ಚೀಲೂರಲ್ಲಿ ವಚನ ಸಂಕ್ರಾಂತಿ ಕಾರ್ಯಕ್ರಮ
ನ್ಯಾಮತಿ ತಾಲೂಕು ಚೀಲೂರು ಗ್ರಾಮದಲ್ಲಿ ನಡೆದ ವಚನ ಸಂಕ್ರಾಂತಿ ಕಾರ್ಯಕ್ರಮವನ್ನು ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್ ಉದ್ಘಾಟಿಸಿದರು.
Team Udayavani, Feb 2, 2021, 1:23 PM IST
ಹೊನ್ನಾಳಿ: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನ್ಯಾಮತಿ ತಾಲೂಕು ಚೀಲೂರು ಗ್ರಾಮದ ಅಕ್ಕನ ಬಳಗದಲ್ಲಿ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಸಂಕ್ರಾಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ಅಜ್ಞಾನ ಮತ್ತು ಮೌಡ್ಯದ ಹೊದಿಕೆಯನ್ನು ಪಕ್ಕಕ್ಕೆ ಸರಿಸಿ ಜನರನ್ನು ಸುಜ್ಞಾನದತ್ತ ತೆಗೆದುಕೊಂಡು ಹೋಗಿದ್ದು ವಚನ ಸಾಹಿತ್ಯ. 12ನೇ ಶತಮಾನಕ್ಕಿಂತ ಮೊದಲು ಅರಮನೆಯಲ್ಲಿ ರಾಜಾಶ್ರಯದಲ್ಲಿದ್ದ ಸಾಹಿತ್ಯವನ್ನು ಬಸವಣ್ಣನವರ ಕಾಲದಲ್ಲಿ ವಚನಗಳ ಮುಖಾಂತರ ಪಂಡಿತರ ಕಪಿಮುಷ್ಟಿಯಿಂದ ಹೊರ ಬಂದಿತು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಬಸವ ಕೇಂದ್ರದ ಬಸವ ಮರಳಸಿದ್ದ ಸ್ವಾಮೀಜಿ ಮಾತನಾಡಿ, ದೂರದರ್ಶನಗಳು ಪ್ರಸಾರ ಮಾಡುವ ಧಾರವಾಹಿಗಳಿಂದ ಪ್ರೀತಿ, ವಿಶ್ವಾಸ, ನಂಬಿಕೆಗಳು ಮಾಯವಾಗಿ ಭಯ, ಸಂಶಯ ತಲ್ಲಣಗಳು ವೀಕ್ಷಕರಲ್ಲಿ ಉಂಟು ಮಾಡಿವೆ ಎಂದು ಹೇಳಿದರು.
ದಾವಣಗೆರೆ ಎವಿಕೆ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಗೀತಾ ಉಪನ್ಯಾಸ ನೀಡಿದರು. ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್, ಸೋಗಿಲು ಚಂದ್ರಶೇಖರಪ್ಪ ಮಾತನಾಡಿದರು. ಗ್ರಾಪಂ ಸದಸ್ಯರಾದ ಕೆ.ಎಚ್. ಹಾಲೇಶ್, ಆರ್.ಬಾಬು, ನಾಗಮ್ಮ, ರೂಪ, ರಾಟೆಮನೆ ರತ್ನಮ್ಮ, ಅನ್ನಪೂರ್ಣಮ್ಮ ಉಪಸ್ಥಿತರಿದ್ದರು. ಶಿವಯೋಗಿ ಪ್ರಾಸ್ತಾವಿಕ ಮಾತನಾಡಿದರು. ಪಾರ್ವತಿ ನಿರೂಪಿಸಿದರು. ಶೀಲಬಸವರಾಜ್ ಸ್ವಾಗತಿಸಿದರು. ಆಶಾ ಹಾಲೇಶ್ ವಂದಿಸಿದರು.
ಓದಿ : ತುಮಕೂರು: ಮಸ್ಕಲ್ ಗ್ರಾಮದಲ್ಲಿ ಜೆಲಿಟಿನ್ ಕಡ್ಡಿ ಸ್ಪೋಟ; ಮನೆ ಧ್ವಂಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.