ಕಾಡಾನೆ ಹಿಡಿಯಲು ಕಾರ್ಯಾಚರಣೆ ಶುರು
Team Udayavani, Feb 4, 2021, 9:25 PM IST
ಶಿವಮೊಗ್ಗ: ಭದ್ರಾ ಅಭಯಾರಣ್ಯದಿಂದ ಬಂದು ಉಂಬ್ಳೆಬೈಲು ಭಾಗದಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಬುಧವಾರದಿಂದ ಕಾರ್ಯಾಚರಣೆ ಆರಂಭವಾಗಿದೆ. ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಬಾಲಣ್ಣ, ಸೋಮಣ್ಣ, ಸಾಗರ್ ಆನೆಗಳ ಜತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಒಂದು ಕಾಲದಲ್ಲಿ ಕಾಡಾನೆಗಳಾಗಿದ್ದು, ಈಗ ಪಳಗಿರುವ ಆನೆಗಳು ಈ ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಹಾಸನದ ಕಾಡಿನಲ್ಲಿ ಸೋಮಣ್ಣ, ಬಾಲಣ್ಣ, ನಾಗಣ್ಣ ಹೆಸರಿನ ಆನೆಗಳನ್ನು ಸೆರೆಹಿಡಿಯಲಾಗಿತ್ತು. ಅವುಗಳನ್ನು ಅಲ್ಲಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗಿತ್ತು. ಅನುಭವಿ ಸಿಬ್ಬಂದಿ ಕೈಯಲ್ಲಿ ಪಳಗಿರುವ ಈ ಆನೆಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.
ಇದನ್ನೂ ಓದಿ :ನಾನು ಈಗಲೂ ರೈತರ ಪರ; ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ: ಗ್ರೇಟಾ ಥನ್ಬರ್ಗ್
ಜತೆಗೆ ಆಕರ್ಷಕ ಮೈಕಟ್ಟಿನ ಸಾಗರ್ ಆನೆಯೂ ಭಾಗಿಯಾಗಿದೆ. ಐದಾರು ವರ್ಷಗಳಿಂದ ಒಂಟಿ ಸಲಗ ಉಂಬ್ಳೆಬೈಲು, ಸಾರಿಗೆರೆ, ಕೈದೊಟ್ಲು, ಹುರುಳಿಹಳ್ಳಿ, ತೋಟದಕೆರೆ, ಯರಗನಾಳ್, ಹಾಲ್ಲಕ್ಕವಳ್ಳಿ ಮುಂತಾದ ಕಡೆ ಓಡಾಡಿಕೊಂಡಿತ್ತು. ಈಗ ಅದರೊಂದಿಗೆ ಇನ್ನೂ ಎರಡೂ¾ರು ಆನೆಗಳು ಸೇರಿಕೊಂಡು ನಿರಂತರವಾಗಿ ಬೆಳೆ ಹಾಳು ಮಾಡುತ್ತಿವೆ. ಇವುಗಳ ಉಪಟಳಕ್ಕೆ ಹಗಲುರಾತ್ರಿ ಎನ್ನದೆ ಬೆಳೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಸರಕಾರ ಆನೆಗಳ ಹಿಡಿಯಲು ಅವಕಾಶ ಕೊಟ್ಟಿದ್ದು, ಕಾರ್ಯಾಚರಣೆ ಯಶಸ್ವಿಯಾಗುವುದೇ ಕಾದು ನೋಡಬೇಕಿದೆ. ವನ್ಯಜೀವಿ ವೈದ್ಯ ವಿನಯ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಉಂಬ್ಳೆಬೈಲು ವಲಯ ರೇಂಜರ್ ಮಂಜುನಾಥ್, ಉಪ ವಲಯ ಅ ಧಿಕಾರಿ ಕರೀಂಗಿಡ್ ಸ್ವಾಮಿ ಬಿಡಾರದ ಅನುಭವಿ ಸಿಬ್ಬಂದಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.