ಅಮೆರಿಕ ಮತ್ತು ಭಾರತದ ಸಹಭಾಗಿತ್ವವನ್ನು ಸಶಕ್ತಗೊಳಿಸಲು ಅಮೆರಿಕ ಬದ್ಧ : ಡಾನ್ ಹೆಫ್ಲಿನ್
Team Udayavani, Feb 2, 2021, 8:21 PM IST
ಬೆಂಗಳೂರು : ಪರಸ್ಪರ ಸೇನಾ ಸಂಬಂಧಗಳನ್ನು ಹಾಗೂ ಸಹಕಾರವನ್ನು ಹೆಚ್ಚಿಸಿ ಅಮೆರಿಕ ಮತ್ತು ಭಾರತದ ನಡುವೆ ಸಶಕ್ತ ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸಲು ಅಮೆರಿಕ ಬದ್ಧವಾಗಿದೆ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಶಾರ್ಜೆ ಡಿ ಅಫ಼ೇರ್ಸ್ ಡಾನ್ ಹೆಫ್ಲಿನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಏರೋ ಇಂಡಿಯಾ 2021ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಡೋ ಪೆಸಿಫಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ಕೊಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳನ್ನೊಳಗೊಂಡ 100 ಜನರ ನಿಯೋಗವು ಏರೋ ಇಂಡಿಯಾ 2021 ರಲ್ಲಿ ಭಾಗವಹಿಸುತ್ತಿದೆ.
ಅಮೆರಿಕಕ್ಕೆ ಭಾರತ ಅತ್ಯಂತ ವಿಶ್ವಾಸಾರ್ಹ ರಕ್ಷಣಾ ಸಹಭಾಗಿಯಾಗಿದ್ದು, ಅದು ಪ್ರಪಂಚದಲ್ಲೇ ಅತ್ಯುತ್ತಮ ರಕ್ಷಣಾ ಸಲಕರಣೆಗಳ ಪ್ರಸ್ತಾಪವನ್ನು ತಂದಿದೆ ಎಂದರು. “ಇಂಡೊ ಪೆಸಿಫಿಕ್ ವಲಯದಲ್ಲಿ ಭಾರತದ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸಹಯೋಗವು ಎಲ್ಲಾ ದೇಶಗಳ ಸಮೃದ್ಧಿ ಮತ್ತು ಸುರಕ್ಷೆಯನ್ನು ಒಳಗೊಂಡ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ ಎಂಬ ಸಮಾನ ಪರಿಕಲ್ಪನೆಯನ್ನು ಆಧರಿಸಿದೆ,” ಎಂದರು.
ಇದನ್ನೂ ಓದಿ:ನಾಸಾಕ್ಕೆ ಹಂಗಾಮಿ ಮುಖ್ಯಸ್ಥೆಯಾಗಿ ಭವ್ಯಾ ಲಾಲ್ ನೇಮಕ
“ಅಮೆರಿಕ ಮತ್ತು ಭಾರತದ ರಕ್ಷಣಾ ಕಂಪನಿಗಳ ನಡುವೆ ಹೆಚ್ಚುತ್ತಿರುವ ಜಂಟಿ ಒಪ್ಪಂದಗಳು ಮತ್ತು ಕಾರ್ಯಗಳು ಭಾರತದಲ್ಲಿ ಇರುವ ರಕ್ಷಣಾ ಸರಬರಾಜುದಾರರ ಜಾಲವನ್ನು ಇನ್ನೂ ಸಧೃಢ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದು ಇಂಡೊ ಪೆಸಿಫಿಕ್ ವಲಯದ ಸಹಭಾಗಿಗಳನ್ನು ಬಲಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದರು.
ಬಳಿಕ ಮಾತನಾಡಿದ ಅಮೆರಿಕದ ವಾಯುಪಡೆಯ ಅಂತರರಾಷ್ಟ್ರೀಯ ವ್ಯವಹಾರಗಳ ಉಪ ಅಧೀನ ಕಾರ್ಯದರ್ಶಿ ಮಿಸ್ ಕೆಲ್ಲಿ ಎಲ್ ಸೇಬಾಲ್ಟ್ ಅವರು, “ಇಂಡೊ ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ನಮಗೆ ಅತಿ ಮುಖ್ಯ ರಕ್ಷಣಾ ಸಹಭಾಗಿಗಳಾಗಿರುವ ದೇಶಗಳಲ್ಲಿ ಒಂದಾಗಿದೆ. ಕೆಲವು ಉಪಕ್ರಮಗಳು, ಸಹಭಾಗಿತ್ವದ ಒಪ್ಪಂದಗಳು, ಅಮೆರಿಕದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹಾಗೂ ವೇದಿಕೆಗಳನ್ನು ಭಾರತದ ಸಶಸ್ತ್ರ ಸೇವೆಗಳಲ್ಲಿ ಬಳಸಲು ಸಹಾಯ ಮಾಡುವ ಮೂಲಕ ಈ ರಕ್ಷಣಾ ಸಂಬಂಧಗಳನ್ನು ಇನ್ನೂ ಹೆಚ್ಚು ಗಟ್ಟಿಯಾಗಿಸುತ್ತಿದ್ದೇವೆ ಎಂದಿದ್ದಾರೆ.”
11ನೇ ಏರ್‌ಫೋರ್ಸ್ ಕಮಾಂಡರ್ ಅವರು ಅಮೆರಿಕ ಮತ್ತು ಭಾರತದ ನಡುವಿನ ಸಹಭಾಗಿತ್ವದ ಬದ್ಧತೆಗೆ ಏರೋ ಇಂಡಿಯಾ ಮತ್ತೊಂದು ಉತ್ತಮ ಉದಾಹರಣೆ, “ ಬದಲಾಗುತ್ತಿರುವ ಅಂತರರಾಷ್ಟ್ರೀಯ ಪರಿಸರದಲ್ಲಿ ಅದರಲ್ಲೂ ಕಳೆದ ವರ್ಷ ಅಮೆರಿಕ ಮತ್ತು ಭಾರತದ ಸಹಭಾಗಿತ್ವವು ಮತ್ತಷ್ಟು ಮಹತ್ವ ಪಡೆದು ಕೊಂಡಿದೆ,”ಎಂದು ಲೆಫ್ಟಿನೆಂಟ್ ಜನರಲ್ ಡೇವಿಡ್ ಎ. ಕ್ರಮ್ ಹೇಳಿದ್ದಾರೆ.
ಇದನ್ನೂ ಓದಿ:ಮುಂಬೈ: ಗೋರೆಗಾಂವ್ ಸ್ಟುಡಿಯೋದಲ್ಲಿ ಅಗ್ನಿ ಅವಘಡ; ಸಾವು, ನೋವು ಸಂಭವಿಸಿಲ್ಲ
ಏರೋ ಇಂಡಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ B-1B ಲ್ಯಾನ್ಸರ್ ಹೆವಿ ಬಾಂಬರ್ ಫೆಬ್ರವರಿ 3 ರ ಉದ್ಘಾಟನಾ ದಿನದಂದು ಕಸರತ್ತು ಪ್ರದಶಿಸಲಿವೆ, ಭಾರತ ಸ್ವಾತಂತ್ರಾ ನಂತರ ಇದೇ ಮೊದಲ ಬಾರಿಗೆ ಅಮೆರಿಕದ B-1B ಬಾಂಬರ್ ಭಾರತದ ನೆಲದ ಮೇಲೆ ಕಾಣಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಲಿದೆ.
B-1, 28ನೇ ಬಾಂಬ್ ವಿಂಗ್, ಎಲ್ಸ್ ವರ್ತ್ ಏರ್ ಫೋರ್ಸ್ ಬೇಸ್, ಸೌತ್ ಡಕೋಟದ ವಿಮಾನವಾಗಿದ್ದು ಈ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ. ಇದೊಂದು ಅದ್ಭುತ ವಿಮಾನ. ಇದು ಜಗತ್ತಿನ ಎಲ್ಲಡೆ ಅಮೆರಿಕಕ್ಕೆ ಸೇರಿದ ಬೇಸ್ ಗಳಿಂದ ಹಾಗೂ ಫಾರ್ವರ್ಡ್-ಡಿಪ್ಲಾಯ್ಡ್ ಜಾಗಗಳಿಂದ ಕೂಡ ಮಿಷನ್ ಗಳನ್ನು ಸಫಲಗೊಳಿಸುವ ಸಾಮರ್ಥ್ಯ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.