ತೆಲಂಗಾಣದ 28 ಕಾರ್ಮಿಕರ ರಕ್ಷಣೆ
Team Udayavani, Feb 5, 2021, 7:52 PM IST
ಗದಗ: ಜೀತ ಪದ್ಧತಿ ಕಾನೂನು ಬಾಹಿರ ಹಾಗೂ ಮಾನವೀಯತೆಗೆ ವಿರುದ್ಧವಾದದ್ದು ಎಂಬುದು ದಶಕಗಳ ಹಿಂದೆಯೇ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಈ ಅನಿಷ್ಠ ಪದ್ಧತಿ ಗದಗಿನಲ್ಲಿ ಇತ್ತೀಚಿನವರೆಗೂ ಜೀವಂತವಾಗಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಸಮೀಪದ ಮಲ್ಲಸಮುದ್ರದ ಜಿಮ್ಸ್ ಆಸ್ಪತ್ರೆಗೆ ಹೊಂದಿ ಕೊಂಡು ಮತ್ತೂಂದು ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡದ ಗುತ್ತಿಗೆದಾರನೊಬ್ಬ ಹತ್ತಾರು ಜನ ಕಾರ್ಮಿಕರನ್ನು ಜೀತದಾಳುಗಳನ್ನಾಗಿಸಿಕೊಂಡಿದ್ದ. ಈ ಕುರಿತು ದೂರು ಸ್ವೀಕರಿಸುತ್ತಿದ್ದಂತೆ ಗದಗ ಉಪವಿಭಾಗ ಅಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಎರಡು ದಿನಗಳ ಹಿಂದೆಯೇ ತೆಲಂಗಾಣ ಮೂಲದ 28 ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ :ನರೇಗಾ ತಾರತಮ್ಯ: ಗ್ರಾಪಂಗೆ ಸ್ಥಳೀಯರ ಮುತ್ತಿಗೆ
ಅವರಿಗೆ ನಗರದ ವಾಲ್ಮೀಕಿ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ, ಬುಧವಾರ ಸಾರಿಗೆ ಬಸ್ ಮೂಲಕ ತೆಲಂಗಾಣಕ್ಕೆ ರವಾನಿಸಿದ್ದಾರೆ. ಜೊತೆಗೆ ಗುತ್ತಿಗೆದಾರ ವಿರುದ್ಧ ಜೀತ ಪದ್ಧತಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.