ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ
ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಲಾಗಿತ್ತು
Team Udayavani, Feb 2, 2021, 1:31 PM IST
ದಾವಣಗೆರೆ; ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ದಾವಣಗೆರೆ ದಕ್ಷಿಣ ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕರಿಗಾಗಿ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ಸಮವಸ್ತ್ರದ ಮಹತ್ವ, ವಿವಿಧ ಧ್ವಜಗಳ ಆಳತೆ, ಪ್ರಾಮುಖ್ಯತೆ, ರಾಷ್ಟ್ರಗೀತೆ, ಝಂಡಾ ಗೀತೆಗಳ ತರಬೇತಿ, ಪ್ರಥಮ ಚಿಕಿತ್ಸಾ ವಿಧಾನ, ವಿವಿಧ ರೀತಿಯ ಗಂಟುಗಳನ್ನು ಮತ್ತು ಬ್ಯಾಂಡೇಜ್ ಕಟ್ಟುವ ರೀತಿ, ಗಾಯಾಳುಗಳನ್ನು ತಕ್ಷಣ ರವಾನಿಸಲು ಉಪಯೋಗಿಸುವ ವಿವಿಧ ರೀತಿಯ ಡೋಲಿ, ಅವುಗಳ ಅಳತೆ ಮತ್ತು ಲಾಗ್ ಪುಸ್ತಕ ಬರೆಯುವ ವಿಧಾನ ಮತ್ತು ಶುಭಾಷಯ ಪತ್ರಗಳ ರಚಿಸುವ ಕುರಿತು ಕುರಿತಾಗಿ ಶಿಬಿರದ ನಾಯಕಿ ಎಂ. ರತ್ನ ಪರಿಚಯಿಸಿದರು.
ಸಮರೋಪದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಜಸ್ಟಿನ್ ಡಿಸೌಜ್ ಮಾತನಾಡಿ, ಕೋವಿಡ್‌ನಿಂದ ಹೊರಬಂದ ವಾತಾವರಣದಲ್ಲಿ ಪುನಶ್ಚೇತನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ಶ್ಲಾಘನೀಯ.
ಕೋವಿಡ್ ಸಂದರ್ಭದಲ್ಲಿ ಸಿದ್ದಗಂಗಾ ಸ್ಥಳೀಯ ಸಂಸ್ಥೆಯಿಂದ ಆನ್‌ಲೈ ನ್‌ನಲ್ಲಿ ಮಕ್ಕಳ ಚಟುವಟಿಕೆ ನಿರಂತರವಾಗಿದ್ದು ಹಲವಾರು
ಬಹುಮಾನ ಗಳಿಸುವಲ್ಲಿ ಮತ್ತು ರಾಜ್ಯ ಸಂಸ್ಥೆಯಿಂದ ಪ್ರಶಂಸೆಗೊಳಪಟ್ಟಿದೆ ಎಂದು ತಿಳಿಸಿದರು.
ಕಾರ್ಯಕಾರಿ ಸಮಿತಿಯ ಸಹಾಯಕ ಆಯುಕ್ತರಾದ ಡಾ| ಜಯಂತ್,ರೇಖಾರಾಣಿ, ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಇತರರು ಇದ್ದರು. ಹೊನ್ನಾಳಿಯ ಸಂಪನ್ಮೂಲ ಶಿಕ್ಷಕ ಆಂಜನೇಯ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. 36 ಶಿಕ್ಷಕ ಶಿಕ್ಷಕಿಯರು ಶಿಬಿರದಲ್ಲಿ ಭಾಗವಹಿಸಿದ್ದರು.
ಓದಿ : ಕ್ಯಾಲಿಫೋರ್ನೀಯಾದಲ್ಲಿ ಗಾಂಧಿ ಪ್ರತಿಮೆ ಧ್ವಂಸ : ರೋ ಖನ್ನಾ ಖಂಡನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.