ಮಡಿವಾಳ ಸಮುದಾಯದ ಕೊಡುಗೆ ಅಪಾರ
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಮುದಾಯದವರು ಮುಂದಾಗಲಿ: ಶಾಂತಕುಮಾರಿ
Team Udayavani, Feb 2, 2021, 1:14 PM IST
ದಾವಣಗೆರೆ: ಜಗತ್ತು ಎಷ್ಟೊಂದು·ಮುಂದುವರೆದರೂ ಸಹ ಸಮಾಜದಲ್ಲಿ ಈಗಲೂಹಲವಾರು ಕಟ್ಟುಪಾಡುಗಳು ನಡೆದುಕೊಂಡು
ಬಂದಿವೆ. ಅಂತಹ ಎಲ್ಲ ಕಟ್ಟುಪಾಡು, ಸೂತಕಗಳನ್ನುಮಡಿ ಮಾಡುವ ಪುಣ್ಯದ ಕೆಲಸ ಮಡಿವಾಳಸಮುದಾಯಕ್ಕೆ ದೊರಕಿದೆ ಎಂದು ಜಿಲ್ಲಾಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಮಡಿವಾಳ ಮಾಚಿದೇವ ಸಂಘದ ಆಶ್ರಯದಲ್ಲಿಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು,ಎಲ್ಲ ಸಮಾಜಗಳ ಸೂತಕಗಳನ್ನು ತೊಳೆಯುವಜೊತೆಗೆ ಸಮಾಜದಲ್ಲಿನ ಮಡಿ ಮಾಡುವುದುಮಾತ್ರವಲ್ಲದೆ ಕೊಳಕು ಮನಸ್ಸುಗಳನ್ನು ತೊಳೆದುಮಾಲಿನ್ಯ ರಹಿತವಾದ ಸಮಾಜ ನಿರ್ಮಿಸುವಲ್ಲಿಮಡಿವಾಳ ಸಮಾಜದ ಕೊಡುಗೆ ಇದೆ ಎಂದುಸ್ಮರಿಸಿದರು. ಹೆಸರಿನಲ್ಲಿ ಮಡಿ ಇರುವ ಮಡಿವಾಳಸಮಾಜ ಶೈಕ್ಷಣಿಕವಾಗಿ ಮುಂದೆ ಬಂದಲ್ಲಿಸಮುದಾಯ ಮುಂದೆ ಬರಲು ಸಾಧ್ಯ. ಪೋಷಕರುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕತಾವು ಸ್ವಾವಲಂಬನೆ ಸಾಧಿ ಸುವ ಜೊತೆಗೆ ಸಮಾಜಕ್ಕೆಮಕ್ಕಳನ್ನು ಉತ್ತಮ ಕೊಡುಗೆಯನ್ನಾಗಿ ನೀಡಬೇಕುಎಂದು ಮನವಿ ಮಾಡಿದರು.
ಪ್ರಭಾರಿ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾಮಾತನಾಡಿ, ಬಸವಣ್ಣನವರ ಆದರ್ಶ, ತತ್ವಗಳನ್ನುಮೈಗೂಡಿಸಿಕೊಂಡು ವಚನ ಮತ್ತು ಸಾಹಿತ್ಯವನ್ನುಓದುವ ಮೂಲಕ ಪರಿಪೂರ್ಣ ವ್ಯಕ್ತಿಗಳಾಗಬೇಕು.ಸಮಾಜದಲ್ಲಿನ ಅಪನಂಬಿಕೆಗಳನ್ನುಹೋಗಲಾಡಿಸಬೇಕಿದೆ. ಅದಕ್ಕಾಗಿ ಶಿಕ್ಷಣ ಅಗತ್ಯ.ಮಾಚಿದೇವರ ತತ್ವಗಳ ಮೇಲೆ ನಡೆಯಬೇಕೆಂದರೆಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ಮಡಿವಾಳ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷಆವರಗೆರೆ ಎಚ್.ಜಿ. ಉಮೇಶ್ ಮಾತನಾಡಿ,ಕಳಂಕರಹಿತ ಶರಣರ ಬಟ್ಟೆಗಳನ್ನು ಮಡಿಮಾಡುವ ಮೂಲಕ 12ನೇ ಶತಮಾನದಲ್ಲಿ ಕಲ್ಮಶಮನಸ್ಸುಗಳನ್ನು ದೂರ ಇಟ್ಟು ಸಮಾಜದಲ್ಲಿನ ಅನಿಷ್ಠಕಟ್ಟುಪಾಡುಗಳನ್ನು ವಿರೋ ಧಿಸಿ ಬಸವಣ್ಣನವರಶರಣರ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದಮಹಾನ್ ಪ್ರಕಾಶಮಾನ ಶರಣ ಮಡಿವಾಳಮಾಚಿದೇವರು ಎಂದು ಸ್ಮರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮಗಂಗಾಧರ ನಾಯ್ಕ, ಮಡಿವಾಳ ಮಾಚಿದೇವಸಂಘದ ಜಿಲ್ಲಾ ಅಧ್ಯಕ್ಷ ಎಂ.ನಾಗೇಂದ್ರಪ್ಪ,ಓಂಕಾರಪ್ಪ, ಡೈಮಂಡ್ ಮಂಜುನಾಥ್,ಪಿ.ಮಂಜುನಾಥ್, ವಿಜಯ ಕುಮಾರ್, ಸುರೇಶ್‌ಕೋಗುಂಡೆ, ಎಂ.ಎನ್. ನಾಗರಾಜ್, ಆರ್.ಎನ್. ಧನಂಜಯ, ಎಂ. ವೈ.ಸತೀಶ್, ರುದ್ರೇಶ್,ಗುಡ್ಡಪ್ಪ, ಎಚ್.ದುಗ್ಗಪ್ಪ, ರವಿಚಿಕ್ಕಣ್ಣ, ಅಜೇಯ,ಪರಶುರಾಮ, ಕಿಶೋರ್ ಕುಮಾರ್, ರೇವಣಪ್ಪ,ನಾಗಪ್ಪ, ನಾಗಮ್ಮ, ಚಂದ್ರಕಲಾ, ಎಂ.ಕೆ. ಲಕ್ಷ್ಮೀ,ಸುಮಿತ್ರಾ, ರತ್ನಕ್ಕ, ಶ್ರೀನಿವಾಸ್ ಪೂಜಾರ್, ಯಲ್ಲಪ್ಪಪೂಜಾರ್, ಅಶೋಕ ಪೂಜಾರ್, ಮಡಿಕಟ್ಟೆಯರವಿ, ಮಲ್ಲೇಶಪ್ಪ, ಅಜೇಯ, ಫಕ್ಕೀರಪ್ಪ, ಲಕ್ಷ್ಮಣ್,ಹುಚ್ಚಪ್ಪ, ಕೋಟೆಪ್ಪ, ಮಡಿವಾಳಪ್ಪ, ಬಸವರಾಜ,ಲಕ್ಷ್ಮೀದೇವಿ ಇತರರು ಇದ್ದರು.
ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಡಾಕ್ಟರೇಟ್ ಪದವಿ ಪಡೆದ ಡಾ| ಗಣೇಶ್ ಪೂಜಾರ್‌ಅವರನ್ನು ಸನ್ಮಾನಿಸಲಾಯಿತು
ಓದಿ :·“ಮಹಾ ಯಡವಟ್ಟು”: 12 ಮಕ್ಕಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್: ಮಕ್ಕಳು ಅಸ್ವಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.