![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 2, 2021, 10:31 AM IST
ವಿಟ್ಲ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಗ್ಯಾಸ್ ಟ್ಯಾಂಕರ್ ರಸ್ತೆಗೆ ಉರುಳಿದ ಪರಿಣಾಮ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಮಾಣಿಯಿಂದ ಕೊಡಾಜೆ ಮೂಲಕ ಮಂಗಳಪದವು ಎಂಬಲ್ಲಿಗೆ ವಾಹನಗಳು ಬಂದು ಕಲ್ಲಡ್ಕ ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯಲ್ಲಿ ಕಲ್ಲಡ್ಕ ತಲುಪಿ, ಮಂಗಳೂರು ಕಡೆಗೆ ಸಂಚರಿಸುತ್ತಿದ್ದವು. ಮಾಣಿಯಿಂದ ಕಬಕ, ವಿಟ್ಲ, ಕಲ್ಲಡ್ಕ ಮಂಗಳೂರು, ಕೊಡಾಜೆ ವೀರಕಂಭ, ಕಲ್ಲಡ್ಕ ಮಂಗಳೂರು ಸಂಚಾರವೂ ಆಗುತ್ತಿತ್ತು. ಈ ಎಲ್ಲ ಒಳರಸ್ತೆಗಳು ಅಗಲಕಿರಿದಾಗಿದ್ದು ಆಗಾಗ ಬ್ಲಾಕ್ ಆಗುತ್ತಿವೆ.
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಅನಿಲ ಕೊಂಡೊಯ್ಯುತ್ತಿದ್ದ ಎಲ್ಲಾ ಟ್ಯಾಂಕರ್ ಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಒಯ್ಯುವ ಲಾರಿಗಳನ್ನು ಕಲ್ಲಡ್ಕ, ಮೆಲ್ಕಾರ್ ಮತ್ತು ಬಿಸಿರೋಡ್ ಮೊದಲಾದೆಡೆ ನಿಲ್ಲಿಸಲಾಗಿದೆ.
ಇದನ್ನೂ ಓದಿ: ಸೂರಿಕುಮೇರು: ಗ್ಯಾಸ್ ಟ್ಯಾಂಕರ್ ಪಲ್ಟಿ; ಸುತ್ತಮುತ್ತಲಿನಲ್ಲಿ ಬೆಂಕಿ ಬಳಸದಂತೆ ಮನವಿ
ಪರಿಣಾಮವಾಗಿ ಕಲ್ಲಡ್ಕದಿಂದ ಮಂಗಳೂರು ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಲಾರಿಗಳೂ ಆಗಮಿಸದೇ ಇರುವುದರಿಂದ ಎಂದಿನಂತೆ ವಾಹನ ಜಂಜಾಟವಿರಲಿಲ್ಲ. ಬಸ್ಸು, ಖಾಸಗಿ ವಾಹನ ಮತ್ತು ದ್ವಿಚಕ್ರ, ರಿಕ್ಷಾ, ಕಾರುಗಳೇ ಸಂಚರಿಸುತ್ತಿದ್ದವು.
ಪುತ್ತೂರಿನಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಪುತ್ತೂರು, ಸುಳ್ಯ, ಉಪ್ಪಿನಂಗಡಿ ಕಡೆಗೆ ಖಾಸಗಿ, ಕೆಎಸ್ ಆರ್ ಟಿಸಿ ಬಸ್ ಸಂಚಾರವೂ ಇಲ್ಲದೇ ಇದ್ದುದರಿಂದ ನಿತ್ಯ ಸಂಚಾರಿಗಳು ತೊಂದರೆಗೊಳಗಾದರು. ವಿದ್ಯಾರ್ಥಿಗಳು, ಉದ್ಯೋಗಿಗಳು ರಸ್ತೆಯ ಬದಿಯಲ್ಲಿ ನಿಂತು ಪರದಾಡುತ್ತಿದ್ದರು.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹುಬ್ಬಳ್ಳಿ,ಕೋಲಾರ ಸೇರಿದಂತೆ ರಾಜ್ಯದ ಹಲವೆಡೆ ACB ದಾಳಿ: ದಾಖಲೆಗಳ ಪರಿಶೀಲನೆ
ಇದನ್ನೂ ಓದಿ: ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.