ಮಾಚಿದೇವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ
ಹರಪನಹಳ್ಳಿ: ತಾಲೂಕು ಆಡಳಿತದ ವತಿಯಿಂದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಆಚರಿಸಲಾಯಿತು.
Team Udayavani, Feb 2, 2021, 2:36 PM IST
ಹರಪನಹಳ್ಳಿ: ಸಮಾಜ ಸುಧಾರಕ ಮಾಚಿ ದೇವರು ವಚನಗಳನ್ನು ರಚಿಸಿ ಆ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಅವರ ತತ್ವ ಹಾಗೂ ಆದರ್ಶ ಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತಹಶೀಲ್ದಾರ್ ಎಂ.ಎಲ್.ನಂದೀಶ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಅವರು ಮಾತನಾಡಿದರು.
12 ನೇ ಶತಮಾನ ಶರಣರ ಸಾಹಿತ್ಯದ ಶತಮಾನವಾಗಿತ್ತು. ಜಾತಿ, ಮತ, ಧರ್ಮ, ಪಂಥ, ಬೇಧ-ಭಾವ ಇವುಗಳನ್ನು ನಿರಾಕರಿಸಿ ಮಾನವಿಯತೆ ಧರ್ಮವೇ ನಿಜವಾದ ಧರ್ಮವೆಂದು ಸಾರಿ ಅನೇಕ ಚಳುವಳಿಗಳನ್ನು ನಡೆಸಿ ಜನ ಸಾಮಾನ್ಯರಿಗೆ ಅರ್ಥವಾಗುವಂತಂಹ ಸರಳ ಪದಗಳಿಂದ ವಚನಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿ ಸಿದ್ದು ಶರಣರು.ಇಂತಹ ಶರಣರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು ಎಂದರು.
ಮಡಿವಾಳ ಸಮಾಜ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ ಮಾತನಾಡಿ, ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದಂತೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು, ಶಿವಶರಣರಾದವರಲ್ಲಿ ಮಾಚಿದೇವರು ಒಬ್ಬರಾಗಿದ್ದಾರೆ. ಮನುಷ್ಯರ ನಡುವೆ ಇರುವ ಅಂತರವನ್ನು
ಹೋಗಲಾಡಿಸಲು ಹೋರಾಡಿದ ಮಹಾನ್ ಶರಣರು. ಮಡಿವಾಳ ಮಾಚಿದೇವರು ಮುಖ್ಯವಾಗಿ ಎಲ್ಲಾ ಶರಣರಿಂದ ಗೌರವ ಪಡೆದುಕೊಂಡಂತಹ ಶರಣರು. ಅರಿವೇ ಗುರು ಎಂಬ ವಾಕ್ಯದೊಂದಿಗೆ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆದರೆ ಜ್ಞಾನವನ್ನು ಕ್ರಿಯಾತ್ಮಕವಾಗಿಸಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಮಡಿವಾಳ ಮಾಚಿದೇವರು ಹೇಳಿದ್ದಾರೆ ಎಂದ ತಿಳಿಸಿದರು.
ಓದಿ : ಸರ್ಕಾರಗಳ ನೀತಿಗೆ ಖಂಡನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.