ಕರಾವಳಿ ರಾಜ್ಯ ಗಳನ್ನು ಉದ್ಯಮ ಶಕ್ತಿಕೇಂದ್ರಗಳಾಗಿಸುವ ನಿಟ್ಟಿನಲ್ಲೂ ಬೃಹತ್ ಹೆಜ್ಜೆಯಿಡಲಾಗಿದೆ. ಈಶಾನ್ಯದ ರಾಜ್ಯಗಳು, ಉದಾಹರಣೆಗೆ, ಅಸ್ಸಾಂನಂಥ ರಾಜ್ಯಗಳ ಅನ್ವೇಷಿಸದ ಸಾಮರ್ಥ್ಯವನ್ನು ಗುರುತಿಸುವಲ್ಲಿ ಈ ಬಜೆಟ್ ಸಹಕರಿಸಲಿದೆ.
ಇನ್ನು ಸಂಶೋಧನೆ ಮತ್ತು ನಾವೀನ್ಯತಾ ವಲಯಕ್ಕೆ ಬಲ ನೀಡಲಾಗಿರುವುದರಿಂದ ನಮ್ಮ ಯುವಕರಿಗೆ ಶಕ್ತಿ ಸಿಗಲಿದೆ ಹಾಗೂ ಭಾರತವು ಉಜ್ವಲ ಭವಿಷ್ಯದತ್ತ ಬಹಳ ದೃಢವಾದ ಹೆಜ್ಜೆಯನ್ನಿಡುವಂತಾಗುತ್ತದೆ. ಗೆಳೆಯರೇ, ಸಾಮಾನ್ಯ ಜನರು, ಮಹಿಳೆಯರ ಜೀವನ ಸುಲಭಗೊಳಿಸಲು ಸ್ವಾಸ್ಥ್ಯ, ಸ್ವತ್ಛತೆ, ಪೋಷಣೆ, ಶುದ್ಧಜಲ ಹಾಗೂ ಸಮಾನ ಅವಕಾಶಗಳ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆಬಲ ನೀಡಲು, ರೈತರ ಆದಾಯ ಹೆಚ್ಚಿಸಲು ಈ ಬಜೆಟ್‌ನಲ್ಲಿ ಬಹಳ ಅವಕಾಶ ನೀಡ ಲಾಗಿದೆ. ಮುಖ್ಯವಾಗಿ ದೇಶದ ಮಾರುಕಟ್ಟೆಗಳನ್ನು ಅಂದರೆ ಎಪಿಎಂಸಿಯನ್ನು ಮತ್ತಷ್ಟು ಸಶಕ್ತಗೊಳಿಸಲು ಅಗ್ರಿಕಲ್ಚರ್ ಇನಾ#†ಸ್ಟ್ರಕ್ಚರ್ ಫಂಡ್‌ನಿಂದ ಸಹಾಯ ಘೋಷಿಸಲಾಗಿದೆ.
ಈ ಎಲ್ಲಾ ನಿರ್ಣಯಗಳೂ ಬಜೆಟ್‌ನ ಹೃದಯದಲ್ಲಿ ನಮ್ಮ ಗ್ರಾಮಗಳಿವೆ, ನಮ್ಮ ರೈತರಿದ್ದಾರೆ ಎಂದು ತೋರಿಸುತ್ತದೆ. ಸೂಕ್ಷ್ಮ, ಸಣ್ಣ, ಮಧ್ಯಮ ಸ್ತರದ ಕೈಗಾರಿಕೆಗಳಿಗೆ ವೇಗ ನೀಡಲು, ಎಂಎಸ್‌ಎಂಇ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಈ ಬಾರಿ ಈ ಕ್ಷೇತ್ರದ ಬಜೆಟ್ ಅನ್ನು ಕಳೆದಬಾರಿಗಿಂತ ಎರಡುಪಟ್ಟು ಹೆಚ್ಚಿಸಿದ್ದೇವೆ. ಈ ದಶಕದ ಆರಂಭಕ್ಕೆ ಒಂದು ಬಲಿಷ್ಠ ಬುನಾದಿ ಹಾಕುವಂಥ ಬಜೆಟ್ ಇದು. ಆತ್ಮನಿರ್ಭರ ಭಾರತದ ದಾರಿಯಲ್ಲಿ ದೇಶವನ್ನು ಕೊಂಡೊಯ್ಯಲಿರುವ ಈ ಮಹತ್ವಪೂರ್ಣ ಬಜೆಟ್‌ಗಾಗಿ ನಾನು ಎಲ್ಲಾ ದೇಶವಾಸಿಗಳಿಗೂ ಅಭಿನಂದಿಸುತ್ತೇನೆ. ಧನ್ಯವಾದ.
– ನರೇಂದ್ರ ಮೋದಿ , ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.