ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ದೊಡ್ಡ ಜನರ ಸಹವಾಸದಿಂದ ನಷ್ಟ ಸಂಭವವಾಗಲಿದೆ
Team Udayavani, Feb 3, 2021, 7:44 AM IST
03-021-2021
ಮೇಷ: ವಿರೋಧಿಗಳಿಂದ ಉಪಟಳವು ಆಗಾಗ ಕಂಡುಬಂದು ಬೇಸರವಾಗಲಿದೆ. ಸ್ತ್ರೀ ಸಂಬಂಧ ಚಿಂತೆಯೂ, ಮಿತ್ರರಿಂದ ಹಿತವಚನ ಕಂಡುಬಂದು ಸಮಾಧಾನವಾಗಲಿದೆ. ಚಿತ್ತಚಾಂಚಲ್ಯವು ಕಾಡಲಿದೆ.
ವೃಷಭ: ಅಧಿಕ ಲಾಭವಿದ್ದರೂ ಅಷ್ಟೇ ಖರ್ಚು ಕಂಡು ಬರಲಿದೆ. ಉಳಿತಾಯ ಮಾಡಲು ಕಷ್ಟವಾಗ ಬಹುದು. ಹೊಸ ವಸ್ತ್ರಾಭರಣಗಳ ಖರೀದಿಯು ಕಂಡುಬಂದೀತು. ದೊಡ್ಡ ಜನರ ಸಹವಾಸದಿಂದ ನಷ್ಟವು ಸಂಭವವಾಗಲಿದೆ.
ಮಿಥುನ: ವ್ಯಾಪಾರ, ಉದ್ಯೋಗದಲ್ಲಿ ಅಲ್ಪ ಲಾಭವು, ಅಧಿಕ ಖರ್ಚು ಕಂಡುಬರಲಿದೆ. ಹಿತಶತ್ರುಗಳ ಕಾಟವು ಕಂಡುಬರುವುದು. ದೇಹಾರೋಗ್ಯವು ಉತ್ತಮವಿರುವುದು. ಪುಣ್ಯಕ್ಷೇತ್ರ ದರ್ಶನ, ಗುರುವಿನ ಅನುಗ್ರಹವು ತೋರಿಬರುವುದು.
ಕರ್ಕ: ಸರಕಾರೀ ಕೆಲಸಗಳು ವಿಫಲವಾಗಲಿದೆ. ಒತ್ತಡದ ಕೆಲಸಗಳಲ್ಲಿ ಕಾರ್ಯಸಿದ್ಧಿಯಾಗಲಿದೆ. ವ್ಯರ್ಥ ಚಿಂತೆಯು ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಲ್ಪ ಅಭಿವೃದ್ಧಿ ಕಂಡುಬರಲಿದೆ. ವಿರೋಧಿಗಳಿಂದ ಉಪದ್ರವವಿದೆ.
ಸಿಂಹ: ಕೋರ್ಟು ಕಚೇರಿಯ ಕೆಲಸಗಳಲ್ಲಿ ಅಪಜಯ, ಅಪಮಾನವು ಇದ್ದೀತು. ಇಷ್ಟ ಕಾರ್ಯಗಳು ನಿಧಾನಗತಿ ಯಲ್ಲಿ ಸಾಗಲಿದೆ. ಮನಸ್ಸಿಗೆ ಸಂತಾಪವು, ಮನೋವ್ಯಥೆಯು, ಅಧಿಕ ತಿರುಗಾಟವು ದುಂದುವೆಚ್ಚವು ಕಂಡುಬರುವುದು.
ಕನ್ಯಾ: ಆರ್ಥಿಕ ಅಡಚಣೆಯು, ಸಾಲದ ಬಾಧೆಯು, ಉತ್ಪನ್ನಕ್ಕಿಂತ ಖರ್ಚು ಹೆಚ್ಚಾದೀತು. ನಾನಾರೀತಿಯಲ್ಲಿ ಸಮಸ್ಯೆಗಳು ಎದುರಾದವು. ಹಲವಾರು ರೀತಿಯಲ್ಲಿ ವ್ಯವಹಾರ ಕೈಗೊಳ್ಳುವುದರಿಂದ ಅಲ್ಪ ನೆಮ್ಮದಿಯು ಕಾಣಸಿಗುವುದು.
ತುಲಾ: ದೇಹಾರೋಗ್ಯ ಉತ್ತಮವೂ, ಉತ್ಸಾಹದಾಯಕವೂ ಆಗಲಿದೆ. ಸ್ವಜನ, ಪರಜನರೊಡನೆ ಪ್ರೀತಿವೃದ್ಧಿಯು, ಹೊಸ ವಸ್ತ್ರಾಭರಣ ಖರೀದಿಯು ನಡೆದೀತು. ವಾಹನ ಸಂಗ್ರಹ, ಪರೋಪಕಾರಗಳಲ್ಲಿ ಮನಸ್ಸು ಸಮಾಧಾನವಾಗಲಿದೆ.
ವೃಶ್ಚಿಕ: ಗೃಹದಲ್ಲಿ ಶುಭ ಶೋಭನಾದಿ, ಮಂಗಲಕಾರ್ಯಗಳು ಜರಗಲಿವೆ. ಮನಸ್ಸಿಗೆ ಸಂತೋಷವೂ, ವಿರೋಧಿಗಳಿಗೆ ಮುಖಭಂಗವಾಗಲಿದೆ. ಬಂಧುಮಿತ್ರರು ಸಹಾಯ ಹಾಗೂ ಸಹಕಾರ ನೀಡಲಿರುವರು. ಇಷ್ಟಕಾರ್ಯಗಳು ನೆರವೇರುವುದು.
ಧನು: ಸ್ತ್ರೀಯರಿಂದ ಧನಪ್ರಾಪ್ತಿಯೋಗವೂ, ಉದ್ಯೋಗ ಕ್ಷೇತ್ರದಲ್ಲಿ ಏಳಿಗೆಯೂ ಕಂಡುಬರುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮಾನ ಮನ್ನಣೆಯು ದೊರಕಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಮುಂದಾಳತ್ವ ವಹಿಸಿ ಸೈ ಎನಿಸಿಕೊಳ್ಳುವಿರಿ.
ಮಕರ: ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಅಪಜಯ ಕಂಡುಬರುವುದು. ವ್ಯಾಪಾರ, ವ್ಯವಹಾರದಲ್ಲಿ ಧನಹಾನಿ ಯಾದೀತು. ಅಪವಾದವು ಕಾಡಲಿದೆ. ಸಿಟ್ಟಿನ ಭರದಲ್ಲಿ ಏನಾದರೊಂದು ಅವಿವೇಕದ ಕೆಲಸ ಮಾಡಿ ನಂತರ ಪಶ್ಚಾತ್ತಾಪ ಪಡುವಿರಿ.
ಕುಂಭ: ದಾನ, ಧರ್ಮ, ಪರೋಪಕಾರಗಳಲ್ಲಿ ಮನಸ್ಸು ನಿರಂತರ ಓಡಾಡುವುದು. ದುಷ್ಟಜನರಿಂದ ಹಾನಿ ಕಂಡುಬರುವುದು. ಸ್ತ್ರೀಸಂಬಂಧ ಚಿಂತೆಯು ಕಾಡಲಿದೆ. ವ್ಯರ್ಥ ಧನಹಾನಿ ಕಂಡುಬರುವುದು. ನೆಮ್ಮದಿಯ ಸಹಜೀವನವಿದೆ.
ಮೀನ: ಪ್ರಾಪಂಚಿಕ ಜೀವನದಲ್ಲಿ ನೆಮ್ಮದಿಯು ಕಂಡುಬರುವುದು. ದೇಹಾರೋಗ್ಯವು ಸುಧಾರಿಸಲಿದೆ. ಉತ್ಸಾಹವು, ಸಂತೋಷವು ಇದ್ದು ಗೃಹದಲ್ಲಿ ಮಂಗಲ ಕಾರ್ಯವು ಜರಗುವುದು. ಪುಣ್ಯಕ್ಷೇತ್ರಗಳ ಸಂದರ್ಶನ ಭಾಗ್ಯವಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.