ಹಲಗಲಿಯಲ್ಲಿ ಈಗ ನಿರಂತರ ಕುಡಿವ ನೀರು

ಪ್ರತಿ ಮನೆಗೂ ಬಂತು ನಳದ ವ್ಯವಸ್ಥೆ | ನಿರಂತರ ನೀರು ಪೂರೈಕೆಗೆ ಕ್ರಮ

Team Udayavani, Feb 3, 2021, 3:54 PM IST

3-31

ಮುಧೋಳ: ಜನಪ್ರತಿನಿ ಧಿಗಳು ಹಾಗೂ ಅಧಿ ಕಾರಿಗಳು·ಮನಸ್ಸು ಮಾಡಿದರೆ ಏನೆಲ್ಲ ಅಭಿವೃದ್ಧಿ ಸಾಧಿ ಸಬಹುದುಎಂಬುದಕ್ಕೆ ಹಲಗಲಿ ಗ್ರಾಮವೇ ಸಾಕ್ಷಿಯೆಂಬಂತಿದೆ.ತಾಲೂಕಿನ ಗಡಿಗ್ರಾಮ ಹಲಗಲಿ ಗ್ರಾಮ ಒಂದುಕಾಲಕ್ಕೆ ಕುಗ್ರಾಮವೆಂಬಂತ್ತಿತ್ತು. ಆದರೆ ಅದೇ ಗ್ರಾಮಇಂದು ಕುಡಿಯುವ ನೀರಿನ ವಿಷಯದಲ್ಲಿ ತಾಲೂಕಿನಎಲ್ಲ ಹಳ್ಳಿಗಳಿಗೂ ಮಾದರಿಯಾಗಿದೆ.

ಹೌದು. ಐತಿಹಾಸಿಕ ಹಿನ್ನೆಲೆಯುಳ್ಳ ಹಲಗಲಿಗ್ರಾಮದಲ್ಲಿ ದಶಕಗಳ ಹಿಂದೆ ಒಂದೇ ಒಂದು ಕೊಡನೀರು ತರಬೇಕೆಂದರೂ ಕನಿಷ್ಠ ಒಂದು ಕಿ.ಮೀ. ದೂರನಡೆಯಬೇಕಿತ್ತು. ಮನೆಯಲ್ಲಿ ಒಬ್ಬರು ನೀರು ತರಲುಇರುವಂತಾಗಿತ್ತು. ಈ ಸಮಸ್ಯೆಯನ್ನರಿತ ಇಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ 2017ರಲ್ಲಿಮಾಚಕನೂರ ಬಹುಹಳ್ಳಿ ಕುಡಿಯುವ ಏತ ನೀರಾವರಿಯೋಜನೆ ಮೂಲಕ ಅಂದಾಜು ಒಂದೂವರೆಕೋಟಿ ರೂ. ವೆಚ್ಚದಲ್ಲಿ ಗ್ರಾಮಕ್ಕೆ ಕುಡಿಯುವನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಆರ್‌ಡಬುಎಸ್‌ ಇಲಾಖೆಯಿಂದ ಗ್ರಾಮದ ಪ್ರತಿ ಮನೆಗೂ
ನಳದ ವ್ಯವಸ್ಥೆ ಕಲ್ಪಿಸಿ ನಿರಂತರ ನೀರು ಪೂರೈಕೆಗೆಕ್ರಮ ಕೈಗೊಂಡಿದ್ದಾರೆ. ಪ್ರತಿ ನಳಗಳಿಗೆ ಮೀಟರ್‌ಅಳವಡಿಸಿ ಸ್ಥಳೀಯ ಪಂಚಾಯಿತಿ ವತಿಯಿಂದ ಬಿಲ್‌ಪಾವತಿಗೆ ಕ್ರಮ ಕೈಗೊಂಡಿದ್ದಾರೆ. ಇದರಿಂದ ನೀರಿನಉಳಿತಾಯದೊಂದಿಗೆ ಪಂಚಾಯಿತಿಗೂ ಆದಾಯಹರಿದು ಬರಲು ಆರಂಭಿಸಿದೆ. ಹೀಗಾಗಿ ಹಲಗಲಿಯಲ್ಲಿಒಂದೇ ಒಂದು ದಿನ ನೀರಿನ ಸಮಸ್ಯೆ ಉದ್ಬವವಾಗಿಲ್ಲ.ನೀರಿನ ಬಳಕೆ ಗಣನೀಯ ಇಳಿಕೆ : ಗ್ರಾಮದಲ್ಲಿ ನಿರಂತರನೀರು ಪೂರೈಕೆ ಯೋಜನೆ ಕೈಗೊಳ್ಳುವ ಮುನ್ನ ಪ್ರತಿನಿತ್ಯ13 ಲಕ್ಷ ಲೀಟರ್‌ಗೂ ಹೆಚ್ಚು ನೀರು ಬಳಕೆಯಾಗುತ್ತಿತ್ತು.ಗ್ರಾಮದಲ್ಲಿ ಒಟ್ಟು 525000 ಸಾಮರ್ಥ್ಯದ ನಾಲ್ಕುನೀರಿನ ಟ್ಯಾಂಕ್‌ಗಳು ಖಾಲಿಯಾಗಿ ಮತ್ತೆ ಬೋರ್‌ವೆಲ್‌ ಮೂಲಕ ನೀರು ಸರಬರಾಜು ಮಾಡುವ
ಪರಿಸ್ಥಿತಿ ಇತ್ತು. ಆದರೆ, ನಿರಂತರ ನೀರು ಯೋಜನೆಕಾರ್ಯರೂಪಕ್ಕೆ ಬಂದ ಮೇಲೆ ದಿನಯೊಂದಕ್ಕೆ500000 ಲಕ್ಷ ಲೀ.ನೀರು ಮಾತ್ರ ಬಳಕೆಯಾಗುತ್ತಿದೆ.ಇದರಿಂದ ದಿನಕ್ಕೆ ಅಂದಾಜು 80000 ಲಕ್ಷ ಲೀ.ಉಳಿತಾಯವಾಗುತ್ತಿದೆ.

ಪ್ರತಿ ಮನೆಗೂ ಉಚಿತ ನಳ: ನಿರಂತರ ನೀರು ಪೂರೈಕೆಯೋಜನೆ ಕೈಗೊಂಡಾಗ ಗ್ರಾಮದ 1450 ಮನೆಗಳಿಗೆಉಚಿತವಾಗಿ ನಳ-ಮೀಟರ್‌ ಅಳವಡಿಸಲಾಗಿದೆ.ಅದಾದ ಬಳಿಕ ಸರ್ಕಾರ ನಿಗದಿಪಡಿಸಿರುವಶುಲ್ಕದೊಂದಿಗೆ ಹೊಸ ನಳ ಜೋಡಿಸಲಾಗುತ್ತಿದೆ.ಗ್ರಾಮದಲ್ಲಿ ಸದ್ಯ 1465 ಮನೆಗಳಿಗೆ ನಳಜೋಡಿಸಲಾಗಿದೆ.

ಬಡವರಿಗೆ ವರದಾನ: ನಳಗಳಿಗೆ ಮೀಟರ್‌ಅಳವಡಿಸಿರುವುದರಿಂದ ಬಡವರು ಹಾಗೂ ವಿಭಕ್ತಕುಟುಂಬಕ್ಕೆ ಹೆಚ್ಚು ಅನುಕೂಲವಾಗಿದೆ. ಜನರು ಇರುವಮನೆಗಳಲ್ಲಿ ನೀರಿನ ಬಳಕೆ ಮಿತವ್ಯಯವಾಗಿದ್ದು,820 ಮನೆಗಳು ತಿಂಗಳಿಗೆ 50 ರೂ.ನೀರಿನ ಬಿಲ್‌
ಪಾವತಿಸುತ್ತಿವೆ.ಪಂಚಾಯಿತಿಗೂ ಉಳಿತಾಯ: ಗ್ರಾಮದಲ್ಲಿಮಿತವ್ಯಯ ನೀರಿನ ಬಳಕೆಯಿಂದ ಹೆಚ್ಚುವರಿಮೋಟರ್‌ಗಳ ಬಳಕೆ ನಿಲ್ಲಿಸಲಾಗಿದೆ. ಯೋಜನೆಆರಂಭಕ್ಕೂ ಮುನ್ನ 5-6 ಮೋಟರ್‌ಗಳನ್ನು ಬಳಸಿನೀರು ಪೂರೈಸಲಾಗುತ್ತಿತ್ತು. ಇದರಿಂದ ಪ್ರತಿ ತಿಂಗಳುಪಂಚಾಯಿತಿಗೆ ಹೆಚ್ಚಿನ ಪ್ರಮಾಣದ ಬಿಲ್‌ ಬರುತ್ತಿತ್ತು.ಆದರೆ, ಯೋಜನೆ ಕಾರ್ಯರೂಪಕ್ಕೆ ಬಂದಾಗಿನಿಂದನೀರನ್ನು ಲಿಫ್ಟ್‌ ಮಾಡುವ ಉದ್ದೇಶದಿಂದ ಒಂದೇ
ಮೋಟರ್‌ ಬಳಕೆ ಮಾಡಲಾಗುತ್ತಿದೆ. ಇದರಿಂದಪಂಚಾಯಿತಿಗೆ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ಉಳಿತಾಯವಾಗುತ್ತಿದೆ.

ದೆಹಲಿ ತಂಡ ಭೇಟಿ: ಗ್ರಾಮದಲ್ಲಿನ ನೀರಿನ ವ್ಯವಸ್ಥೆಅಧ್ಯಯನ ನಡೆಸಲು ದೆಹಲಿಯಿಂದ ವಿಶೇಷ ತಂಡಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿ ವ್ಯವಸ್ಥೆ ಮೆಚ್ಚುಗೆವ್ಯಕ್ತಪಡಿಸಿದೆ.41 ಹಳ್ಳಿಗಳಿಗೆ ವಿಸ್ತರಣೆ: ಸದ್ಯ ಹಲಗಲಿ ಗ್ರಾಮದಲ್ಲಿಪ್ರಯೋಗಾತ್ಮಕವಾಗಿ ಕೈಗೊಂಡಿದ್ದ ನೀರಿನ ಯೋಜನೆಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ತಾಲೂಕಿನ41 ಹಳ್ಳಿಗಳಿಗೆ ಕೇಂದ್ರ ಸರ್ಕಾರದ ಜೀವ ಜಲ ಮಿಷನ್‌ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿಗ್ರಾಮಗಳಿಗೆ ನಿರಂತರ ನೀರು ಯೋಜನೆ ಜಾರಿಗೆತರಲಾಗುತ್ತಿದೆ.

ಹಲಗಲಿ ಗ್ರಾಮದಲ್ಲಿನ 24×7ನೀರಿನ ಪೂರೈಕೆಯಿಂದಗ್ರಾಮದ ಜನರಿಗೆ ಹೆಚ್ಚುಅನುಕೂಲವಾಗಿದೆ. ಅದೇಮಾದರಿಯಲ್ಲಿ ಜೀವ ಜಲಮಿಷನ್‌ ಯೋಜನೆಯಡಿತಾಲೂಕಿನ 41 ಗ್ರಾಮ ಪಂಚಾಯಿತಿಗಳಿಗೆ ನೀರಿನವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರಿಗೆನಿರಂತರ ನೀರೊದಗಿಸುವುದೇ ನಮ್ಮ ಮುಖ್ಯಉದ್ದೇಶ.

ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.