ಎಸ್ಪಿ ಆಪ್ತ ಎಂದು ಹೇಳಿಕೊಂಡು ಹಣ ಕೇಳಿದ ಭೂಪ: 8.50 ಲಕ್ಷ ಕೊಟ್ಟ ಪಿಎಸ್ಐ!
Team Udayavani, Feb 5, 2021, 10:30 PM IST
ಕಲಬುರಗಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮಗೆ ಆಪ್ತರು ಎಂದು ಹೇಳಿಕೊಂಡು ಹಣ ಕೇಳಿದ ವ್ಯಕ್ತಿಯೋರ್ವನಿಗೆ ಪಿಎಸ್ಐ ಬರೋಬ್ಬರಿ 8.50 ಲಕ್ಷ ರೂ. ಹಣ ಕೊಟ್ಟಿರುವ ಪ್ರಕರಣ ಬಹಿರಂಗವಾಗಿದೆ. ಇದೀಗ ಹಣ ಪಡೆದ ಆರೋಪಿಯನ್ನು ಬಂಧಿಸಲಾಗಿದೆ. ಆದರೆ, ಒಬ್ಬ ಪೊಲೀಸ್ ಇಷ್ಟೊಂದು ಹಣವನ್ನು ಕೇಳಿದ ತಕ್ಷಣವೇ ನೀಡಿದ್ದು ಹೇಗೆ ಎಂಬ ಯಕ್ಷ ಪ್ರಶ್ನೆ ಮೂಡಿದೆ.
ಜೇವರ್ಗಿಯಲ್ಲಿ ಪಿಎಸ್‌ಐ ಆಗಿದ್ದ ಮಂಜುನಾಥ ಹೂಗಾರ ಈ ಹಣ ನೀಡಿರುವ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರು ಇತ್ತೀಚೆಗೆ ತಾಲೂಕಿನ ಮೂರು ವರ್ಷದ ಬಾಲಕಿ ಸಾವಿನ ಪ್ರಕರಣದಲ್ಲಿ ಅಮಾನತುಗೊಂಡಿದ್ದರು. ಸದ್ಯ ಜಿಲ್ಲಾ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದೇ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಖಾಸಿಂಪಟೇಲ್ ಬಾಬುಪಟೇಲ್ ಎಂಬಾತನೇ ಪೊಲೀಸ್ ಅಧಿಕಾರಿಗೆ ಯಾಮಾರಿಸಿ ಹಣ ಪಡೆದ ಆರೋಪಿ. ಪಿಎಸ್‌ಐ ಆಗಿದ್ದ ಮಂಜುನಾಥ ಹೂಗಾರ ನೀಡಿದ ದೂರಿನ ಮೇರೆಗೆ
ಆರೋಪಿಯನ್ನು ನಗರದ ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿ, ಎರಡು ಲಕ್ಷ ರೂ. ನಗದು, ಫಾರ್ಚೂನರ್ ಕಾರು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತ ಆರೋಪಿಯು ‘ಜನಶಕ್ತಿ’ ಯ್ಯೂಟೂಬ್ ಚಾನೆಲ್ ವರದಿಗಾರ ಎಂದು ಹೇಳಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕಮಲಾ ಹ್ಯಾರಿಸ್ ಅಧ್ಯಕ್ಷತೆಯಲ್ಲಿ ಕೋವಿಡ್ ಬಜೆಟ್‌ಗೆ ಅಸ್ತು
ಏನಿದು ಪ್ರಕರಣ: ಕಳೆದ ನವೆಂಬರ್ ನಲ್ಲಿ ಜೇವರ್ಗಿಯಲ್ಲಿ ಪಿಎಸ್‌ಐ ಆಗಿದ್ದ ಮಂಜುನಾಥ ಹೂಗಾರ ಬಳಿಗೆ ಆರೋಪಿ ಖಾಸಿಂ ಪಟೇಲ್ ತೆರಳಿದ್ದ. ಎಸ್ಪಿ ಡಾ.ಸಿಮಿ ಮರಿಯಂ ಜಾರ್ಜ್ ಅವರೊಂದಿಗೆ ಇರುವ ಭಾವಚಿತ್ರ ಸೇರಿದಂತೆ ಕೆಲ ಮೇಲಾಧಿಕಾರಿಗಳು, ರಾಜಕಾರಣಿಗಳ ಜತೆಗಿರುವ ಫೋಟೋಗಳನ್ನು ತೋರಿಸಿದ್ದ ಖಾಸಿಂ ಪಟೇಲ್, ಎಸ್ಪಿ ಮೇಡಂ ತುಂಬಾ ಬೇಕಾದವರು ಎಂದು ಮಂಜುನಾಥ ಹೂಗಾರಗೆ ನಂಬಿಸಿದ್ದ.
ಅಲ್ಲದೇ, ವಾಟ್ಸಪ್ ನಲ್ಲಿ ಮೊಬೈಲ್ ಸಂಖ್ಯೆಯೊಂದದನ್ನು ತೋರಿಸಿ ಅದಕ್ಕೆ ಎಸ್ಪಿಯವರ ಡಿಪಿ ಇಟ್ಟು ‘ಡಾ.ಎಸ್‌ಎಂಜಿ’ ಎಂದು ನಂಬರ್ ಸೇವ್ ಮಾಡಿ, ಇದು ಅವರ ವೈಯಕ್ತಿಕ ಸಂಖ್ಯೆಯಾಗಿದೆ ಹೇಳಿದ್ದ. ಈ ನಂಬರ್ ಗೆ ಮೇಸೆಜ್ ಮಾತ್ರ ಮಾಡಬೇಕು. ಕರೆ ಮಾಡಬಾರದೆಂದು ಖಾಸಿಂಪಟೇಲ್ ಆ ನಂಬರ್ ಕೊಟ್ಟು ಬಂದಿದ್ದ.
ಇದನ್ನೂ ಓದಿ:7.5 ಲಕ್ಷ ವೆಚ್ಚದಲ್ಲಿ ಮೇಕ್ ಇನ್ ಇಂಡಿಯಾ ಲಾಂಛನ
ಇದಾದ ಕೆಲ ದಿನಗಳ ನಂತರ ಖಾಸಿಂ ಪಟೇಲ್, ನನಗೆ ಕೆಲಸದ ಸಲುವಾಗಿ ತುರ್ತು ಹಣದ ಅಗತ್ಯವಿದೆ ಎಂದು ಪಿಎಸ್ಐ ಮಂಜುನಾಥ ಹೂಗಾರ ಅವರ ವಾಟ್ಸಪ್ ನಂಬರ್ ಗೆ ಮೇಸೆಜ್ ಮಾಡಿದ್ದ. ಆಗ ಇದನ್ನು ನಂಬಿ ಪಿಎಸ್ಐ ಆರೋಪಿ ಖಾಸಿಂಪಟೇಲ್‌ಗೆ ಒಮ್ಮೆ 2.50 ಲಕ್ಷ ರೂ. ಹಾಗೂ ಮತ್ತೊಮ್ಮೆ 6 ಲಕ್ಷ ರೂ. ಹೀಗೆ ಒಟ್ಟು 8.50 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಸ್ನೇಹಿತರ ಮೂಲಕ ಕಳುಹಿಸಿದ ಕೊಟ್ಟಿದ್ದ. ಇದನ್ನು ಸ್ವತಃ ತಮ್ಮ ದೂರಿನಲ್ಲಿ ಪಿಎಸ್ಐ ಮಂಜುನಾಥ ಹೂಗಾರ ಹೇಳಿದ್ದಾರೆ.
ಎಸ್ಪಿ ಬಳಿಗೆ ಹೋಗಿದ್ದ ಪಿಎಸ್ಐ: ಹಣ ನೀಡಿದ ನಂತರ ಇದೇ ಫೆ.3ರಂದು ಎಸ್ಪಿ ಅವರ ವೈಯಕ್ತಿಕ ಮೊಬೈಲ್ ನಂಬರ್ ಅಂತ ಹೇಳಿ ಖಾಸಿಂ ಪಟೇಲ್ ನೀಡಿದ್ದ ನಂಬರ್ ನಿಂದಲೇ ಪಿಎಸ್ಐಗೆ ಫೋನ್ ಬಂದಿದೆ. ಆಗ ಉರ್ದುವಿನಲ್ಲಿ ಮಾತನಾಡುವುದು, ಮಕ್ಕಳ ಅಳುವುದು ಕೇಳಿದೆ. ಇದರಿಂದ ಅನುಮಾನಗೊಂಡ ಪಿಎಸ್‌ಐ ಮಂಜುನಾಥ ಹೂಗಾರ, ಎಸ್ಪಿ ಅವರನ್ನು ಭೇಟಿ ಮಾಡಿದ್ದಾರೆ.
ಹಣ ಮತ್ತು ವಾಟ್ಸಪ್ ವಿಷಯ ಸೇರಿದಂತೆ ಈ ಹಿಂದೆ ನಡೆದ ಇಡೀ ಘಟನೆ ಬಗ್ಗೆ ಎಸ್ಪಿ ಅವರಿಗೆ ತಿಳಿಸಿದ್ದಾರೆ. ಆಗ ಆಘಾತಗೊಂಡ ಎಸ್ಪಿ ಆ ಸಂಖ್ಯೆ ನನ್ನದಲ್ಲ, ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆಗ ಪಿಎಸ್‌ಐ ಮಂಜುನಾಥ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೇವರ್ಗಿಯಲ್ಲಿ ಪಿಎಸ್‌ಐ ಆಗಿದ್ದ ವೇಳೆಯಲ್ಲಿ 8.50 ಲಕ್ಷ ರೂ. ಖಾಸಿಂಪಟೇಲ್‌ಗೆ ನೀಡಿದ್ದಾಗಿ ಮಂಜುನಾಥ ಹೂಗಾರ ದೂರು ನೀಡಿದ್ದು, ಅಷ್ಟೊಂದು ಹಣವನ್ನು ಆತನನ್ನು ನಂಬಿ ಹೇಗೆ ನೀಡಿದರು?, ಆ ಹಣ ಯಾವ ಮೂಲದಿಂದ ತಂದು ಕೊಟ್ಟರು ಹೀಗೆ ಹತ್ತಾರು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಜತೆಗೆ ಇಡೀ ಪ್ರಕರಣ ಪೊಲೀಸ್ ಇಲಾಖೆಯ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.