ಸೂಕಿ ಯಶೋಗಾಥೆ; ಮ್ಯಾನ್ಮಾರ್ ಪ್ರಜಾಪ್ರಭುತ್ವದ ಐಕಾನ್, ರಾಜಕೀಯ ಕೈದಿ ಟು ನಾಯಕಿ

ವಿರೋಧ ಪಕ್ಷದ ಸಾರಥ್ಯದೊಂದಿಗೆ ಸಂಸತ್ತು ಪ್ರವೇಶಿಸಿದ ಸೂಕಿ

ಶ್ರೀರಾಜ್ ವಕ್ವಾಡಿ, Feb 5, 2021, 6:35 PM IST

Article on aung san suu kyi

ಮ್ಯಾನ್ಮಾರ್: ಆಂಗ್ ಸಾನ್ ಸೂಕಿ ಹೆಸರು ಕೇಳದವರೇ ಇಲ್ಲ. ಬರ್ಮಾ(ಈಗಿನ ಮ್ಯಾನ್ಮಾರ್) ದೇಶದ ವಿರೋಧ ಪಕ್ಷದ ನಾಯಕಿ. ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಮುಖ್ಯಸ್ಥೆ ಹಾಗೂ ಪ್ರಧಾನ ಕಾರ್ಯದರ್ಶಿ. ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರಜಾಪ್ರಭುತ್ವ ಸ್ಥಾಪಿಸಬೇಕು ಎಂಬ ಹೋರಾಟದ ಮೂಲಕವೇ ವಿಶ್ವದಾದ್ಯಂತ ಹೆಸರು ಗಳಿಸಿದಾಕೆ. ಆ ಹೋರಾಟಕ್ಕಾಗಿ ಸೂಕಿಗೆ ನೊಬೆಲ್ ಪ್ರಶಸ್ತಿಯೂ ಲಭಿಸಿತ್ತು.

ಸೂಕಿ, ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದರು. ಪತ್ರಿಕೆ,ಟಿವಿ ಮಾಧ್ಯಮಗಳಲ್ಲಿ ಈ ಹೋರಾಟಗಾರ್ತಿಯ ವಿಷಯ ಅಗ್ರ ಸುದ್ದಿಯಾಗಿ ಬಿತ್ತರಿಸಿತ್ತು. ಅದು ಆಕೆಯ ಹೋರಾಟದ ನಡೆಯ ಪ್ರಾಬಲ್ಯ.  ಸದ್ಯ ಸೂಕಿ ಮಿಲಿಟರಿ ಬಂಧನದಲ್ಲಿದ್ದಾರೆ. ಈ ಬಂಧನ, ಸೆರೆಮನೆವಾಸಗಳೆಲ್ಲಾ ಸೂಕಿಗೆ ಹೊಸತೇನಲ್ಲ. 1990ರ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ನೇತೃತ್ವದ ಪಕ್ಷ ಪಾರ್ಲಿಮೆಂಟಿನಲ್ಲಿ ಭರ್ಜರಿ ಗೆಲವು ಸಾಧಿಸಿತ್ತಾದರೂ 1989ರಿಂದಲೇ ಮಿಲಿಟರಿ ಬಂಧನದಲ್ಲಿದ್ದ ಸೂಕಿಗೆ ಅಧಿಕಾರ ಒಪ್ಪಿಸದೇ ಚುನಾವಣೆಯ ಫಲಿತಾಂಶವನ್ನು ಬೃಹತ್ ಶೂನ್ಯವನ್ನಾಗಿಸಿದ್ದು, ಅಲ್ಲಿನ ಜುಂಟಾ ಮಿಲಿಟರಿ ಆಡಳಿತದ ಪವರ್ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ.

ಓದಿ :ಗಲ್ಲು ಆಗುವ ವರೆಗೆ ವಿರಮಿಸುವುದಿಲ್ಲ: ಬೊಮ್ಮಾಯಿ

ಮಿಲಿಟರಿ ಬಂಧನದಲ್ಲಿರುವಾಗಲೇ ಸೂಕಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನೊಳಗೊಂಡು ಅನೇಕ ಪ್ರಶಸ್ತಿಗಳು ಅವರ ಪಾಲಾಗಿದ್ದವು. ಅದು ಸೂಕಿಯ ಹೋರಾಟದ ಸಾಧನೆಯ ಬಗ್ಗೆ ನಮಗೆ ತಿಳಿಸುತ್ತದೆ.

ಹೋರಾಟದ ನಡೆ ಸೂಕಿಗೊಲಿದಿದ್ದು, ತಂದೆಯಿಂದ..!

ಬರ್ಮಾ ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಸೂಕಿಯವರ ತಂದೆಯ ಪಾತ್ರ ಬಹುದೊಡ್ಡದಿದೆ. 1947ರಲ್ಲಿ ಬ್ರಿಟಿಷರ ಕಪಿ ಮುಷ್ಟಿಯಿಂದ ಬರ್ಮಾ  ಸ್ವತಂತ್ರವಾಗುವುದಕ್ಕೆ ಮೂಲ ಕಾರಣ ಆಂಗ್ ಸಾನ್, ಹಾಗಾಗಿ ಆಂಗ್ ಸಾನ್ ಅವರನ್ನು ಆಧುನಿಕ ಬರ್ಮಾದ ಪಿತಾಮಹ ಎಂದು ಕೂಡ ಕರೆಯುತ್ತಾರೆ.  ಸ್ವತಂತ್ರ ಗಳಿಸಿಕೊಟ್ಟ ಕೆಲವೇ ಕೆಲವು ದಿನಗಳಲ್ಲಿ ಆಂಗ್ ಸಾನ್ ಹತ್ಯೆಗೀಡಾಗುತ್ತಾರೆ.

ಲಂಡನ್ ನಲ್ಲಿ ಪಿ ಎಚ್ ಡಿ ಮುಗಿಸಿ ಸಿಮ್ಲಾ ದಲ್ಲಿ ಎರಡು ವರ್ಷ ವಾಸದ ನಂತರ ಬರ್ಮಾ ಸರ್ಕಾರದಲ್ಲಿ ಸೂಕಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದರು. 1988ರಲ್ಲಿ ತಮ್ಮ ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಬರ್ಮಾಗೆ ಮರಳಿದರು. ಪ್ರಜಾಸತ್ತೆಯ ಪರವಾಗಿ ಚಳವಳಿಗೆ ಇಳಿದರು. ಚಳವಳಿಗಳ ಮುಂದಾಳತ್ವವನ್ನು ವಹಿಸಿಕೊಂಡರು. ಇವರ ಚಳವಳಿಯ ತೀವ್ರತೆ ಬರ್ಮಾದ ಮಿಲಿಟರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು. ಅಲ್ಲಿನ ಮಿಲಿಟರಿ ಸರ್ಕಾರ ಇವರ ವಿರುದ್ಧ ವೈಯಕ್ತಿಕವಾಗಿ ಹಗೆ ತೀರಿಸಿಕೊಳ್ಳುವುದಕ್ಕೆ ಆರಂಭಿಸಿತ್ತು.

ಸೂಕಿ ಅವರ ಪತಿಗೆ ಅನಾರೋಗ್ಯ ಇದ್ದಾಗಲೂ, ಸೂಕಿಯವರಿಗೆ ಬರ್ಮಾದೊಳಗೆ ಪ್ರವೇಶಿಸುವುದಕ್ಕೆ ಬಿಟ್ಟಿರಲಿಲ್ಲ. ಅವರು ಪತಿ 1999ರಲ್ಲಿ ಮೃತರಾದರು. 1989ರಲ್ಲಿ ಗೃಹಬಂಧನದಲ್ಲಿ ಇರಿಸಿದ್ದಾಗಲಿಂದ ಕೇವಲ ಐದೇ ಐದು ಭಾರಿ ಸೂಕಿ ತಮ್ಮ ಪತಿಯನ್ನು ಭೇಟಿ ಮಾಡಿದ್ದರು ಅಂದರೇ ಆಶ್ಚರ್ಯ ಪಡಬೇಕಾಗಿಲ್ಲ. ಅಲ್ಲದೇ ಮಿಲಿಟರಿ ಸರ್ಕಾರ ಸೂಕಿಗೆ ಮಾನಸಿಕ ಹಿಂಸೆ ನೀಡಿರುವುದು ಇದರಿಂದ ಜಗಜ್ಜಾಹೀರಾಗಿದೆ.

ಓದಿ :ಭಗವಾನ್ ಮುಖಕ್ಕೆ ಮಸಿ ಬಳಿದಿದ್ದು ಘಟನೆ ಅಲ್ಲ, ಪ್ರತಿಭಟನೆ: ಪೇಜಾವರ ಶ್ರೀ

ಬರ್ಮಾ ಸರ್ಕಾರ ಎಷ್ಟು ಕುತಂತ್ರವನ್ನು ಮಾಡಿದೆ ಎಂದರೇ, 2010ರಲ್ಲಿ ತನ್ನ ಧೋರಣೆಗೆ ಅನುಸಾರವಾಗಿ ಚುನಾವಣೆಯನ್ನು ಮುಗಿಸಿಕೊಂಡು, ಚುನಾವಣೆ ಮುಗಿದ ಕೆಲವು ದಿನಗಳ ನಂತರ, ಅಂದರೇ, ನವೆಂಬರ್ 12 2010ರಂದು ಸೂಕಿಯನ್ನು ಬಂಧನದಿಂದ ಬಿಡುಗಡೆಗೊಳಿಸಿತು.

ವಿರೋಧ ಪಕ್ಷದ ಸಾರಥ್ಯದೊಂದಿಗೆ ಸಂಸತ್ತು ಪ್ರವೇಶಿಸಿದ ಸೂಕಿ

2012 ರಲ್ಲಿ ಉಪ ಚುನಾವಣೆ ನಡೆದಿತ್ತು.  43 ಸ್ಥಾನಗಳಲ್ಲಿ 42 ಸ್ಥಾನಗಳನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ವಿರೋಧ ಪಕ್ಷವಾಗಿ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಬರ್ಮಾದ ಸಂಸತ್ತನ್ನು ಪ್ರವೇಶಿಸಿತು. ಅದಾಗ್ಯೂ, ಆಗಿನ ಮಿಲಿಟರಿ ಸರ್ಕಾರ ಸೂಕಿ ಪಕ್ಷದ ವಿರುದ್ಧ ಧಕ್ಕೆಯುಂಟು ಮಾಡುವ ಕೆಲಸಕ್ಕೆ ಮುಂದಾಯಿತು. ಆದರೂ, ಅಂದು ಬಂದ ಬಹುಮತ ಮಿಲಿಟರಿ ಸರ್ಕಾರಕ್ಕೆ ತೀವ್ರ ಮುಖಭಂಗವಾದದ್ದಂತೂ ಅಪ್ಪಟ ಸತ್ಯ. 1990ರ ಚುನಾವಣೆಯಂತೆ ಮಾಡುವುದಕ್ಕಾಗದೇ,  ಬೇರೆ ದಾರಿಯಿಲ್ಲದೇ ಸೂಕಿಯ ಪಕ್ಷದ ಗೆಲುವನ್ನು ತಲೆ ಬಗ್ಗಿಸಿಕೊಂಡೇ ಒಪ್ಪಿಕೊಂಡಿತು.

2015ರಲ್ಲಿ ಸೂಕಿಯವರ ಪಕ್ಷ ಒಕ್ಕೂಟದ ಅಸೆಂಬ್ಲಿಯಲ್ಲಿ ಪ್ರಚಂಡ ಗೆಲುವನ್ನು ಸಾಧಿಸಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಬೇಕಾದ 67% ಸೂಪರ್ ಮೆಜಾರಿಟಿಗಿಂತಲೂ ಹೆಚ್ಚು ಬಹುಮತದಿಂದ ಸೂಕಿ ಅವರ ಪಕ್ಷ ಗೆಲುವು ಸಾಧಿಸಿತ್ತು. ಸಂವಿಧಾನದ ಷರತ್ತಿನಿಂದಾಗಿ ಅವರ ದಿವಂಗತ ಪತಿ ಹಾಗೂ ಮಕ್ಕಳು ವಿದೇಶಿ ಪ್ರಜೆಗಳಾಗಿರುವುದರಿಂದ ಸೂಕಿಯವರು ಅಧ್ಯಕ್ಷರಾಗುವುದನ್ನು ನಿಷೇಧಿಸಲಾಗಿತ್ತು. ಆದರೇ, ಆಗ ಮ್ಯಾನ್ಮಾರ್ ನ ರಾಜ್ಯ ಸಲಹೆಗಾರರಾಗಿ ತೃಪ್ತಿ ಪಡಬೇಕಾಯಿತು. ಈ ಜವಾಬ್ದಾರಿ ಪ್ರಧಾನ ಮಂತ್ರಿ ಅಥವಾ ಆಡಳಿತದ ಮುಖ್ಯಸ್ಥರ ಸ್ಥಾನಕ್ಕೆ ಹೋಲುವ ಹುದ್ದೆಯಾಗಿದೆ.

1991 ರಲ್ಲಿ ಸೂಕಿ ಬಂಧನದಲ್ಲಿದ್ದಾಗ ಘೋಷಿಸಿಲಾಗಿದ್ದ ನೋಬೆಲ್ ಪಾರಿತೋಷಕವನ್ನು 2021ರಲ್ಲಿ ಸ್ವೀಕರಿಸಿದರು. ಸೂಕಿಯ ಜನಪ್ರಿಯತೆ ಜಗದಗಲ ಮತ್ತೆ ವಿಸ್ತರಿಸಿತು.

ಓದಿ : ಮತ್ತೆ ಶುರುವಾಯ್ತು ತೋತಾಪುರಿ: ಮೈಸೂರಿನಲ್ಲಿ ಚಿತ್ರೀಕರಣ

ಅದು 2016 ರ ಕೊನೆಯ ಘಟ್ಟ

“ರೊಹಿಂಗ್ಯಾ” ಹೆಸರು ಕೇಳಿದ್ರೇ ಸಾವಿರಾರು ರೊಹಿಂಗ್ಯಾಗಳು ಹತ್ಯೆಯಾಗಿ ರಕ್ತದ ಕೋಡಿಯಲ್ಲಿ ಬಿದ್ದ ಚಿತ್ರಣ ನಮ್ಮ ಕಣ್ಮುಂದೆ ಬರುತ್ತದೆ. ಆ ಘಟನೆ ಇಡೀ ಜಗತ್ತನ್ನು ಮಯಾನ್ಮಾರ್ ನತ್ತ ತಿರುಗಿ ನೋಡುವ ಹಾಗೆ ಮಾಡಿತ್ತು. ರೊಹಿಂಗ್ಯಾ ಮುಸ್ಲೀಮರ ಮೇಲೆ ಭೀಕರ ದಾಳಿ ಆಯ್ತು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲೇ ಸಾವಿರಾರು ರೊಹಿಂಗ್ಯಾಗಳು ಶವವಾಗಿ ಬಿದ್ದರು. ಅದು ಹೇಗಾಯ್ತು..? ಯಾಕಾಗಿ ಆಯ್ತು..? ಯಾರಿಂದ ಮಾಡಲ್ಪಟ್ಟಿತು..? ಎಂಬುವುದಕ್ಕೆ ಇದುವರೆಗೂ ಸ್ಪಷ್ಟ ಉತ್ತರ ಲಭ್ಯವಿಲ್ಲ.

2020ರಲ್ಲಿ ಮತ್ತೆ ಮಿಲಿಟರಿ ಸರ್ಕಾರ ..!

ಮ್ಯಾನ್ಮಾರ್ ನಲ್ಲಿ ನಡೆದ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಸೂಕಿ ಪಕ್ಷ ಸೋಲುಣ್ಣಬೇಕಾಯಿತು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಕೂಗು ಕೂಡ ಕೇಳಿಬಂತು. ಚುನಾವಣಾ ಆಯೋಗ ಅಕ್ರಮವನ್ನು ಪತ್ತೆ ಹಚ್ಚುವಲ್ಲಿ ವಿಫಲವಾಯ್ತು ಎಂಬ ಆರೋಪಗಳು ಕೇಳಿ ಬಂದವು. ಮಿಲಿಟರಿ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಅದಲ್ಲದೇ, ಎಲ್ಲಾ ಕಮ್ಯುನಿಕೇಶನ್ ನೆಟ್ ವರ್ಕ್ ಗಳಿಗೆ ನಿರ್ಬಂಧ ಹೇರಲಾಯಿತು. ಇವೆಲ್ಲವೂ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟವು.

ಫೆ. 1 ಸೂಕಿ ಸೇರಿ ಹಲವು ನಾಯಕರನ್ನು ಬಂಧಿಸಿದ ಮಿಲಿಟರಿ ಸರ್ಕಾರ

75 ವರ್ಷದ ಸೂಕಿ ಸೇರಿದಂತೆ ಹಲವು ನಾಯಕರನ್ನು ಫೆಬ್ರವರಿ 1ರಂದು ಮಿಲಿಟರಿ ಸರ್ಕಾರ ಗೃಹಬಂಧನಕ್ಕೆ ಹಾಕಿತು. ಮಿಲಿಟರಿ ಸರ್ಕಾರದ ಮುಂದೆ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡಿದ ಸೂಕಿ ಮಂಡಿಯೂರಲೇ ಬೇಕಾಯಿತು. ಮ್ಯಾನ್ಮಾರ್ ನ ಈ ಹಠಾತ್ ಬೆಳವಣಿಗೆಯನ್ನು ಕಂಡು ಭಾರತ, ಅಮೇರಿಕಾ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿದವು.

ಮಿಲಿಟರಿ ಸರ್ಕಾರಕ್ಕೆ ಚೀನಾ ಬೆಂಬಲ..!

ಗಡಿ ಖ್ಯಾತೆ ತೆಗೆಯುವುದರಲ್ಲಿ ಚೀನಾ ಎತ್ತಿದ ಕೈ. ಮ್ಯಾನ್ಮಾರ್ ಚೀನಾದೊಂದಿಗೆ ಸರಿಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಗಡಿ ಭಾಗವನ್ನು ಹಂಚಿಕೊಂಡಿದೆ. ಕಮ್ಯೂನಿಷ್ಟ್ ಚೀನಾದ ಕುತಂತ್ರ ಮ್ಯಾನ್ಮಾರ್ ನ ಮಿಲಿಟರಿ ಸರ್ಕಾರಕಕೆ ಇದೆ ಎಂದು ಹೇಳಲಾಗುತ್ತಿದೆ. ಮ್ಯಾನ್ಮಾರ್ ನ ದಂಗೆಗೆ ಕುತಂತ್ರಿ ಚೀನಾದ ಕೈವಾಡ ಇದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.

ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ

 

ಓದಿ : ನೊಬೆಲ್ ಯಾಕೆ, ಸಂಚಿನ ದಾಖಲೆ ಕೊಟ್ಟ ಗ್ರೆಟಾಗೆ ಮಕ್ಕಳ ಶೌರ್ಯ ಪ್ರಶಸ್ತಿ ಕೊಡಬೇಕು: ಲೇಖಿ ಕಿಡಿ

ಟಾಪ್ ನ್ಯೂಸ್

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.