ಕುಂಚಿಟಿಗ ಮಠದ ಸಂಸ್ಕೃತ ಶಾಲೆಗೆ ಮಿನಿಬಸ್‌ ದಾನ

Team Udayavani, Feb 4, 2021, 4:36 PM IST

ಕುಂಚಿಟಿಗ ಮಠದ ಸಂಸ್ಕೃತ ಶಾಲೆಗೆ ಮಿನಿಬಸ್‌ ದಾನ

ಮಧುಗಿರಿ: ಶ್ರೀಕ್ಷೇತ್ರ ಮಠದಿಂದ ಆರಂಭವಾಗಿರುವ ಸಂಸ್ಕೃತ ಪಾಠಶಾಲೆಯ ಅಗತ್ಯಕ್ಕೆ ನೆರವಾಗಲು ಹಾಲಪ್ಪ ಪ್ರತಿಷ್ಠಾನವು ಮುಂದಾಗಿದ್ದು, ಮಠದ ಶಾಲೆಯ ಮಕ್ಕಳ ಸಂಚಾರಕ್ಕಾಗಿ ಮಿನಿಬಸ್‌ ದಾನವಾಗಿ ನೀಡಿ ಸಮಾಜದ ಋಣ ತೀರಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಹಾಲಪ್ಪ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿನಿಬಸ್‌ ಸ್ವೀಕಾರ ಮಾಡಿ ಮಾತನಾಡಿದ ಶ್ರೀಗಳು, ದೇವರು ಮನುಷ್ಯನಿಗೆ ಎಲ್ಲವನ್ನೂ ಕೊಡುತ್ತಾನೆ. ಆದರೆ ದಾನ ನೀಡುವ ಮನಸ್ಸು ಮಾತ್ರ ಕೆಲವರಿಗೆ ಕೊಡುತ್ತಾನೆ. ಆ ನಿಟ್ಟಿನಲ್ಲಿ ಮುರಳೀಧರ ಹಾಲಪ್ಪನವರು ನಿಜಕ್ಕೂ ಯುವಶಕ್ತಿಗೆ ಮಾದರಿಯಾಗಿದ್ದಾರೆ. ಜಾತಿಭೇದವಿಲ್ಲ ದೆ ಮಠದಲ್ಲಿ ಮಕ್ಕಳಿಗೆ ಉಚಿತವಾಗಿ ಊಟ, ಬಟ್ಟೆ ಹಾಗೂ ಶಿಕ್ಷಣವನ್ನು ನೀಡುತ್ತಿದ್ದು, ಮೆಡಿಕಲ್‌ ವರೆಗೂ ಓದಲು ಇಷ್ಟಪಟ್ಟರೆ ಮಠದಿಂದ ವಿದ್ಯಾ  ಭ್ಯಾಸ ಮಾಡಿಸಲಾಗುವುದು. ಬಡ ಕುಟುಂಬದ ಮಕ್ಕಳು ಎಷ್ಟಿದ್ದರೂ ಮಠಕ್ಕೆ ತಂದುಬಿಡಿ ಸಧೃಡ ದೇಶದ ಉತ್ತಮ ಪ್ರಜೆಗಳಾಗಿ ನಿಮ್ಮ ಮಡಿಲಿಗೆ ಕೊಡುತ್ತೇವೆ. ಮಕ್ಕಳಿಗೆ ಕೇವಲ ಪುಸ್ತಕದ ಶಿಕ್ಷಣ ನೀಡಿದರೆ ಸಾಲದು. ಸಂಸ್ಕೃತಿಯನ್ನು ನೀಡಬೇಕು ಇದಕ್ಕಾಗಿ ಸಂಸ್ಕೃತ ಪಾಠ ಬಹುಮುಖ್ಯ ಎಂದರು.

ಇಂತಹ ಕಾರ್ಯದಲ್ಲಿ ಡಾ.ಹಾಲಪ್ಪ ಕುಟುಂಬವು ಸಮಾಜದ ಆಸ್ತಿಯಾಗಿದ್ದು, ಶ್ರೀಮಠವು ಸದಾ ಅವರ ಅಭಿವೃದ್ದಿ ಬಯಸುತ್ತದೆ. ಸರ್ಕಾರಕ್ಕೆ ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡುವಂತೆ ಸಿಎಂ ರವರಿಗೆ ಮನವಿ ಸಲ್ಲಿಸಿದ್ದು, ಈ ಹೋರಾಟದಲ್ಲಿ ಭಕ್ತರೊಂದಿಗೆ ಮುಖ್ಯ ಭೂಮಿಕೆ ನಿರ್ಮಿಸಲು ಶ್ರೀಮಠ ಸಿದ್ದವಾಗಿದೆ ಎಂದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿದರೂ ಆಚಾರ ಹಾಗೂ ಸಂಸ್ಕೃತವಿಲ್ಲದ ವಿದ್ಯೆ ಕನಿಷ್ಠದ್ದು. ಇಂತಹ ಸಂಸ್ಕೃತ ಶಾಲೆಗಳು ಉತ್ತರ ಕರ್ನಾಟಕ, ಮೈಸೂರು ಭಾಗದಲ್ಲಿದ್ದು, ತುಮಕೂರು ಜಿಲ್ಲೆಯಲ್ಲಿ ಶ್ರೀಮಠದಿಂದ ಆರಂಭಿಸಿರುವುದು ಸಂತಸ ಸಂಗತಿ ಎಂದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ರಾಮಕೃಷ್ಣ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಶಂಕರನಾರಾಯಣ, ಸದಸ್ಯರಾದ ಗಂಗರಾಜು, ನಾರಾಯಣ್‌, ಕುಂಚಿಟಿಗ ಒಕ್ಕಲಿಗ ಸಂಘದ ಅಧ್ಯಕ್ಷ ರಾಜಶೇಖರ್‌, ಕಾರ್ಯದರ್ಶಿ ಉಮೇಶ್‌, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಶ್ರೀನಿವಾಸ್‌, ರೋಟರಿ ಅಧ್ಯಕ್ಷ ಶಿವಲಿಂಗಪ್ಪ, ಉಪಾಧ್ಯಕ್ಷ ಕರಿಯಣ್ಣ, ಧಾರ್ಮಿಕ ಮುಖಂಡರಾದ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಎಂ.ಎನ್‌ .ನರಸಿಂಹಮೂರ್ತಿ, ಬಿಜವರ ಶ್ರೀನಿವಾಸ್‌, ಜಗದೀಶ್‌, ಧನಪಾಲ್‌, ಸಿಸ್ಟೆಲ್‌ ಮಂಜುನಾಥ್‌, ನಾಗಭೂಷಣ್‌, ಶಿವರಾಮಯ್ಯ ಇತರರಿದ್ದರು.

ಟಾಪ್ ನ್ಯೂಸ್

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.